Monday, Jun 1 2020 | Time 02:24 Hrs(IST)
Karnataka Share

ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಪ್ರವೀಣ್‌ಸೂದ್ ಭೇಟಿ

ಬೆಂಗಳೂರು, ಮೇ 23 (ಯುಎನ್ಐ) ನಗರದ ಹೊರವಲಯದಲ್ಲಿರುವ ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಶನಿವಾರ ಭೇಟಿ ನೀಡಿದರು.
ಹೊರ ರಾಜ್ಯಗಳ ಕಾರ್ಮಿಕರನ್ನು ಊರಿಗೆ ಕಳುಹಿಸುವ ಪ್ರಕ್ರಿಯೆಯನ್ನು ಪರಿಶೀಲಿಸಿ, 100ನೇ ರೈಲಿನ ಕಾರ್ಯಾಚರಣೆಗೆ ಅವರು ಚಾಲನೆ ನೀಡಿದರು.
ವಲಸೆ ಕಾರ್ಮಿಕರೆಲ್ಲರೂ ಕಡು ಬಡವರು. ಅವರನ್ನು ಸುರಕ್ಷಿತವಾಗಿ ರೈಲಿನ ಮೂಲಕ ತಮ್ಮೂರಿಗೆ ಕಳುಹಿಸಲು ಶ್ರಮಪಡುತ್ತಿರುವ ಎಲ್ಲಾ ಸಿಬ್ಬಂದಿಗೆ ಬಡವರ ಸೇವೆ ಮಾಡಿದ ಪುಣ್ಯ ಸಿಗುತ್ತದೆ ಎಂದರು.
ವಲಸೆ ಕಾರ್ಮಿಕರು ನಮ್ಮೆಲ್ಲರ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದು ಒಂದು ವೇಳೆ ಅವರ ಸಮಸ್ಯೆಗೆ ಸ್ಪಂದಿಸದಿದ್ದರೆ ಅವರು ತಾಳ್ಮೆ ಕಳೆದುಕೊಳ್ಳುವ ಮೂಲಕ ರಸ್ತೆಗಿಳಿದು ಬಸ್ಸುಗಳ ಮೇಲೆ‌ ಕಲ್ಲು ತೂರಾಟ ಮಾಡಿ ಗಲಾಟೆ ಮಾಡುತ್ತಿದ್ದರು ಎಂದರು.
ಈಗಾಗಲೇ ಅಸಂಖ್ಯಾತ ಜನ ತಮ್ಮೂರಿಗೆ ವಾಪಸ್ಸಾಗಿದ್ದಾರೆ. ಇನ್ನು, ನಾಲ್ಕೈದು ದಿನ ಶ್ರಮ ವಹಿಸಿ ಕೆಲಸ ಮಾಡಿ ಎಂದು ಅವರು ಕರ್ತವ್ಯ ನಿರತ ಎಲ್ಲಾ ವಿಭಾಗದ ಸಿಬ್ಬಂದಿಯನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉಪಸ್ಥಿತರಿದ್ದರು.
ಯುಎನ್ಐ ಪಿಕೆ ಜಿಎಸ್ಆರ್ 2301