Sunday, Mar 29 2020 | Time 00:31 Hrs(IST)
National Share

ಜಪಾನ್‌ ಕ್ರೂಸ್ ಹಡಗಿನಲ್ಲಿ 70 ಹೊಸ ಕೊರೋನವೈರಸ್ ಪ್ರಕರಣ ದೃಢ: ಸೋಂಕಿನ ಸಂಖ್ಯೆ 355 ಕ್ಕೆ ಏರಿಕೆ

ಜಪಾನ್‌ ಕ್ರೂಸ್ ಹಡಗಿನಲ್ಲಿ 70 ಹೊಸ ಕೊರೋನವೈರಸ್ ಪ್ರಕರಣ ದೃಢ: ಸೋಂಕಿನ ಸಂಖ್ಯೆ 355 ಕ್ಕೆ ಏರಿಕೆ
ಜಪಾನ್‌ ಕ್ರೂಸ್ ಹಡಗಿನಲ್ಲಿ 70 ಹೊಸ ಕೊರೋನವೈರಸ್ ಪ್ರಕರಣ ದೃಢ: ಸೋಂಕಿನ ಸಂಖ್ಯೆ 355 ಕ್ಕೆ ಏರಿಕೆ

ಟೋಕಿಯೊ, ಫೆ 16 (ಕ್ಸಿನ್ಹುವಾ) ಟೋಕಿಯೊ ಬಳಿ ಸಮುದ್ರದಲ್ಲೇ ನಿಲ್ಲಿಸಲಾಗಿರುವ ಕ್ರೂಸ್ ಹಡಗಿನಲ್ಲಿ(ಪ್ರವಾಸಿ ಹಡಗು) ಇನ್ನೂ 70 ಜನರಿಗೆ ಕರೋನವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಮಾರಕ ಸೋಂಕಿಗೆ ಒಳಗಾದವರ ಸಂಖ್ಯೆ 355 ಕ್ಕೆ ಏರಿದೆ ಎಂದು ಜಪಾನ್ ಆರೋಗ್ಯ ಸಚಿವ ಕಟ್ಸುನೊಬು ಕ್ಯಾಟೊ ಭಾನುವಾರ ತಿಳಿಸಿದ್ದಾರೆ.

70 ಜನರ ಪೈಕಿ 38 ಜನರಲ್ಲಿ ಜ್ವರ ಮತ್ತು ಕೆಮ್ಮಿನಂತಹ ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ರಕ್ತ ಪರೀಕ್ಷೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯ ತಿಳಿಸಿದೆ.

3,700 ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಒಟ್ಟು 1,219 ಜನರನ್ನು ಸಚಿವಾಲಯ ಇದುವರೆಗೆ ಪರೀಕ್ಷಿಸಿದೆ ಎಂದು ಜಪಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಎನ್‌ಎಚ್‌ಕೆ ಗೆ ಕ್ಯಾಟೊ ತಿಳಿಸಿದ್ದಾರೆ.

ವಿಮಾನದಲ್ಲಿದ್ದ ಹಾಂಕಾಂಗ್‌ನ 80 ವರ್ಷದ ಪ್ರಯಾಣಿಕರೊಬ್ಬರಿಗೆ ನ್ಯುಮೋನಿಯಾ ಉಂಟುಮಾಡುವ ವೈರಸ್ ಸೋಂಕು ತಗುಲಿರುವುದು ಕಂಡುಬಂದ ನಂತರ ಯೋಕೊಹಾಮಾ ಬಂದರು ಸಮೀಪ ಹಡಗನ್ನು ಸಮುದ್ರದಲ್ಳೇ ಎರಡು ವಾರಗಳ ಯಾವುದೇ ಸಂಪರ್ಕವಿಲ್ಲದೆ ಪ್ರತ್ಯೇಕವಾಗಿ ಇಡಲಾಗಿದೆ.

70 ಮತ್ತು ಮೇಲ್ಟಟ್ಟ ವಯಸ್ಸಿನವರನ್ನು ಪರೀಕ್ಷಿಸುವತ್ತ ಈವರೆಗೆ ಗಮನ ಹರಿಸಲಾಗಿದೆ. ಭಾನುವಾರದಿಂದ 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಪರೀಕ್ಷಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಪ್ರಯಾಣಿಕರಲ್ಲಿ ಸೋಂಕು ದೃಢಪಡದಿದ್ದರೆ ಮತ್ತು ಅವರಲ್ಲಿ ಆರೋಗ್ಯ ಸಮಸ್ಯೆಗಳು ಇಲ್ಲದಿದ್ದರೆ ಅಂತವರನ್ನು ಹಡಗು ಇಳಿಯಲು ಅನುಮತಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಟೋಕಿಯೊದಲ್ಲಿ 15 ಪ್ರಕರಣಗಳು ಸೇರಿದಂತೆ ಜಪಾನ್ ನಲ್ಲಿ 407 ಕೊರೊನವೈರಸ್ ಪ್ರಕರಣಗಳು ದೃಢಪಟ್ಟಿವೆ. ಮಾರಕ ಸೋಂಕಿಗೆ 80 ವರ್ಷದ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ.ಯುಎನ್ಐ ಎಸ್ಎಲ್ಎಸ್ 1852

More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..