Friday, Feb 28 2020 | Time 09:35 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Entertainment Share

ಚಿತ್ರೋದ್ಯಮ ಆರಾಧಿಸುವ ಏಕೈಕ ದೇವರು .. ಹಣ; ನಾಸೀರುದ್ದೀನ್ ಷಾ

ಮುಂಬೈ, ಜ ೨೨( ಯುಎನ್‌ಐ) ಬಾಲಿವುಡ್ ಹಿರಿಯ ನಟ, ನಿರ್ದೇಶಕ ನಾಸೀರುದ್ದೀನ್ ಷಾ, ನಟಿ ದೀಪಿಕಾ ಪಡುಕೋಣೆ ಅವರ ಧೈರ್ಯವನ್ನು ಕೊಂಡಾಡಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಸೀರುದ್ದೀನ್ ಹಲವು ವಿಷಯಗಳ ಕುರಿತು ಸಾಕಷ್ಟು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ, ದೆಹಲಿ ಜೆಎನ್ ಯು ವಿದ್ಯಾರ್ಥಿಗಳ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ. ಆದೇ ರೀತಿ ಜೆಎನ್‌ಯುಗೆ ಭೇಟಿ ನೀಡಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ ದೀಪಿಕಾ ಪಡುಕೋಣೆ ಅವರನ್ನು ಅಭಿನಂದಿಸಿದ್ದಾರೆ.
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾತ್ಮಕ ದಾಳಿಯ ನಂತರ ದೀಪಿಕಾ ಪಡುಕೋಣೆ ಅಲ್ಲಿಗೆ ತೆರಳಿ ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿಮಾಡಿದ್ದರು. ಅದೊಂದು ಅಸಾಧಾರಣ ಧೈರ್ಯದ ಕ್ರಮ ಎಂದು ನಾಸೀರುದ್ದೀನ್ ಷಾ, ಬಣ್ಣಿಸಿದ್ದಾರೆ. ಜೆಎನ್‌ಯು ಭೇಟಿಯ ನಂತರ ದೀಪಿಕಾ ಪಡುಕೋಣೆ ಅವರ ಜನಪ್ರಿಯತೆಯೇನು ಕಡಿಮೆಯಾಗಿಲ್ಲ ಎಂದು ಶಾ ತಿಳಿಸಿದ್ದಾರೆ.
ಆಡಳಿತಾರೂಢ ಪಕ್ಷವೊಂದರ ವಿರುದ್ಧ ಮಾತನಾಡುವ ಮೂಲಕ ಯಾವುದೇ ಒಬ್ಬ ಸೆಲೆಬ್ರಿಟಿ ತನ್ನ ಭವಿಷ್ಯವನ್ನು ಹಾನಿಗೊಳ್ಳಬಹುದೇ ಎಂಬ ಪ್ರಶ್ನೆಗೆ, ನಟ ಕೇವಲ ತನ್ನ ಬಗ್ಗೆ ಮಾತ್ರ ಆಲೋಚಿಸುತ್ತಾನೆ. ಆದರೆ, ಜೆಎನ್‌ಯುಗೆ ಭೇಟಿ ನೀಡುವ ದೀಪಿಕಾ ಪಡುಕೋಣೆ ಧೈರ್ಯವನ್ನು ಪ್ರಶಂಸಿಸಲೇಬೇಕು. ಆಕೆ ಸಿನಿಮಾರಂಗದಲ್ಲಿ ಆಗ್ರಸ್ಥಾನದಲ್ಲಿದ್ದಾರೆ. ತಮ್ಮ ಕ್ರಮ ಖಂಡಿತವಾಗಿ ನಷ್ಟ ಉಂಟಾಗಲಿದೆ ಎಂದೂ ಗೊತ್ತಿದ್ದರೂ ಇಂತಹ ಸಾಹಸದ ಹೆಜ್ಜೆ ಇರಿಸಿದ್ದಾರೆ ಎಂದು ಷಾ ತಿಳಿಸಿದ್ದಾರೆ.
ದೀಪಿಕಾ ಪಡುಕೋಣೆ ವಿರುದ್ಧ ಮಾತನಾಡುತ್ತಿರುವವರು ಸದ್ಯದಲ್ಲೇ ಎಲ್ಲವನ್ನೂ ಮರೆತುಬಿಡುತ್ತಾರೆ. ಅದನ್ನು ಆಕೆ ಹೇಗೆ ಸ್ವೀಕರಿಸುತ್ತಾಳೆ.. ಈ ನಿರ್ಣಯ ಆಕೆಯ ಜನಪ್ರಿಯತೆ ಕುಂದಿಸಲಿದೆಯೇ..? ಮತ್ತಿತರ ಅಂಶಗಳು ವಿಷಯಗಳು ಶೀಘ್ರದಲ್ಲೇ ಉತ್ತರ ಸಿಗಲಿದೆ ಎಂದರು. ಚಿತ್ರೋದ್ಯಮ ಆರಾಧಿಸುವ ಏಕೈಕ ದೇವರು ಎಂದರೆ ಹಣ ಎಂದು ನಾಸೀರುದ್ದೀನ್ ಉತ್ತರಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಆಯೋಧ್ಯೆ ಕುರಿತ ನೀಡಿದ್ದ ಐತಿಹಾಸಿಕ ತೀರ್ಪನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಕೆಲ ವಕೀಲರ ನಿರ್ಧಾರವನ್ನು ವಿರೋಧಿಸಿದ ೧೦೦ ಮುಸ್ಲಿಮ್ ಗಣ್ಯರಲ್ಲಿ ನಾಸಿರುದ್ದೀನ್ ಷಾ ಒಬ್ಬರಾಗಿದ್ದರು. ಸಂಘರ್ಷ ಮುಂದುವರಿಸಿದರೆ ಸಮಾಜಕ್ಕೆ ಹಾನಿ ಉಂಟುಮಾಡಲಿದೆ ಎಂದು ನಾಸಿರುದ್ದೀನ್ ಷಾ ಎಂದು ಹೇಳಿದ್ದರು.
ಯುಎನ್‌ಐ ಕೆವಿಆರ್ ೨೦೨೨
More News
’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

27 Feb 2020 | 9:00 PM

ಬೆಂಗಳೂರು, ಫೆ 27 (ಯುಎನ್‍ಐ) ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ ಹೈ ವೋಲ್ಟೇಜ್ ಕಾಮಿಡಿ ಹಾರರ್ ‘ನಟ ಭಯಂಕರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಪರೀಕ್ಷೆಗಳು ಮುಗಿದ ನಂತರ ರಿಲೀಸ್ ಆಗಲಿದೆ

 Sharesee more..
‘ಎಂಆರ್ ಪಿ  ಚಿತ್ರದ ತುಣುಕು-ಹಾಸ್ಯದ ಮಿಣುಕು

‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

26 Feb 2020 | 10:25 PM

ಬೆಂಗಳೂರು, ಫೆ 26 (ಯುಎನ್‍ಐ) ಹಾಸ್ಯ ಲೇಪನದೊಡನೆ ಸಂದೇಶವನ್ನೂ ಒಳಗೊಂಡಿರುವ ಮನರಂಜನಾತ್ಮಕ ಚಿತ್ರ ‘ಎಂಆರ್‍ಪಿ’ ಯ ಟ್ರೇಲರ್ ಬಿಡುಗಡೆಯಾಗಿದೆ

 Sharesee more..