Sunday, Aug 18 2019 | Time 04:47 Hrs(IST)
business economy Share

ಚಿಲ್ಲರೆ ಹಣದುಬ್ಬರ ಜೂನ್‌ನಲ್ಲಿ ಶೇ.3.18ರಷ್ಟು ಏರಿಕೆ

ನವದೆಹಲಿ, ಜುಲೈ 12 (ಯುಎನ್‌ಐ) ಭಾರತದ ಚಿಲ್ಲರೆ ಹಣದುಬ್ಬರವು 2019 ರ ಜೂನ್‌ನಲ್ಲಿ ಶೇ.3.18 ಕ್ಕೆ ಏರಿಕೆಯಾಗಿದ್ದು, ಈ ವರ್ಷದ ಮೇ ತಿಂಗಳಲ್ಲಿ ಶೇ.3.05 ರಷ್ಟಿತ್ತು ಎಂದು ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಅಲ್ಲದೆ, ಗ್ರಾಹಕ ಆಹಾರ ಬೆಲೆ ಹಣದುಬ್ಬರ (ಸಿಎಫ್‌ಪಿಐ) ಸಹ ಜೂನ್‌ನಲ್ಲಿ ಶೇ.2.17 ಕ್ಕೆ ಏರಿಕೆಯಾಗಿದ್ದು, 2019 ರ ಮೇ ತಿಂಗಳಲ್ಲಿ ಇದು ಶೇ.1.83 ರಷ್ಟಿತ್ತು ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವರದಿ ತಿಳಿಸಿದೆ.
2019ರ ಜೂನ್‌ನಲ್ಲಿ ಆಹಾರ ಮತ್ತು ಪಾನೀಯಗಳ ಹಣದುಬ್ಬರವನ್ನು ಶೇ.2.37 ಇದ್ದರೆ, ಪಾನ್‌, ತಂಬಾಕು ಮತ್ತು ಮಾದಕ ವಸ್ತುಗಳ ಹಣದುಬ್ಬರ ಶೇ. 4.11ರಷ್ಟಿದೆ.
ದ್ವಿದಳ ಧಾನ್ಯಗಳ ಹಣದುಬ್ಬರ ಎರಡು ಪಟ್ಟು ಹೆಚ್ಚಾಗಿದೆ, ಇದು ಜೂನ್‌ನಲ್ಲಿ ಶೇ.5.68 ರಷ್ಟಿದ್ದು, 2019ರ ಮೇ ತಿಂಗಳಲ್ಲಿ 2.13 ರಷ್ಟಿತ್ತು.
ಅಂಕಿಅಂಶಗಳ ಪ್ರಕಾರ, ಇಂಧನ ಮತ್ತು ಲಘು ಹಣದುಬ್ಬರವು ಜೂನ್‌ನಲ್ಲಿ ಶೇ.2.32 ಕ್ಕೆ ಇಳಿದಿದ್ದು, ಈ ವರ್ಷದ ಮೇ ತಿಂಗಳಲ್ಲಿ ಇದು ಶೇ.2.48ರಷ್ಟಿತ್ತು.
ತರಕಾರಿ ಹಣದುಬ್ಬರವು ಜೂನ್‌ನಲ್ಲಿ ಶೇ.4.66 ರಷ್ಟಿದ್ದು, ಈ ವರ್ಷದ ಹಿಂದಿನ ತಿಂಗಳಲ್ಲಿ ಶೇ.5.46 ರಷ್ಟಿತ್ತು.
ಧಾನ್ಯಗಳ ಹಣದುಬ್ಬರವು ಜೂನ್‌ನಲ್ಲಿ ಶೇ.1.24 ರಿಂದ 1.31 ಕ್ಕೆ ಏರಿಕೆಯಾಗಿದೆ ಮತ್ತು ವಸತಿ ಹಣದುಬ್ಬರವು ಶೇ.4.84 ಕ್ಕೆ ಹೆಚ್ಚಾಗಿದೆ. ಬಟ್ಟೆ ಮತ್ತು ಪಾದರಕ್ಷೆಗಳ ಹಣದುಬ್ಬರವು ಶೇ.1.52 ರಷ್ಟಿದ್ದು, 2019ರ ಮೇ ತಿಂಗಳಲ್ಲಿ 1.8ರಷ್ಟಿತ್ತು.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1922
More News

ಕ್ಯಾಥೆ ಪೆಸಿಫಿಕ್ ಏರ್‌ವೇಸ್‌ನ ಸಿಇಒ ರಾಜೀನಾಮೆ

16 Aug 2019 | 7:15 PM

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಏರಿಕೆ

16 Aug 2019 | 6:15 PM

 Sharesee more..

ಸೆನ್ಸೆಕ್ಸ್ 38 ಅಂಕ ಚೇತರಿಕೆ

16 Aug 2019 | 6:05 PM

 Sharesee more..

ರಾಮಾಶ್ರಮದಲ್ಲಿ ನಾಳೆ ಗಮಕ ವಾಚನ

14 Aug 2019 | 9:42 PM

 Sharesee more..

ಸೆನ್ಸೆಕ್ಸ್‌ 353 37 ಅಂಕ ಚೇತರಿಕೆ

14 Aug 2019 | 5:04 PM

 Sharesee more..