Friday, Sep 25 2020 | Time 11:26 Hrs(IST)
  • ಬಿಹಾರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟ ಸಾಧ್ಯತೆ
  • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86 ಸಾವಿರ ಹೊಸ ಕೊರೊನಾ ಪ್ರಕರಣಗಳು, 1141 ಸಾವು!
  • ಸೆನ್ಸೆಕ್ಸ್ 400 ಅಂಕ ಚೇತರಿಕೆ
  • ಶೋಪಿಯಾನ್ ಮಿನಿ ಸಚಿವಾಲಯದ ಭದ್ರತೆಯಲ್ಲಿದ್ದ ಸೈನಿಕನ ಮೇಲೆ ಉಗ್ರರ ದಾಳಿ
  • ಕೊವಿಡ್-19 : 3 ಕೋಟಿ 20 ಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
  • ಅವಿಶ್ವಾಸ ನಿರ್ಣಯ: ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ-ಸಿದ್ದರಾಮಯ್ಯ
  • ಐಪಿಎಲ್‌ 2020: ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸೋಲಿನ ಜವಾಬ್ದಾರಿ ಹೊತ್ತ ವಿರಾಟ್‌ ಕೊಹ್ಲಿ
  • ಐಪಿಎಲ್‌ 2020: ನಿಧಾನಗತಿಯಲ್ಲಿ ಬೌಲಿಂಗ್‌ ಮಾಡಿದ್ದಕ್ಕಾಗಿ ಕೊಹ್ಲಿಗೆ 12 ಲಕ್ಷ ರೂ ದಂಡ
  • ಕೆ ಎಲ್‌ ರಾಹುಲ್‌ ಅವರ ಎರಡು ಕ್ಯಾಚ್‌ ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ
  • ಪಂಜಾಬ್, ಹರಿಯಾಣದಲ್ಲಿ ರೈತರ ಬಂದ್ ಗೆ ಉತ್ತಮ ಪ್ರತಿಕ್ರಿಯೆ
Karnataka Share

ಚಂದ್ರಯಾನ-2 :ಇಸ್ರೋ ಸಾಧನೆಗೆ ವಿಧಾನಸಭೆ ಮೆಚ್ಚುಗೆ

ಚಂದ್ರಯಾನ-2 :ಇಸ್ರೋ ಸಾಧನೆಗೆ ವಿಧಾನಸಭೆ ಮೆಚ್ಚುಗೆ
ಚಂದ್ರಯಾನ-2 :ಇಸ್ರೋ ಸಾಧನೆಗೆ ವಿಧಾನಸಭೆ ಮೆಚ್ಚುಗೆ

ಬೆಂಗಳೂರು, ಜು 22 (ಯುಎನ್‍ಐ) ಚಂದ್ರಯಾನ-2 ಉಪಗ್ರಹ ಹೊತ್ತ ಜಿಎಸ್‍ಎಲ್‍ವಿ ಎಂಕೆ-3 ನಭೋಮಂಡಲಕ್ಕೆ ಯಶಸ್ವಿಯಾಗಿ ಹಾರಿರುವ ಹಿನ್ನೆಲೆಯಲ್ಲಿ ಇಸ್ರೋದ ಯಶೋಗಾಥೆಯನ್ನು ರಾಜ್ಯ ವಿಧಾನಸಭೆ ಸರ್ವಾನುಮತದಿಂದ ಶ್ಲಾಘಿಸಿದೆ

ಸೋಮವಾರ ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಸ್ರೋ ಸಾಧನೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದರು. ಚಂದ್ರಯಾನ-2 ಉಪಗ್ರಹ ಉಡಾವಣೆ ಕುರಿತ ಟಿಪ್ಪಣಿಯನ್ನು ಸದನದಲ್ಲಿ ಓದಿ, ಇಸ್ರೋ ಸಾಧನೆಯನ್ನು ಕೊಂಡಾಡಿದರು. ಯಶಸ್ವಿ ಉಡಾವಣೆಯಿಂದ ದೇಶದ ಕೀರ್ತಿಪತಾಕೆ ವಿಶ್ವದಲ್ಲಿ ಬಾನೆತ್ತರಕ್ಕೆ ಹಾರಿದಂತಾಗಿದೆ. ಕೋಟಿ ಕೋಟಿ ಕನಸುಗಳನ್ನು ಹೊತ್ತು ಚಂದ್ರನಲ್ಲಿಗೆ ಸಾಗುತ್ತಿರುವ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಕಳುಹಿಸಿದ ಕೀರ್ತಿ ಇಸ್ರೋಗೆ ಸಲ್ಲುತ್ತದೆ. ಇಸ್ರೋ ಕೇಂದ್ರ ಕಚೇರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ಆಗ ಸ್ಪೀಕರ್ ರಮೇಶ್ ಕುಮಾರ್, ಇಸ್ರೋ ಸಾಧನೆಗೆ ಮೆಚ್ಚಗೆ ವ್ಯಕ್ತಪಡಿಸಿದರು.

ಈ ವೇಳೆ ಎಲ್ಲಾ ಸದಸ್ಯರು ಮೇಜು ಕುಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.

ಯುಎನ್‍ಐ ಯುಎಲ್ ಎಸ್‍ಎಂಆರ್ ವಿಎನ್ 1725