Friday, Dec 6 2019 | Time 22:01 Hrs(IST)
 • ಪೋಕ್ಸೋ ಕಾಯ್ದೆಯಡಿ ತಪ್ಪಿತಸ್ಥರು ಕ್ಷಮಾದಾನ ಆರ್ಜಿ ಸಲ್ಲಿಕೆಗೂ ಅನರ್ಹರು; ರಾಷ್ಟ್ರಪತಿ
 • ಎನ್ ಕೌಂಟರ್ ನಡೆಸಿದ ಪೊಲೀಸರಿಗೆ ಎನ್ ಹೆಚ್ ಆರ್ ಸಿ ನೋಟೀಸ್
 • ಹೆಟ್ಮೇರ್, ಲೆವಿಸ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆೆ 208 ರನ್ ಕಠಿಣ ಗುರಿ
 • ಚಿತ್ರೋತ್ಸವ;; ಎರಡನೇ ದಿನದಂದು 43 ಚಿತ್ರಗಳ ಪ್ರದರ್ಶನ
 • ಅಯೋಧ್ಯಾ ಭೂ ವಿವಾದ; ನಾಲ್ಕು ಮರುಪರಿಶೀಲನಾ ಅರ್ಜಿ ಸಲ್ಲಿಕೆ
 • ಸೈನಿಕರಿಗಾಗಿ ಭವನ ನಿರ್ಮಾಣ,ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮ:ಮುಖ್ಯಮಂತ್ರಿ
 • “ಕೈಲಾಸ” ದೇಶ ಸೃಷ್ಟಿಸುವುದು ವೆಬ್ ಸೈಟ್ ಆರಂಭಿಸಿದಷ್ಟು ಸುಲಭವಲ್ಲ !
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧಿವಶ
 • ಟೇಬಲ್ ಟೆನಿಸ್ ಇಬ್ಬರು ಕೋಚ್‌ಗಳು ವಿಧವಶ
 • ಅತ್ಯಾಚಾರ, ಪೋಕ್ಸೋ ಪ್ರಕರಣಗಳ ವಿಚಾರಣೆಗೆ 1023 ತ್ವರಿತ ನ್ಯಾಯಾಲಯ ಸ್ಥಾಪನೆ
 • ಇಂತಹ ಎನ್ ಕೌಂಟರ್ ಯುಪಿ, ದೆಹಲಿಯಲ್ಲೂ ನಡೆಯಲಿ : ಮಾಯಾವತಿ
 • ಮಂಡ್ಯ ವಿ ಸಿ ಫಾರಂನಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ಆರಂಭ
 • ದಕ್ಷಿಣ ಏಷ್ಯಾ ಕ್ರೀಡಾಕೂಟ: ಕರ್ನಾಟಕದ ಶ್ರೀಹರಿ, ಲಿಖಿತ್ ಗೆ ಚಿನ್ನ
 • ದಕ್ಷಿಣ ಏಷ್ಯನ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿರಿಲ್, ಅಶ್ಮಿತಾಗೆ ಚಿನ್ನದ ಪದಕ
 • ರಾಷ್ಟ್ರೀಯ ಪೊಲೀಸ್ ಸಮಾವೇಶ: ಪುಣೆಗೆ ಆಗಮಿಸಿದ ಅಮಿತ್ ಶಾ
International Share

ಚಂದ್ರನ ಮೇಲೆ ವೈಜ್ಞಾನಿಕ ಸಂಶೋಧನಾ ಕೇಂದ್ರ ಯೋಜನೆ ಅನ್ವೇಷಣೆಗೆ ಮುಂದಾದ ಚೀನಾ, ರಷ್ಯಾ, ಯೂರೋಪ್

ಗುವಾಂಗ್, ಜುಲೈ 22 (ಯುಎನ್ಐ) ಚಂದ್ರನ ಮೇಲೆ ವೈಜ್ಞಾನಿಕ ಸಂಧಶೋಧನಾ ಕೇಂದ್ರವನ್ನು ನಿರ್ಮಿಸುವ ಯೋಜನೆಯನ್ನು ಜಂಟಿಯಾಗಿ ಅನ್ವೇಷಿಸಲು ಚೀನಾ, ಯೂರೋಪ್, ರಷ್ಯಾದ ಬಾಹ್ಯಾಕಾಶ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಚೀನಾದ ಹಿರಿಯ ಬಾಹ್ಯಾಕಾಶ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ
ಜಂಟಿ ಪರಿಶೋಧನೆಯು ಬಾಹ್ಯಾಕಾಶ ನಿಲ್ದಾಣದ ವೈಜ್ಞಾನಿಕ ಉದ್ದೇಶಗಳ ಮೇಲೆ ಕೇಂದ್ರೀಕರಿಸುತ್ತದೆ. ಜೊತೆಗೆ ವ್ಯವಸ್ಥೆಗೆ ಸಂಬಂಧಿಸಿದ ಅಥವಾ ನಿಯೋಗದ ಆಧಾರಿತ ಚರ್ಚೆಗಳಾಗಿರುತ್ತವೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತದ (ಸಿಎನ್ಎಸ್ಎ) ಉಪನಿರ್ದೇಶಕ ವೂ ಯಾನ್ಹುವಾ ಹೇಳಿದರು. ಚರ್ಚೆಯಲ್ಲಿ ಭಾಗವಹಿಸುವವರು ಜಂಟಿಯಾಗಿ ನಿಲ್ದಾಣವನ್ನು ಯೋಜಿಸಿ, ವಿನ್ಯಾಸಗೊಳಿಸುತ್ತಾರೆ ಹಾಗೂ ಸಂಘಟಿಸುತ್ತಾರೆ ಮತ್ತು ವೈಜ್ಞಾನಿಕ ಫಲಿತಾಂಶಗಳನ್ನು ಹಂಚಿಕೊಳ್ಳುತ್ತಾರೆ ಎಂದು ಗುವಾಂಗ್ ಡಾಂಗ್ ಪ್ರಾಂತ್ಯದ ದಕ್ಷಿಣ ಚೀನಾದ ನಗರವಾದ ಜುಹೈನಲ್ಲಿ ಸೋಮವಾರ ನಡೆದ ಚಂದ್ರನ ಪರಿಶೋಧನೆ ಮತ್ತು ಚಂದ್ರನಲ್ಲಿರುವ ಆಳವಾದ ಜಾಗದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ವೂ ತಿಳಿಸಿದರು.
ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಎರಡು ಮೂರು ವರ್ಷಗಳ ಚರ್ಚೆಯ ನಂತರ ನಿಲ್ದಾಣದ ನಿರ್ಮಾಣದ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಿದ್ದಾರೆ ಎಂದು ಸಿಎನ್ಎಸ್ಎಯ ಚಂದ್ರ ಪರಿಶೋಧನೆ ಮತ್ತು ಬಾಹ್ಯಾಕಾಶ ಕಾರ್ಯಕ್ರಮ ಕೇಂದ್ರದ ಉಪನಿರ್ದೇಶಕ ಪೀ ಜಯೋಯು ಅಭಿಪ್ರಾಯಪಟ್ಟಿದ್ದಾರೆ. ಚಂದ್ರ ಸಂಶೋಧನಾ ಕೆಂದ್ರದ ಬಗ್ಗೆ ಅಂತರ್ ಸರ್ಕಾರಿ ಸಮನ್ವಯ ಸಮಿತಿ ಸ್ಥಾಪಿಸಲಾಗುವುದು ಎಂದು ಪೀ ತಿಳಿಸಿದರು. ಚೀನಾ ಕಾರ್ಯಕ್ರಮದ ನಾಲ್ಕನೇ ಹಂತವನ್ನು ಅದರ ನಂತರದ ಕಾರ್ಯಗಳನ್ನು ಚಂದ್ರನ ಮೇಲೆ ಕೆಲಸ ಮಾಡುವ ಕಾರ್ಯ ಸಾಧ್ಯತೆಗಳನ್ನು ನಿರ್ಣಯಿಸಲು ದೀರ್ಘಕಾಲ ತೆಗೆದುಕೊಳ್ಳುತ್ತದೆ ಎಂದು ಚೀನಾದ ಚಂದ್ರ ಪರಿಶೋಧನೆ ಕಾರ್ಯಕ್ರಮದ ಮುಖ್ಯ ವಿನ್ಯಾಸಕ ವೂ ವೈರೆನ್ ಹೇಳಿದರು.

ಚೀನಾ, ರಷ್ಯಾ ಮತ್ತು ಯೂರೋಪ್ ಎಲ್ಲಾ ದೇಶಗಳೂ ಚಂದ್ರನ ಮೇಲೆ ವೈಜ್ಞಾನಿಕ ನೆಲೆಯನ್ನು ಸ್ಥಾಪಿಸುವ ಆಲೋಚನೆಗೆ ಮುಂದಾಗಿದ್ದಾರೆ. ಯುಎನ್ಐ ಡಿಸಿ ಎಸ್ಎ 1900