Monday, Aug 3 2020 | Time 23:43 Hrs(IST)
  • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
  • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
  • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
  • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
  • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
  • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
  • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
  • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
  • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
  • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
  • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
  • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
  • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
  • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
  • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
Sports Share

ಚೆಂಡು ಸ್ಟಂಪ್ಸ್ ಗೆ ಬಡೆಯುತ್ತಿದ್ದರೆ ಔಟ್ ನೀಡಬೇಕು: ಸಚಿನ್

ನವದೆಹಲಿ, ಜುಲೈ 13 (ಯುಎನ್ಐ)- ಎಲ್‌ಬಿಡಬ್ಲ್ಯೂ ವಿಷಯದಲ್ಲಿ ಡಿಆರ್‌ಎಸ್‌ ತೆಗೆದುಕೊಂಡಾಗ ಚೆಂಡು ಸ್ಟಂಪ್‌ಗೆ ಬಡಿಯುವುದನ್ನು ಕಂಡರೆ ಬ್ಯಾಟ್ಸ್‌ಮನ್‌ಗೆ ಔಟ್ ನೀಡಬೇಕು ಎಂದು ಭಾರತದ ಪ್ರಸಿದ್ಧ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಡಿಆರ್‌ಎಸ್‌ಗೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಅವರೊಂದಿಗಿನ ಸಂಭಾಷಣೆಯ ವಿಡಿಯೋವನ್ನು ಸಚಿನ್ ಟ್ವೀಟ್ ಮಾಡಿದ್ದಾರೆ.

ಭಾರತದ ಪರ 200 ಟೆಸ್ಟ್ ಪಂದ್ಯಗಳನ್ನು ಆಡಿದ ಸಚಿನ್, "ಸ್ಟಂಪ್‌ಗೆ ಎಷ್ಟು ಶೇಕಡಾ ಚೆಂಡು ಬಡಿದರೂ ಪರವಾಗಿಲ್ಲ. ಚೆಂಡು ಸ್ಟಂಪ್‌ಗೆ ಹೊಡೆಯುತ್ತಿದೆ ಎಂದು ಡಿಆರ್‌ಎಸ್ ನಲ್ಲಿ ಗೊತ್ತಾದರೆ, ಮೈದಾನದಲ್ಲಿ ನೀಡಿದ ತೀರ್ಮಾನವನ್ನು ಲೆಕ್ಕಿಸದೆ ಔಟ್ ಎಂದು ನೀಡಬೇಕು. ಕ್ರಿಕೆಟ್‌ನಲ್ಲಿ ತಂತ್ರಜ್ಞಾನವನ್ನು ಬಳಸುವ ಉದ್ದೇಶ ಇದೇ ಆಗಿದೆ. ತಂತ್ರಜ್ಞಾನ ಅಥವಾ ಮಾನವ ಎರಡೂ ಶೇಕಡಾ 100 ರಷ್ಟು ಸರಿಯಾಗಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ" ಎಂದಿದ್ದಾರೆ.

“ಡಿಆರ್‌ಎಸ್ ವಿಷಯದಲ್ಲಿ ನಾನು ಐಸಿಸಿಯೊಂದಿಗೆ ಸಂಬಂಧ ಹೊಂದಿಲ್ಲ. ಡಿಆರ್‌ಎಸ್ ನಲ್ಲಿ ಆನ್-ಫೀಲ್ಡ್ ಅಂಪೈರ್ ನಿರ್ಧಾರವನ್ನು 50 ಪ್ರತಿಶತದಷ್ಟು ಚೆಂಡು ಸ್ಟಂಪ್ ಗಳಿಗೆ ಬಡೆಯುವುದನ್ನು ನೋಡಿದಾಗ ಮಾತ್ರ ಬದಲಾಯಿಸಬಹುದು ಮತ್ತು ಇದು ಸರಿಯಲ್ಲ. ಫೀಲ್ಡ್ ಅಂಪೈರ್ ಅವರ ನಿರ್ಧಾರವನ್ನು ತೃಪ್ತಿಪಡಿಸದಿದ್ದಾಗ ಮಾತ್ರ ಆಟಗಾರರು ಪರಿಶೀಲಿಸುತ್ತಾರೆ” ಎಂದು ತಿಳಿಸಿದ್ದಾರೆ.

"ಈ ವಿಷಯವು ಮೂರನೇ ಅಂಪೈರ್‌ಗೆ ಹೋದಾಗ, ಫಲಿತಾಂಶವನ್ನು ತಂತ್ರಜ್ಞಾನದೊಂದಿಗೆ ನಿರ್ಧರಿಸಬೇಕು" ಎಂದು ಸಚಿನ್ ಹೇಳಿದರು.

ಸಚಿನ್ ತೆಂಡೂಲ್ಕರ್ ಅವರ ಸಲಹೆಯನ್ನು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಬೆಂಬಲಿಸಿದ್ದಾರೆ. "ಪಾಜಿ ನಾನು ನಿಮ್ಮ ಮಾತನ್ನು 100 ಪ್ರತಿಶತ ಒಪ್ಪುತ್ತೇನೆ" ಎಂದು ಹರ್ಭಜನ್ ಟ್ವೀಟ್ ಮಾಡಿದ್ದಾರೆ.

ಯುಎನ್ಐ ವಿಎನ್ಎಲ್ 1007