Friday, Dec 6 2019 | Time 21:29 Hrs(IST)
  • ಎನ್ ಕೌಂಟರ್ ನಡೆಸಿದ ಪೊಲೀಸರಿಗೆ ಎನ್ ಹೆಚ್ ಆರ್ ಸಿ ನೋಟೀಸ್
  • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
  • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
  • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
  • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
  • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
  • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
  • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
  • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
  • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
  • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
  • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
  • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
  • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
  • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಟೇಬಲ್ ಟೆನಿಸ್‌ನಲ್ಲಿ ಭಾರತಕ್ಕೆೆ ಚಿನ್ನ, ಬೆಳ್ಳಿ
International Share

ಚಂದ್ರನಲ್ಲಿ ಸಂಪನ್ಮೂಲಗಳ ಅಭಿವೃದ್ಧಿಗೆ ಅಮೆರಿಕದಿಂದ ರಾಕೆಟ್ ಉಡಾವಣೆ

ಮಾಸ್ಕೋ, ಜು 22 (ಯುಎನ್ಐ)- ಗಗನಯಾತ್ರಿಗಳನ್ನು ಹೊತ್ತ ಅಮೆರಿಕ ಉಪಗ್ರಹ ಚಂದ್ರನಲ್ಲಿ ಉಡಾವಣೆ ಆಗುವ ಕನಸು ಹೊಂದಿದ್ದು, ಈ ಬಾರಿ ಸಂಪನ್ಮೂಲಗಳ ಪರಿಶೀಲನೆ ನಡೆಸಲಿದೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ತಿಳಿಸಿದ್ದಾರೆ.


'ಅಮೆರಿಕ ಇಂಹದೊಂದು ಪ್ರಯತ್ನಕ್ಕೆ ಕೈಹಾಕಲಿದ್ದು, ತನ್ನ ನೆಲದಿಂದಲೇ ರಾಕೆಟ್ ಉಡಾವಣೆ ಮಾಡಲು ಯೋಜನೆ ರೂಪಿಸಿಕೊಳ್ಳುತ್ತಿದೆ,. ಈ ಬಾರಿ ನಾವು ಚಂದ್ರನಲ್ಲಿ ಮಾನವ ಸಹಿತ ಉಪಗ್ರಹವನ್ನು ಕಳುಹಿಸಿದಾಗ, ಬರೀ ಚಂದ್ರನ ಭೇಟಿಗೆ ಹೋಗುವುದಿಲ್ಲ. ನಮ್ಮ ತಂಡ ಅಲ್ಲಿಯೇ ಉಳಿದು, ನೂತನ ವಿಧಾನ ಅಲ್ಲದೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.


ನಾಸಾ ಸಂಸ್ಥೆ 2024ರ ಒಳಗೆ ಹೊಸ ತಂತ್ರಜ್ಞಾನವುಳ್ಳ ರಾಕೆಟ್ ಉಡಾವಣೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಅದರ ಅನ್ವಯ ಗಗನ ಯಾತ್ರಿಗಳು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಯೋಜನೆಗೆ ಅಧ್ಯಕ್ಷರು ಬೆಂಬಲಿಸಿದ್ದಾರೆ ಎಂದು ಮೈಕ್ ಪೆನ್ಸ್ ಹೇಳಿದ್ದಾರೆ.


2028ರ ಬದಲಿಗೆ 2024ರಲ್ಲಿ ಅಮೆರಿಕ ಚಂದ್ರನತ್ತ ಹೊಸ ರಾಕೆಟ್ ಉಡಾವಣೆ ಮಾಡುವುದಾಗಿ ಇದೇ ಮಾರ್ಚ್ ನಲ್ಲಿ ಅಮೆರಿಕ ತಿಳಿಸಿತ್ತು. ನಾಸಾ ಎಸ್‍ಎಲ್‍ಎಸ್ ಸೂಪರ್ ಹೆವಿ ರಾಕೆಟ್ ಅನ್ನು ಉಡಾವಣೆ ಮಾಡಲು ಯೋಜನೆ ರೂಪಿಸಿಕೊಳ್ಳುತ್ತಿದೆ.
ಯುಎನ್ಐ ವಿಎನ್ಎಲ್ ಎಸ್ಎ 1558