Wednesday, Feb 26 2020 | Time 10:23 Hrs(IST)
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಚಾಧರ್ ಟ್ರೆಕಿಂಗ್ : ಭಾರತೀಯ ವಾಯುಪಡೆಯಿಂದ ಲಡಾಖ್‌ನಲ್ಲಿ 9 ವಿದೇಶಿ ಪ್ರಜೆಗಳ ರಕ್ಷಣೆ

ನವದೆಹಲಿ, ಜನವರಿ 16 (ಯುಎನ್‌ಐ) ಪ್ರಸ್ತುತ ನಡೆಯುತ್ತಿರುವ “ಚಾಧರ್ ಟ್ರೆಕ್” ನ ಭಾಗವಾಗಿದ್ದ ಲಡಾಖ್‌ನಲ್ಲಿ ಹೆಪ್ಪುಗಟ್ಟಿದ ಜನ್ಸ್ಕರ್ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ 9 ವಿದೇಶಿ ಪ್ರಜೆಗಳು ಸೇರಿದಂತೆ 50 ಚಾರಣಿಗರನ್ನು ಭಾರತೀಯ ವಾಯುಪಡೆ (ಐಎಎಫ್) ಗುರುವಾರ ರಕ್ಷಿಸಿದೆ.

ಹಿಮ ಕರಗುವಿಕೆಯಿಂದಾಗಿ ನೀರಿನ ಹರಿವು ಹೆಚ್ಚಾದ ಕಾರಣ, ಚಾರಣಿಗರು ಕಾಲ್ನಡಿಗೆಯಲ್ಲಿ ನದಿಗೆ ಅಡ್ಡಲಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು ಐಎಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿ ಚಾರಣಿಗರು ನೀರಕ್ ಎಂಬ ಸಣ್ಣ ಕ್ಯಾಂಪ್ ಗೆ ಹೇಗೋ ಮಾಡಿ ತಲುಪಿದ್ದು ಅಲ್ಲಿ ರಕ್ಷಣೆಗಾಗಿ ಕಾಯುತ್ತಿದ್ದರು.

ಹೆಲಿಕಾಪ್ಟರ್‌ಗಳ ಮೂಲಕ ಪಾರು ಮಾಡಲು, ನದಿ ತೀರದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಯಿತು.

ಸುಧಾರಿತ ಲಘು ಹೆಲಿಕಾಪ್ಟರ್‌ಗಳನ್ನು (ಎಎಲ್‌ಹೆಚ್) ತಕ್ಷಣವೇ ವಾಯುಪಡೆಯಿಂದ ಕಾರ್ಯಸ್ಥಳಕ್ಕೆ ತರಲಾಯಿತು.

ಐಎಎಫ್‌ನ ಹೆಲಿಕಾಪ್ಟರ್‌ಗಳು ಕಳೆದ ಎರಡು ದಿನಗಳಲ್ಲಿ 107 ವ್ಯಕ್ತಿಗಳನ್ನು ರಕ್ಷಿಸಿವೆ.

ರಕ್ಷಿಸಿದ ಚಾರಣಿಗರಲ್ಲಿ ಫ್ರಾನ್ಸ್‌ನ ಒಬ್ಬ ಪುರುಷ ಮತ್ತು ಓರ್ವ ಮಹಿಳೆ, ಚೀನಾದ ನಾಲ್ವರು ಪುರುಷ ಮತ್ತು ಮೂವರು ಹೆಣ್ಣು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.

ಸಿಲುಕಿದ್ದ ಎಲ್ಲ ಚಾರಣಿಗರು, ಮಾರ್ಗದರ್ಶಕರು ಮತ್ತು ಪೋರ್ಟರ್‌ಗಳನ್ನು ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ತರುವವರೆಗೆ ಐಎಎಫ್ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಐಎಎಫ್ ವಕ್ತಾರ ಕ್ಯಾಪ್ಟನ್ ಅನುಪಮ್ ಬ್ಯಾನರ್ಜಿ ತಿಳಿಸಿದ್ದಾರೆ.

ಸಿಲುಕಿರುವ ಚಾರಣಿಗರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಹೆಚ್ಚುವರಿಯಾಗಿ ವೈದ್ಯಕೀಯ ಅಧಿಕಾರಿ ಮತ್ತು ವೈದ್ಯಕೀಯ ಸಹಾಯಕರನ್ನು ಎಎಫ್ ನಿಲ್ದಾಣ ಲೇಹ್‌ನಿಂದ ನೀರಕ್‌ಗೆ ಕರೆತರಲಾಗಿದೆ. .

ನೀರಕ್‌ನಲ್ಲಿ ವೈದ್ಯಕೀಯ ನೆರವು ಶಿಬಿರ ಸ್ಥಾಪಿಸಿದ್ದು ಸಿಕ್ಕಿಬಿದ್ದ ಚಾರಣಿಗರಿಗೆ ಮೂಲಭೂತ ವೈದ್ಯಕೀಯ ನೆರವು ನೀಡುತ್ತಿದೆ.

ಲಡಾಖ್‌ನ ಹೊಸದಾಗಿ ರೂಪುಗೊಂಡ ನಾಗರಿಕ ಆಡಳಿತ, ಭಾರತೀಯ ಸೇನಾ ಘಟಕಗಳು ಮತ್ತು ಸ್ಥಳೀಯ ವಿಪತ್ತು ಪರಿಹಾರ ತಂಡಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಈ ಕಾರ್ಯಾಚರಣೆಯನ್ನು ಐಎಎಫ್ ಕೈಗೆತ್ತಿಕೊಂಡಿದೆ.

ಯುಎನ್ಐ ಜಿಎಸ್ಆರ್ 2338