Friday, Aug 7 2020 | Time 17:37 Hrs(IST)
 • ಗಡಿಭಾಗದ ನೀರಿನ ಸಮಸ್ಯೆ ಪರಿಹರಿಸಲು ಆಂಧ್ರಪ್ರದೇಶದೊಂದಿಗೆ ನೀರು ಹಂಚಿಕೆ: ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್
 • ರಾಜ್ಯದಲ್ಲಿ ವರುಣನ ಆರ್ಭಟ: ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ, ರೆಡ್ ಅಲರ್ಟ್ ಘೋಷಣೆ
 • ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ವಿಶ್ವಾಸ ಹೊರಹಾಕಿದ ಮಿಶ್ರಾ
 • ಕ್ವಾರಂಟೈನ್‌ ನಿಯಮ ಉಲ್ಲಂಘನೆ; ಪ್ರತಿ ಸಾವಿರ ವ್ಯಕ್ತಿಗೆ ಇಬ್ಬರ ಮೇಲೆ ಎಫ್‌ಐಆರ್‌ ದಾಖಲು
 • ಕಾಂಗ್ರೆಸ್‌-ಚೀನಾ ಸರ್ಕಾರದ ಒಡಂಬಡಿಕೆ ಸುಪ್ರೀಂಕೋರ್ಟ್‌ಗೆ ಕೂಡ ಅಚ್ಚರಿ ತಂದಿದೆ; ನಡ್ಡಾ
 • ಡಾ ಕೆ ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ
 • ಕೊಂಕಣ ರೈಲ್ವೆಯಿಂದ ರೈಲುಗಳ ಮಾರ್ಗ ಬದಲಾವಣೆ
 • ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ
 • ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ
 • ಕೊಡಗು ಜಿಲ್ಲೆಯಲ್ಲಿ ಕೊರೊನಾಗೆ ಮಹಿಳೆ ಬಲಿ: ಸಾವಿನ ಸಂಖ್ಯೆ 11ಕ್ಕೇರಿಕೆ
 • ಗಾಂಜಾ ಮಾರಾಟ ಯತ್ನ: ಒಡಿಶಾ ಮೂಲದ ವ್ಯಕ್ತಿ ಬಂಧನ
 • ಧಾರವಾಡ: ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿಕೆ
 • ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‍ನಿಂದ ಕದನವಿರಾಮ ಉಲ್ಲಂಘನೆ: ಮೂವರು ನಾಗರಿಕರಿಗೆ ಗಾಯ
 • ಶಬನಮ್ ಡೆವಲಪರ್ಸ್ ನ ಶೂಟ್‍ಔಟ್ ಪ್ರಕರಣ; 13 ವರ್ಷ ಬಳಿಕ ಪ್ರಮುಖ ಆರೋಪಿ ಸೆರೆ
 • ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ರಿಯಾ ಚಕ್ರವರ್ತಿ ತೀವ್ರ ವಿಚಾರಣೆ
National Share

ಚೀನಿ ಯೋಧರು ಭಾರತದ ಭೂಭಾಗ ಅತಿಕ್ರಮಿಸಿಲ್ಲ : ಪ್ರಧಾನಿ

ನವದೆಹಲಿ, ಜೂನ್ 19 (ಯುಎನ್ಐ) ಭಾರತ ತನ್ನ ನೆರೆಹೊರೆಯವರೊಂದಿಗೆ ಸ್ನೇಹ, ಸೌಹಾರ್ದ ಸಂಬಂಧ ಬಯಸುತ್ತದೆ, ಆದರೆ ಅದಕ್ಕೆ ಧಕ್ಕೆ ತರಲು ಯತ್ನಸಿದರೆ, ಶಾಂತಿ ಕದಡಲು ಹೊರಟರೆ ಸುಮ್ಮನಿರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಶುಕ್ರವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮಾತನಾಡಿದ ಅವರು, "ಚೀನಿ ಯೋಧರು ಭಾರತದ ಭೂಭಾಗವನ್ನು ಅತಿಕ್ರಮಿಸಿಲ್ಲ ಅಥವಾ ಇಲ್ಲಿನ ಯಾವುದೇ ಠಾಣೆಯನ್ನೂ ವಶಪಡಿಸಿಕೊಂಡಿಲ್ಲ" ಎಂದು ಸ್ಪಷ್ಟಪಡಿಸಿದರು.
ಮುಂದುವರಿದು ಅವರು, "ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಆದರೆ, ನಮ್ಮನ್ನು ಹೆದರಿಸಲು ಪ್ರಯತ್ನಿಸಿದವರಿಗೆ ತಕ್ಕ ಪಾಠ ಕಲಿಸಲಾಗಿದೆ" ಎಂದು ಹೇಳಿದರು. ಲಡಾಖ್ ನ ಪೂರ್ವ ಭಾಗದ ವಾಸ್ತವ ಗಡಿರೇಖೆಯ ಬಳಿಯ ಭಾರತದ ಭೂಭಾಗವವನ್ನು ಪ್ರವೇಶಿಸಿ ಚೀನಿ ಯೋಧರು ಅತಿಕ್ರಮಿಸಿರಲಿಲ್ಲ ಎಂದರು.
"ಚೀನಾ ಕೃತ್ಯದಿಂದ ಇಡೀ ರಾಷ್ಟ್ರಕ್ಕೇ ನೋವಾಗಿದೆ, ಇತ್ತೀಚೆಗೆ ಮೂಲಸೌಕರ್ಯದಿಂದಾಗಿ ನಮ್ಮ ಪ್ಯಾಟ್ರೋಲಿಂಗ್ ಸಾಮರ್ಥ್ಯ ಹೆಚ್ಚಾಗಿದೆ. ದೇಶದ ಗಡಿರಕ್ಷಣೆಗಾಗಿ ಏನೆಲ್ಲ ಮಾಡಬೇಕೋ ಅದನ್ನು ನಮ್ಮ ಯೋಧರು ಮಾಡುತ್ತಿದ್ದಾರೆ" ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎನ್ ಸಿ ಪಿ ನಾಯಕ ಶರದ್ ಪವಾರ್, ಟಿ ಆರ್ ಎಸ್ ನ ಕೆ. ಚಂದ್ರಶೇಖರ ರಾವ್, ವೈ ಎಸ್ ಆರ್ ಕಾಂಗ್ರೆಸ್ ನ ಜಗನ್ಮೋಹನ್ ರೆಡ್ಡಿ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಸೇರಿದಂತೆ ವಿವಿಧ ರಾಜಕೀಯ ನಾಯಕರು ಕೆಲವು ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.
ಯುಎನ್ಐ ಜಿಎಸ್ಆರ್ 0041