Sunday, Mar 29 2020 | Time 00:53 Hrs(IST)
National Share

ಜನತೆಗೆ ಹೊಸ ವರ್ಷದ ಶುಭ ಹಾರೈಸಿದ ಉಪರಾಷ್ಟ್ರಪತಿ

ಜನತೆಗೆ ಹೊಸ ವರ್ಷದ  ಶುಭ ಹಾರೈಸಿದ  ಉಪರಾಷ್ಟ್ರಪತಿ
ಜನತೆಗೆ ಹೊಸ ವರ್ಷದ ಶುಭ ಹಾರೈಸಿದ ಉಪರಾಷ್ಟ್ರಪತಿ

ನವದೆಹಲಿ, ಡಿಸೆಂಬರ್ 31 (ಯುಎನ್‌ಐ) ಹೊಸ ವರ್ಷದ ಅಂಗವಾಗಿ ದೇಶದ ಜನತೆಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಶುಭ ಹಾರೈಸಿದ್ದಾರೆ.

ಅವರು ಈ ಹೊಸ ವರ್ಷದಂದು, ನಾವು ದಯೆ ಸಹಾನುಭೂತಿ ಜೊತೆಗೆ ಮಾನವರಾಗಲು ನಿರ್ಧರಿಸೋಣ, ಪಣತೋಡೊಣ ಎಂದು ಸಂದೇಶ ನೀಡಿದ್ದಾರೆ.

ಹೊಸ ವರ್ಷವು ಹೊಸ ಆರಂಭದ ಸಮಯ ಎಂದು ಹೇಳಿದ ಅವರು,ಇದು ಜೀವನದಲ್ಲಿ ಹೊಸ ಗುರಿ ಮತ್ತು ಹೊಸ ನಿರ್ಣಯ ಮಾಡುವ ಮತ್ತು ಸಂತೋಷಪಡುವ, ಮತ್ತು ಭರವಸೆಯ ಸಮಯ ಎಂದು ಹೇಳಿದ್ದಾರೆ.

ನಿಜವಾದ ಸಾಮರ್ಥ್ಯವನ್ನು ಅರಿಯುವ ಪ್ರತಿಜ್ಞೆ ಮಾಡಬೇಕು , ವ್ಯಕ್ತಿಗಳಾಗಿ ಮೊದಲು ಮತ್ತು ನಂತರ ಒಟ್ಟಾಗಿ, ರಾಷ್ಟ್ರವಾಗಿ. "ನಾವು ಶಾಂತಿ, ಪ್ರೀತಿ ಮತ್ತು ಸಹೋದರತ್ವದ ಶಾಶ್ವತ ಮೌಲ್ಯಗಳಿಗೆ ನಮ್ಮನ್ನು ನಾವು ಅರ್ಪಿಸಿಕೊಂಡು ನ್ಯಾಯಯುತ, ಸಮಾನ, ಸಮೃದ್ಧ ಜಗತ್ತನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡೋಣ" ಎಂದು ಅವರು ಹೇಳಿದರು.

"ಈ ಸಂತೋಷದ ಸಂದರ್ಭದಲ್ಲಿ, ಇಡಿ ಪ್ರಪಂಚದ ಶಾಂತಿ, ಸುಖ, ನೆಮ್ಮದಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸೋಣ ಎಂದೂ ಉಪರಾಷ್ಟ್ರಪತಿ ತಮ್ಮ ಸಂದೇಶದಲ್ಲಿ ಶುಭ ಹಾರೈಸಿದ್ದಾರೆ.

ಯುಎನ್ಐ ಕೆಎಎಸ್ಆರ್ 1635

More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..