Wednesday, Aug 21 2019 | Time 23:53 Hrs(IST)
 • ಚಿದಂಬರಂ ಬಂಧನ: ಪ್ರಧಾನಿ ಮೋದಿ ಚುನಾವಣಾ ಭರವಸೆ ಈಡೇರಿಕೆ
 • ಐ ಎನ್ ಎಕ್ಸ್ ಮೀಡಿಯಾ ಪ್ರಕರಣ : ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ವಶಕ್ಕೆ
 • ಶ್ರೀನಗರದಲ್ಲಿ ಶುಕ್ರವಾರ ಸಾರ್ವಜನಿಕರನ್ನು ಭೇಟಿ ಮಾಡಲಿರುವ ರಾಜ್ಯಪಾಲರ ಸಲಹೆಗಾರ
 • ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ
 • ಮುಂದಿನ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ರಾಜೀವ್ ಗೌಬಾ ನೇಮಕ
 • ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ – ಅಜಿತ್ ದೋವಲ್ ಮಾತುಕತೆ
 • ನಾನು ಓಡಿಹೋಗಿಲ್ಲ, ನ್ಯಾಯದಿಂದ ರಕ್ಷಣೆ ಪಡೆಯಲು ಕೆಲಸ ಮಾಡುತ್ತಿದ್ದೇನೆ: ಚಿದಂಬರಂ
 • ಆರ್ ಟಿಐ ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣ; ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
 • ಎಂಡಿಎಸ್ ಶುಲ್ಕ ತಾರತಮ್ಯ; ನಾಲ್ಕು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
 • ಸರ್ಕಾರಿ ವಾಹನಗಳಿಗೆ ಮಹಿಳಾ ಚಾಲಕರ ನೇಮಕ; ಕೇರಳ ಸಂಪುಟ ಸಮ್ಮತಿ
 • ಐಎನ್ ಎಕ್ಸ್ ಮೀಡಿಯಾ ಪ್ರಕರಣ; ಚಿದಂಬರಂ ವಿರುದ್ಧ ಸಿಬಿಐ, ಇಡಿ ಲುಕ್ ಔಟ್ ನೋಟೀಸ್ ಜಾರಿ
 • ಕೆಲಸ ಸರಿಯಾಗಿ ನಿರ್ವಹಿಸಲಾಗದಿದ್ದರೆ, ಬೇರೆಡೆಗೆ ವರ್ಗ ಮಾಡಿಸಿಕೊಳ್ಳಿ ; ಇಂಜಿನಿಯರ್ ಗಳಿಗೆ ಮೇಯರ್ ತರಾಟೆ
 • ಯಾಂತ್ರೀಕೃತ ಮೀನುಗಾರಿಕೆ ಬೋಟ್‍ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಮುಖ್ಯಮಂತ್ರಿ
 • ಅಯೋಧ್ಯೆ ಪ್ರಕರಣ: ರಾಮ ಜನ್ಮಭೂಮಿಯಲ್ಲಿ ಜನರ ನಂಬಿಕೆ ಸಾಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ
 • ಪಕ್ಷೇತರ ಶಾಸಕ ಅನಂತ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್
International Share

ಚಂದ್ರನ ಮೇಲೆ ವೈಜ್ಞಾನಿಕ ಸಂಶೋಧನಾ ಕೇಂದ್ರ ಯೋಜನೆ ಅನ್ವೇಷಣೆಗೆ ಮುಂದಾದ ಚೀನಾ, ರಷ್ಯಾ, ಯೂರೋಪ್

ಗುವಾಂಗ್, ಜುಲೈ 22 (ಯುಎನ್ಐ) ಚಂದ್ರನ ಮೇಲೆ ವೈಜ್ಞಾನಿಕ ಸಂಧಶೋಧನಾ ಕೇಂದ್ರವನ್ನು ನಿರ್ಮಿಸುವ ಯೋಜನೆಯನ್ನು ಜಂಟಿಯಾಗಿ ಅನ್ವೇಷಿಸಲು ಚೀನಾ, ಯೂರೋಪ್, ರಷ್ಯಾದ ಬಾಹ್ಯಾಕಾಶ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಚೀನಾದ ಹಿರಿಯ ಬಾಹ್ಯಾಕಾಶ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಜಂಟಿ ಪರಿಶೋಧನೆಯು ಬಾಹ್ಯಾಕಾಶ ನಿಲ್ದಾಣದ ವೈಜ್ಞಾನಿಕ ಉದ್ದೇಶಗಳ ಮೇಲೆ ಕೇಂದ್ರೀಕರಿಸುತ್ತದೆ. ಜೊತೆಗೆ ವ್ಯವಸ್ಥೆಗೆ ಸಂಬಂಧಿಸಿದ ಅಥವಾ ನಿಯೋಗದ ಆಧಾರಿತ ಚರ್ಚೆಗಳಾಗಿರುತ್ತವೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತದ (ಸಿಎನ್ಎಸ್ಎ) ಉಪನಿರ್ದೇಶಕ ವೂ ಯಾನ್ಹುವಾ ಹೇಳಿದರು. ಚರ್ಚೆಯಲ್ಲಿ ಭಾಗವಹಿಸುವವರು ಜಂಟಿಯಾಗಿ ನಿಲ್ದಾಣವನ್ನು ಯೋಜಿಸಿ, ವಿನ್ಯಾಸಗೊಳಿಸುತ್ತಾರೆ ಹಾಗೂ ಸಂಘಟಿಸುತ್ತಾರೆ ಮತ್ತು ವೈಜ್ಞಾನಿಕ ಫಲಿತಾಂಶಗಳನ್ನು ಹಂಚಿಕೊಳ್ಳುತ್ತಾರೆ ಎಂದು ಗುವಾಂಗ್ ಡಾಂಗ್ ಪ್ರಾಂತ್ಯದ ದಕ್ಷಿಣ ಚೀನಾದ ನಗರವಾದ ಜುಹೈನಲ್ಲಿ ಸೋಮವಾರ ನಡೆದ ಚಂದ್ರನ ಪರಿಶೋಧನೆ ಮತ್ತು ಚಂದ್ರನಲ್ಲಿರುವ ಆಳವಾದ ಜಾಗದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವೂ ತಿಳಿಸಿದರು. ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಎರಡು ಮೂರು ವರ್ಷಗಳ ಚರ್ಚೆಯ ನಂತರ ನಿಲ್ದಾಣದ ನಿರ್ಮಾಣದ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಿದ್ದಾರೆ ಎಂದು ಸಿಎನ್ಎಸ್ಎಯ ಚಂದ್ರ ಪರಿಶೋಧನೆ ಮತ್ತು ಬಾಹ್ಯಾಕಾಶ ಕಾರ್ಯಕ್ರಮ ಕೇಂದ್ರದ ಉಪನಿರ್ದೇಶಕ ಪೀ ಜಯೋಯು ಅಭಿಪ್ರಾಯಪಟ್ಟಿದ್ದಾರೆ. ಚಂದ್ರ ಸಂಶೋಧನಾ ಕೆಂದ್ರದ ಬಗ್ಗೆ ಅಂತರ್ ಸರ್ಕಾರಿ ಸಮನ್ವಯ ಸಮಿತಿ ಸ್ಥಾಪಿಸಲಾಗುವುದು ಎಂದು ಪೀ ತಿಳಿಸಿದರು. ಚೀನಾ ಕಾರ್ಯಕ್ರಮದ ನಾಲ್ಕನೇ ಹಂತವನ್ನು ಅದರ ನಂತರದ ಕಾರ್ಯಗಳನ್ನು ಚಂದ್ರನ ಮೇಲೆ ಕೆಲಸ ಮಾಡುವ ಕಾರ್ಯ ಸಾಧ್ಯತೆಗಳನ್ನು ನಿರ್ಣಯಿಸಲು ದೀರ್ಘಕಾಲ ತೆಗೆದುಕೊಳ್ಳುತ್ತದೆ ಎಂದು ಚೀನಾದ ಚಂದ್ರ ಪರಿಶೋಧನೆ ಕಾರ್ಯಕ್ರಮದ ಮುಖ್ಯ ವಿನ್ಯಾಸಕ ವೂ ವೈರೆನ್ ಹೇಳಿದರು.

ಚೀನಾ, ರಷ್ಯಾ ಮತ್ತು ಯೂರೋಪ್ ಎಲ್ಲಾ ದೇಶಗಳೂ ಚಂದ್ರನ ಮೇಲೆ ವೈಜ್ಞಾನಿಕ ನೆಲೆಯನ್ನು ಸ್ಥಾಪಿಸುವ ಆಲೋಚನೆಗೆ ಮುಂದಾಗಿದ್ದಾರೆ. ಯುಎನ್ಐ ಡಿಸಿ ಎಸ್ಎ 1900
More News
ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿತಿಕೆ ವಹಿಸಲು ಸಿದ್ಧ: ಟ್ರಂಪ್‍

ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿತಿಕೆ ವಹಿಸಲು ಸಿದ್ಧ: ಟ್ರಂಪ್‍

21 Aug 2019 | 3:06 PM

ವಾಷಿಂಗ್ಟನ್‍, ಆ 21 (ಯುಎನ್‍ಐ) ಏಷ್ಯಾದ ನೆರೆಹೊರೆ ರಾಷ್ಟ್ರಗಳ ನಡುವೆ "ಜಿಟಿಲ ಸಮಸ್ಯೆಗಳಿವೆ".

 Sharesee more..
ಭಾರತ-ನೇಪಾಳ ಜಂಟಿ ಆಯೋಗದ ಸಭೆ: ಡಾ ಎಸ್ ಜೈಶಂಕರ್ ಭಾಗಿ

ಭಾರತ-ನೇಪಾಳ ಜಂಟಿ ಆಯೋಗದ ಸಭೆ: ಡಾ ಎಸ್ ಜೈಶಂಕರ್ ಭಾಗಿ

21 Aug 2019 | 2:39 PM

ಕಠ್ಮಂಡು, ಆ 21 (ಯುಎನ್ಐ) ಭಾರತ-ನೇಪಾಳದ ಐದನೇ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಕಠ್ಮಂಡು ತಲುಪಿದ್ದು, ನೇಪಾಳದ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಾಗಿ ಮತ್ತು ನೇಪಾಳದಲ್ಲಿನ ಭಾರತದ ರಾಯಭಾರಿ ನೀಲಾಂಬರ್ ಆಚಾರ್ಯ ಬರಮಾಡಿಕೊಂಡರು.

 Sharesee more..
ಬಾಂಗ್ಲಾ ಅಭಿವೃದ್ಧಿಗೆ ಭಾರತದಿಂದ ಅಗತ್ಯ ಬೆಂಬಲ: ವಿದೇಶಾಂಗ ಸಚಿವ ಜೈಶಂಕರ್

ಬಾಂಗ್ಲಾ ಅಭಿವೃದ್ಧಿಗೆ ಭಾರತದಿಂದ ಅಗತ್ಯ ಬೆಂಬಲ: ವಿದೇಶಾಂಗ ಸಚಿವ ಜೈಶಂಕರ್

20 Aug 2019 | 5:32 PM

ಢಾಕಾ, ಆಗಸ್ಟ್ 20 (ಯುಎನ್‌ಐ) ಬಾಂಗ್ಲಾದೇಶದ ಅಭಿವೃದ್ಧಿಗೆ ಭಾರತವು ಎಲ್ಲ ರೀತಿಯ ಬೆಂಬಲವನ್ನು ನೀಡಲಿದ್ದು ಈ ಸಹಭಾಗಿತ್ವವು ದಕ್ಷಿಣ ಏಷ್ಯಾದಲ್ಲಿ ಆದರ್ಶಪ್ರಾಯವಾಗಿ ಉಳಿಯುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪಿಸಿದ್ದಾರೆ ಎಂದು ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಮಂಗಳವಾರ ತಿಳಿಸಿದ್ದಾರೆ

 Sharesee more..