Friday, Feb 28 2020 | Time 09:48 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಚಾರಿತ್ರಿಕ ಅಖಿಲ ಭಾರತ ಮುಷ್ಕರ- ಸಿಪಿಐಎಂ ಪಾಲಿಟ್ ಬ್ಯುರೋ

ನವದೆಹಲಿ, ಜ.8 (ಯುಎನ್ಐ) ದೇಶಾದ್ಯಂತ ಬುಧವಾರ ನಡೆದ ಅಖಿಲ ಭಾರತ ಮುಷ್ಕರದಲ್ಲಿ ಭಾಗಿಯಾಗಿ ಬೆಂಬಲ ನೀಡಿದ, ಕಾರ್ಮಿಕ ವರ್ಗ, ರೈತರು, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರ ಪ್ರಜಾಪ್ರಭುತ್ವವಾದಿ ಜನವಿಭಾಗಗಳನ್ನು ಸಿಪಿಐ(ಎಂ) ಪಾಲಿಟ್‌ಬ್ಯುರೊ ಅಭಿನಂದಿಸಿದೆ.
ವ್ಯಾಪಕ ಪ್ರಮಾಣದಲ್ಲಿ ಬಂಧನಗಳು, ದಮನವನ್ನು ಎದುರಿಸಿಯೂ ಈ ಮುಷ್ಕರ ಅತ್ಯಂತ ಯಶಸ್ವಿಯಾಗಿದೆ ಎಂದು ಅದು ಹೇಳಿದೆ.
ಮೋದಿ ಸರಕಾರದ ಧೋರಣೆಗಳಿಂದ ಕಾರ್ಮಿಕರು ಸೇರಿದಂತೆ ಜನಸಾಮಾನ್ಯರ ಜೀವನ ಮಟ್ಟ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ಸಂಘಟಿತ ವಲಯದಲ್ಲೂ, ಅಸಂಘಟಿತ ವಲಯದಲ್ಲೂ, ಹಣಕಾಸು ಮತ್ತು ಇತರ ಸೇವಾ ವಲಯಗಳಲ್ಲೂ ಕೈಗಾರಿಕಾ ಕಾರ್ಮಿಕರು ಅತ್ಯಂತ ಉತ್ಸಾಹದಿಂದ ಮುಷ್ಕರದಲ್ಲಿ ಭಾಗವಹಿಸಿದ್ದರಿಂದಾಗಿ ಅರ್ಥವ್ಯವಸ್ಥೆಯ ಎಲ್ಲ ವಿಭಾಗಗಳಲ್ಲೂ ಮುಷ್ಕರ ಯಶಸ್ವಿಯಾಗಿದೆ. ವಿಶೇಷವಾಗಿ, ಸಾರ್ವಜನಿಕ ವಲಯದಲ್ಲಿ, ಸಾರಿಗೆ, ಚಹಾ ತೋಟಗಳು, ಸೆಣಬು ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರು ಅತ್ಯಂತ ಉತ್ಸಾಹದಿಂದ ಮುಷ್ಕರದಲ್ಲಿ ಭಾಗವಹಿಸಿರುವುದು ಕಂಡಿದೆ ಬಂದಿದೆ ಎಂದು ಪಾಲಿಟ್ ಬ್ಯುರೋ ಹೇಳಿದೆ.
ಅಖಿಲ ಭಾರತ ಮುಷ್ಕರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಬಿಕ್ಕಟ್ಟಿನ ತೀವ್ರತೆಯನ್ನು ಎತ್ತಿ ತೋರಿದ ರೈತಾಪಿ ಜನಗಳು ಮತ್ತು ಕೃಷಿ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದೆ ಎಂದು ಪಾಲಿಟ್‌ ಬ್ಯುರೊ ಹೇಳಿದೆ.
ವಿದ್ಯಾರ್ಥಿ ಸಂಘಟನೆಗಳೂ ಹೆಚ್ಚುತ್ತಿರುವ ಶಿಕ್ಷಣ ಶುಲ್ಕ, ಇತ್ತೀಚೆಗೆ ಜಾಮಿಯಾ, ಎಎಂಯು ಮತ್ತು ಜೆಎನ್‌ಯು ಕ್ಯಾಂಪಸ್‌ಗಳಲ್ಲಿ ಪೊಲೀಸ್ ದೌರ್ಜನ್ಯದ ಮೂಲಕ ಪ್ರಜಾಪ್ರಭುತ್ವದ ಮೇಲೆ ಆಕ್ರಮಣಗಳಿಂದಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮುಷ್ಕರದ ಸಂದೇಶವನ್ನು, ವಿಶೇಷವಾಗಿ ಭಾರತದ ಸಂವಿಧಾನದ ರಕ್ಷಣೆಯ ಬಗ್ಗೆ ಕಳವಳದ ಸಂದೇಶವನ್ನು ಪಸರಿಸುವಲ್ಲಿ ಒಂದು ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಅಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕೇರಳದಲ್ಲಿ ಈ ಸಾರ್ವತ್ರಿಕ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದೆ. ತ್ರಿಪುರಾದಲ್ಲಿ ಬಿಜೆಪಿಯ ಮತ್ತು ರಾಜ್ಯ ಆಡಳಿತದ ಪಾಶವೀ ವರ್ತನೆಗಳನ್ನು ಎದುರಿಸಿ ಮುಷ್ಕರ ಭಾಗಶಃ ಯಶಸ್ವಿಯಾಗಿದೆ. ಮಣಿಪುರದಲ್ಲಿ ಮುಷ್ಕರ ಯಶಸ್ವಿಯಾಗಿದೆ. ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ನೇತೃತ್ವದ ಆಡಳಿತ ಬಂದ್‌ನ್ನು ವಿಫಲಗೊಳಿಸಲು ಸರ್ವಪ್ರಯತ್ನ ನಡೆಸಿದರೂ ಮುಷ್ಕರ ಅತ್ಯುತ್ಸಾಹದಿಂದ, ವ್ಯಾಪಕವಾಗಿ ನಡೆಯಿತು. ಅಸ್ಸಾಂ, ಬಿಹಾರ, ಝಾರ್ಖಂಡ್, ಪಂಜಾಬ್, ಒಡಿಶಾ, ಮಧ್ಯಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇನ್ನೂ ಹಲವು ರಾಜ್ಯಗಳಲ್ಲಿ ಮುಷ್ಕರ ಬಹಳ ಗಮನಾರ್ಹವಾಗಿತ್ತು ಎಂದು ಪಾಲಿಟ್‌ ಬ್ಯುರೊ ಹೇಳಿದೆ.
ಯುಎನ್ಐ ಎಎಚ್ 2140