Wednesday, Aug 21 2019 | Time 23:57 Hrs(IST)
  • ಚಿದಂಬರಂ ಬಂಧನ: ಪ್ರಧಾನಿ ಮೋದಿ ಚುನಾವಣಾ ಭರವಸೆ ಈಡೇರಿಕೆ
  • ಐ ಎನ್ ಎಕ್ಸ್ ಮೀಡಿಯಾ ಪ್ರಕರಣ : ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ವಶಕ್ಕೆ
  • ಶ್ರೀನಗರದಲ್ಲಿ ಶುಕ್ರವಾರ ಸಾರ್ವಜನಿಕರನ್ನು ಭೇಟಿ ಮಾಡಲಿರುವ ರಾಜ್ಯಪಾಲರ ಸಲಹೆಗಾರ
  • ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ
  • ಮುಂದಿನ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ರಾಜೀವ್ ಗೌಬಾ ನೇಮಕ
  • ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ – ಅಜಿತ್ ದೋವಲ್ ಮಾತುಕತೆ
  • ನಾನು ಓಡಿಹೋಗಿಲ್ಲ, ನ್ಯಾಯದಿಂದ ರಕ್ಷಣೆ ಪಡೆಯಲು ಕೆಲಸ ಮಾಡುತ್ತಿದ್ದೇನೆ: ಚಿದಂಬರಂ
  • ಆರ್ ಟಿಐ ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣ; ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
  • ಎಂಡಿಎಸ್ ಶುಲ್ಕ ತಾರತಮ್ಯ; ನಾಲ್ಕು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
  • ಸರ್ಕಾರಿ ವಾಹನಗಳಿಗೆ ಮಹಿಳಾ ಚಾಲಕರ ನೇಮಕ; ಕೇರಳ ಸಂಪುಟ ಸಮ್ಮತಿ
  • ಐಎನ್ ಎಕ್ಸ್ ಮೀಡಿಯಾ ಪ್ರಕರಣ; ಚಿದಂಬರಂ ವಿರುದ್ಧ ಸಿಬಿಐ, ಇಡಿ ಲುಕ್ ಔಟ್ ನೋಟೀಸ್ ಜಾರಿ
  • ಕೆಲಸ ಸರಿಯಾಗಿ ನಿರ್ವಹಿಸಲಾಗದಿದ್ದರೆ, ಬೇರೆಡೆಗೆ ವರ್ಗ ಮಾಡಿಸಿಕೊಳ್ಳಿ ; ಇಂಜಿನಿಯರ್ ಗಳಿಗೆ ಮೇಯರ್ ತರಾಟೆ
  • ಯಾಂತ್ರೀಕೃತ ಮೀನುಗಾರಿಕೆ ಬೋಟ್‍ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಮುಖ್ಯಮಂತ್ರಿ
  • ಅಯೋಧ್ಯೆ ಪ್ರಕರಣ: ರಾಮ ಜನ್ಮಭೂಮಿಯಲ್ಲಿ ಜನರ ನಂಬಿಕೆ ಸಾಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ
  • ಪಕ್ಷೇತರ ಶಾಸಕ ಅನಂತ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್
Special Share

ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ

ನವದೆಹಲಿ, ಜುಲೈ 22 (ಯುಎನ್‌ಐ)-ಚಂದ್ರನತ್ತ ಸೋಮವಾರ ಪಯಣ ಆರಂಭಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ನ ಮಹತ್ವಾಕಾಂಕ್ಷೆಯ ಚಂದ್ರಯಾನ- 2 ನೌಕೆಯನ್ನು ಸಾರ್ವಜನಿಕ ವಲಯದ ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಐಎಲ್) ಪೂರೈಸಿದ ವಿಶೇಷ ಉಕ್ಕಿನಿಂದ ನಿರ್ಮಿಸಲಾಗಿದ್ದು, ಇದು ಅಗತ್ಯ ಅವಶ್ಯಕತೆಗಳು ಮತ್ತು ವೈಶಿಷ್ಟ್ಯತೆಗಳನ್ನು ಪೂರೈಸಿದೆ.
ಚಂದ್ರಯಾನ-2 ನೌಕೆಗಾಗಿ ಎಸ್‍ಎಐಎಲ್‍ ಪೂರೈಸಿದ ವಿಶೇಷ ಗುಣಮಟ್ಟದ ಉಕ್ಕು ಹಾಳೆಯನ್ನು ಕ್ರಯೋಜೆನಿಕ್ ಎಂಜಿನ್ (ಸಿಇ 20)ನಲ್ಲಿ ಬಳಸಲಾಗಿದೆ. ತಮಿಳುನಾಡಿನ ಸೇಲಂ ಉಕ್ಕು ಸ್ಥಾವರದ ವಿಶೇಷ ಗುಣಮಟ್ಟದ ಸ್ಟೇನ್‌ಲೆಸ್ ಉಕ್ಕು ಈ ಉದ್ದೇಶಕ್ಕಾಗಿ ಎಸ್‍ಎಐಎಲ್‍ ಪೂರೈಸಿದೆ ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.
ಈ ಉಪಕ್ರಮದ ಒಂದು ಭಾಗವಾಗಿ, ಸೇಲಂನಲ್ಲಿ ಸ್ಟೇನ್‌ಲೆಸ್ ಉಕ್ಕು ಸುರುಳಿಗಳು ಸಿದ್ಧಗೊಳ್ಳಲು ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಕೇಂದ್ರ (ಎಲ್‌ಪಿಎಸ್‌ಸಿ)ದ ವಿಜ್ಞಾನಿಗಳು ಮತ್ತು ಅದರ ಸೇಲಂ ಉಕ್ಕು ಸ್ಥಾವರಲ್ಲಿರುವ ಎಸ್‍ಎಐಎಲ್‍ ತಂಡ ನಿಕಟವಾಗಿ ಸಹಕರಿಸಿವೆ.
4 ಮಿ.ಮೀ ದಪ್ಪವಿರುವ ಬಿಸಿ ಸುರುಳಿಯಾಕಾರದ ಉಕ್ಕನ್ನು ಅಗತ್ಯವಿರುವಂತೆ 2.3 ಮಿ.ಮೀ ದಪ್ಪಕ್ಕೆ ತಣ್ಣಗಾಗಿಸಲಾಯಿತು. ಈ 2.3 ಮಿ.ಮೀ ದಪ್ಪದ ಹಾಳೆಯನ್ನು ಚಂದ್ರಯಾನ ಕಾರ್ಯಕ್ರಮದ ಕ್ರಯೋಜೆನಿಕ್ ಎಂಜಿನ್ (ಸಿಇ 20) ನಲ್ಲಿ ಬಳಸಲಾಗಿದೆ.
ಇದಕ್ಕೂ ಮುನ್ನ, ದೇಶದ ಪ್ರತಿಷ್ಠಿತ ಮತ್ತು ದೇಶೀಯ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಗುಣಮಟ್ಟದ ಉಕ್ಕನ್ನು ಒದಗಿಸಲು ಎಸ್‍ಎಐಎಲ್‍, ಇಸ್ರೋ ಜೊತೆ ಸಹಭಾಗಿತ್ವ ವಹಿಸಿತ್ತು. ಈಗಿನ ಪ್ರಗತಿಯೊಂದಿಗೆ ಭವಿಷ್ಯದಲ್ಲಿ ಬಾಹ್ಯಾಕಾಶ ಉಡಾವಣಾ ವಾಹಕಗಳ ಉಪಕರಣಗಳಿಗೆ ಸ್ಟೇನ್‍ಲೆಸ್‍ ಸ್ಟೀಲ್‍ ಅನ್ನು ಪೂರೈಕೆ ಮಾಡುವ ಆಶಾವಾದವನ್ನು ಎಸ್‍ಎಐಎಲ್‍ ಹೊಂದಿದೆ.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1943