Friday, Aug 7 2020 | Time 17:18 Hrs(IST)
 • ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ವಿಶ್ವಾಸ ಹೊರಹಾಕಿದ ಮಿಶ್ರಾ
 • ಕ್ವಾರಂಟೈನ್‌ ನಿಯಮ ಉಲ್ಲಂಘನೆ; ಪ್ರತಿ ಸಾವಿರ ವ್ಯಕ್ತಿಗೆ ಇಬ್ಬರ ಮೇಲೆ ಎಫ್‌ಐಆರ್‌ ದಾಖಲು
 • ಕಾಂಗ್ರೆಸ್‌-ಚೀನಾ ಸರ್ಕಾರದ ಒಡಂಬಡಿಕೆ ಸುಪ್ರೀಂಕೋರ್ಟ್‌ಗೆ ಕೂಡ ಅಚ್ಚರಿ ತಂದಿದೆ; ನಡ್ಡಾ
 • ಡಾ ಕೆ ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
 • ಕೊಂಕಣ ರೈಲ್ವೆಯಿಂದ ರೈಲುಗಳ ಮಾರ್ಗ ಬದಲಾವಣೆ
 • ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ
 • ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ
 • ಕೊಡಗು ಜಿಲ್ಲೆಯಲ್ಲಿ ಕೊರೊನಾಗೆ ಮಹಿಳೆ ಬಲಿ: ಸಾವಿನ ಸಂಖ್ಯೆ 11ಕ್ಕೇರಿಕೆ
 • ಗಾಂಜಾ ಮಾರಾಟ ಯತ್ನ: ಒಡಿಶಾ ಮೂಲದ ವ್ಯಕ್ತಿ ಬಂಧನ
 • ಧಾರವಾಡ: ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿಕೆ
 • ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‍ನಿಂದ ಕದನವಿರಾಮ ಉಲ್ಲಂಘನೆ: ಮೂವರು ನಾಗರಿಕರಿಗೆ ಗಾಯ
 • ಶಬನಮ್ ಡೆವಲಪರ್ಸ್ ನ ಶೂಟ್‍ಔಟ್ ಪ್ರಕರಣ; 13 ವರ್ಷ ಬಳಿಕ ಪ್ರಮುಖ ಆರೋಪಿ ಸೆರೆ
 • ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ರಿಯಾ ಚಕ್ರವರ್ತಿ ತೀವ್ರ ವಿಚಾರಣೆ
 • ಭೂ ಕುಸಿತ ಭೀತಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ
 • ರಾಜ್ಯವೀಗ ನಾವಿಕನಿಲ್ಲದ ದೋಣಿಯಂತಾಗಿದೆ: ದಿನೇಶ್ ಗುಂಡೂರಾವ್
National Share

ಚೀನಾ ಆಕ್ರಮಣ, ಪ್ರಧಾನಿ ಹೇಳಿಕೆಗೆ ಪ್ರತಿಪಕ್ಷ ನಾಯಕರ ಆಕ್ಷೇಪ

ನವದೆಹಲಿ, ಜೂನ್ ಜೂ.20 (ಯುಎನ್ಐ ) ಪೂರ್ವ ಲಡಾಕ್ನ ಗಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಸೈನಿಕರು ಭಾರತದ ಭೂಪ್ರದೇಶದೊಳಗೆ ಪ್ರವೇಶಿಸಿಲ್ಲ ಹಾಗೂ ಭಾರತೀಯ ಸೇನೆಯ ಯಾವುದೇ ಠಾಣೆಯನ್ನು ವಶಪಡಿಸಿಕೊಂಡಿಲ್ಲವೆಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು, ಅತಿಕ್ರಮಣ ನಡೆಸಿದ ಚೀನಾಗೆ ಭಾರತದ ಭೂಪ್ರದೇಶವನ್ನು ಒಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ. ಒಂದು ವೇಳೆ ಘರ್ಷಣೆ ನಡೆದ ಪ್ರದೇಶ ಚೀನಿಯರಿಗೆ ಸೇರಿದ್ದಾಗಿದ್ದರೆ, ನಮ್ಮ ಯೋಧರು ಏಕೆ ಹುತಾತ್ಮರಾದರು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸಹ ಪ್ರಧಾನಿ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿದ್ದಾರೆ ಚೀನಾ ಅತಿಕ್ರಮಣ ನಡೆಸಿಲ್ಲ ಎಂದರೆ ಇತ್ತಿಚೆಗೆ ಸಭೆಯಲ್ಲಿ ಭಾರತ ಹಾಗೂ ಚೀನಾದ ಹಿರಿಯ ಕಮಾಂಡರ್ಗಳು ಏನು ಹವಾಮಾನ ಬಗ್ಗೆ ಚರ್ಚಿ ಮಾಡಿದರೆ ಎಂದು ಪ್ರಶ್ನೆ ಮಾಡಿದ್ದಾರೆ ''ಒಳನುಸುಳುವಿಕೆ ನಡೆದಿಲ್ಲ ಹಾಗೂ ಗಡಿ ರೇಖೆಬಳಿ ಯಾವುದೆ ಉಲ್ಲಂಘನೆಯಾಗಿಲ್ಲ ಎನ್ನುವುದಾದರೆ ಎರಡೂ ಕಡೆ ಸೇನೆಗಳ ವಾಪಾಸಾತಿಯ ಬಗ್ಗೆ ಯಾಕೆ ಇಷ್ಟೊಂದು ಮಾತುಕತೆಯಾದರು ಏಕೆ ನಡೆಯಬೇಕಿತ್ತು ಎಂದುಅಅವರು ಪ್ರಶ್ನೆ ಮಾಡಿದ್ದಾರೆ.
ಭಾರತೀಯ ಭೂಪ್ರದೇಶದೊಳಗೆ ಯಾರೂ ಕೂಡಾ ಒಳನುಸುಳಿಲ್ಲವೆಂಬ ಮೋದಿಯವರ ಹೇಳಿಕೆಯನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡಾ ಪ್ರಶ್ನೆ ಮಾಡಿದ್ದಾರೆ.
ಯುಎನ್ಐ ಕೆಎಸ್ಆರ್ 2105