Sunday, Dec 8 2019 | Time 13:30 Hrs(IST)
 • ದೆಹಲಿ ಬೆಂಕಿ ದುರಂತ: ಮೃತಪರ ಕುಟುಂಬಗಳಿಗೆ ಪ್ರಧಾನಿಯವರಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
 • ಉನ್ನಾವೋ ಘಟನೆ : ಸಿಎಂ ಬರುವವರೆಗೂ ಅಂತ್ಯ ಸಂಸ್ಕಾರ ನಡೆಸದಿರಲು ಬಿಗಿಪಟ್ಟು
 • ದೆಹಲಿ ಅಗ್ನಿ ದುರಂತ; ತನಿಖೆಗೆ ಸಿಎಂ ಕೇಜ್ರೀವಾಲ್ ಆದೇಶ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ
 • ಪರಿಷ್ಕೃತ ಪೌರತ್ವ ತಿದ್ದುಪಡಿ ಮಸೂದೆ: ಸೋಮವಾರ ಮಂಡನೆ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ನಾಳೆ ಉಪ ಕದನ ಫಲಿತಾಂಶ; ದೇವರ ಮೊರೆ ಹೋದ ಬಿಎಸ್‌ವೈ
 • ಲಾ ಲೀಗಾ ಫುಟ್ಬಾಲ್‌ ಟೂರ್ನಿ: ಮೆಸ್ಸಿ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಬಾರ್ಸಿಲೋನಾಗೆ ಜಯ
 • ಭದ್ರತಾಪಡೆ ಗುಂಡಿಗೆ ಐವರು ಉಗ್ರರ ಬಲಿ
 • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆ: ಸಿಎಬಿಗೆ ಕಾಂಗ್ರೆಸ್, ಎಡಪಕ್ಷ ವಿರೋಧ
 • ಉಪದ್ರವ ಕೊಡುತ್ತಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು
 • ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ದತ್ತ ಜಯಂತಿ ಜಿಲ್ಲಾಡಳಿತದಿಂದ ವ್ಯಾಪಕ ಬಂದೋಬಸ್ತ್
 • ಎಟಿಕೆ ತಂಡದ ರಾಯ್ ಕೃಷ್ಣ ಮುಡಿಗೆ ನವೆಂಬರ್ ಐಎಸ್ಎಲ್‌ ಹಿರೋ ಮುಕುಟ
 • ದೆಹಲಿಯಲ್ಲಿ ಭೀಕರ ಅಗ್ನಿದುರಂತ : ಮೃತರ ಸಂಖ್ಯೆ 43ಕ್ಕೆ ಏರಿಕೆ
 • ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ಸೆಹ್ವಾಗ್‌ ದ್ವಿಶತಕಕ್ಕೆ ಎಂಟು ವರ್ಷ
National Share

ಚಂದ್ರಯಾನ 2 ಯಶಸ್ವಿ ಉಡಾವಣೆ; ಉಪರಾಷ್ಟ್ರಪತಿ ಅಭಿನಂದನೆ

ನವದೆಹಲಿ, ಜುಲೈ 22 (ಯುಎನ್ಐ) ಚಂದ್ರಯಾನ – 2 ಸೋಮವಾರ ಯಶಸ್ವಿಯಾಗಿ ಉಡಾವಣೆಯಾಗಿದ್ದು ವಿಜ್ಞಾನಿಗಳ ಪ್ರಯತ್ನವನ್ನು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಶ್ಲಾಘಿಸಿದ್ದಾರೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋ ಶ್ರೀಹರಿಕೋಟದಿಂದ ಚಂದ್ರಯಾನ- 2 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಂತರ ಸಭಾಪತಿ ವೆಂಕಯ್ಯನಾಯ್ಡು ನಾಯ್ಡು ಸದನದಲ್ಲಿ ಮಾತನಾಡಿದರು. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಎರಡನೇ ಚಂದ್ರಯಾನ ಆಂಧ್ರಪ್ರದೇಶದ ಶಾರ್ ಶ್ರೇಣಿಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆರ್ಬಿಟರ್, ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ ಹೊತ್ತ ರಾಕೆಟ್.48 ದಿನಗಳಲ್ಲಿ 3.844 ಲಕ್ಷ ಕಿ.ಮೀ ಕ್ರಮಿಸಿ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.ಇಂದು ದೇಶಕ್ಕೆ ಮಹತ್ವದ ಸುದಿನವಾಗಿದ್ದು, ಚಂದ್ರನ ಮೇಲೆ ಈಗಾಗಲೇ ರಷ್ಯಾ, ಅಮೆರಿಕ, ಮತ್ತು ಚೀನಾ ತಮ್ಮ ಉಪಗ್ರಹಗಳನ್ನು ಕಳುಹಿಸಿದ್ದು, ಭಾರತ ನಾಲ್ಕನೇ ದೇಶವಾಗಿದೆ ಎಂದು ನಾಯ್ಡು ಸಂತಸ ವ್ಯಕ್ತಪಡಿಸಿದರು.ಉಪಾಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲದ ಬಗ್ಗೆ ಪ್ರಸ್ತಾಪಿಸಿ ಅದನ್ನು ನಿರ್ಣಾಯಕ ಎಂದು ಬಣ್ಣಿಸಿದರು.
ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಆಗಸ್ಟ್ 12 ರಂದು ಸಾರಾಭಾಯಿ ಅವರ ಜನ್ಮ ದಿನದ ಸಂದರ್ಭದಲ್ಲಿ ಈ ಉಡಾವಣೆ ಅವರ ಪ್ರಯತ್ನಗಳಿಗೆ ಸಲ್ಲಿಸುವ ಗೌರವವಾಗಿದೆ ಎಂದು ವೆಂಕಯ್ಯನಾಯ್ಡು ನುಡಿದರು.
ಉಡಾವಣೆಯಾಗಿ 16 ನಿಮಿಷಗಳ ನಂತರ ಮೂರು ಹಂತಗಳ ಬೇರ್ಪಡಿಸುವಿಕೆ ನಂತರ ಚಂದ್ರಯಾನ 2 ಅನ್ನು ಭೂಮಿಯಿಂದ 170.06*40,400 ಕಿ.ಮೀ ದೂರದ ಕಕ್ಷೆಗೆ ಸೇರಿಸಲಾಯಿತು. 13 ಭಾರತೀಯ ಪೇ ಲೋಡ್ ಗಳನ್ನು ( ಆರ್ಬಿಟರ್ ನಲ್ಲಿ ಎಂಡು, ಲ್ಯಾಂಡರ್ ನಲ್ಲಿ ಮೂರು, ಮತ್ತು ರೋವರ್ ನಲ್ಲಿ ಎರಡು) ಹೊತ್ತ ಚಂದ್ರಯಾನ 2 ಹಿಂದಿನ ಉಡಾವಣೆಗಿಂತ ಭಿನ್ನವಾಗಿದೆ. ಸುಮಾರು ಒಂದು ದಶಕದ ವೈಜ್ಞಾನಿಕ ಸಂಶೋಧನೆ ಮತ್ತು ಇಂಜಿನಿಯರಿಂಗ್ ಅಭಿವೃದ್ಧಿಯ ಮೇಲೆ ಹತೋಟಿ ಸಾಧಿಸಲಿದೆ. ಎರಡನೇ ಚಂದ್ರಯಾನ ದಂಡಯಾತ್ರೆಯು ಚಂದ್ರನ ಅನ್ವೇಷಿಸದ ವಿಭಾಗಗಳ ಮೇಲೆ ಸಂಪೂರ್ಣವಾಗಿ ಬೆಳಕು ಚೆಲ್ಲಲಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶವು ಯಾವುದೇ ದೇಶಗಳಿಂದಲೂ ಪರಿಶೋಧಿಸಲ್ಪಟ್ಟಿಲ್ಲ. ಭಾರತದ ಚಂದ್ರಯಾನ 1 ಅನ್ನು ಪಿ ಎಸ್ ಎಲ್ ವಿ ಮೂಲಕ 2018 ರ ಅಕ್ಟೋಬರ್ 22 ರಂದು ಉಡಾವಣೆ ಮಾಡಲಾಗಿದ್ದು, ಇದು ಚಂದ್ರನ ಮೇಲ್ಮೈಯಲ್ಲಿ ನೀರು ಇರುವ ಬಗ್ಗೆ ಪತ್ತೆ ಹಚ್ಚಿತ್ತು.ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವಾಗ ಸಂಭವಿಸುವ ತಾಂತ್ರಿಕ ತೊಂದರೆಗಳಿಂದಾಗಿ ಹಿಂದಿನ ಹಲವು ಪ್ರಯತ್ನಗಳಿಗೆ ತಡೆಯಾಗಿದ್ದು, ಚಂದ್ರಯಾನ 2 ಮೂಲಕ ಚಂದ್ರನ ಮೇಲ್ಮೈಯ ಭಾಗವನ್ನು ತಲುಪುವ ಮೊದಲ ರಾಷ್ಟ್ರ ಭಾರತವಾಗಲಿದೆ.ಉಡಾವಣೆಯನ್ನು ಈ ಮೊದಲು ಜುಲೈ 15 ರಂದು ನಿಗದಿಪಡಿಸಲಾಗಿತ್ತು. ಆದರೆ ಉಡಾವಣಾ ವಾಹಕದಲ್ಲಿ ತಾಂತ್ರಿಕ ಸಮಸ್ಯೆಯ ಕಾರಣಗಳಿಂದಾಗಿ ಉಡಾವಣೆ ಮುಂದೂಡಲಾಗಿತ್ತು. ಬಾಹ್ಯಾಕಾಶ ನೌಕೆ ಚಂದ್ರನ ಹತ್ತಿರ ಬಂದು ಅದನ್ನು ಪರಿಭ್ರಮಿಸಲು ಆರಂಭಿಸಿದ ಸುಮಾರು ಒಂದು ತಿಂಗಳ ನಂತರ ಸೆಪ್ಟಂಬರ್ 7 ರಂದು ಚಂದ್ರ ಗ್ರಹಕ್ಕೆ ನೌಕೆ ಇಳಿಯವುವಂತೆ ಯೋಜಿಸಲಾಗಿದೆ.ಯುಎನ್ಐ ಡಿಸಿ ಜಿಎಸ್ ಆರ್ 1808