Wednesday, Feb 26 2020 | Time 10:43 Hrs(IST)
  • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
  • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
International Share

ಜಪಾನ್‌ನಲ್ಲಿ ಕರೋನವೈರಸ್ ಎರಡನೇ ಪ್ರಕರಣ ದಾಖಲು

ಟೋಕಿಯೊ, ಜನವರಿ 24 (ಸ್ಪುಟ್ನಿಕ್) ಜಪಾನ್‌ನಲ್ಲಿ ಹೊಸ ಕರೋನವೈರಸ್ ಸೋಂಕಿನ ಎರಡನೆ ಪ್ರಕರಣ ದಾಖಲಾಗಿದೆ ಎಂದೂ ವರದಿಯಾಗಿದೆ .
ಮೊದಲ ಪ್ರಕರಣ ಇದೇ 15 ರಂದು ಜಪಾನ್‌ನಲ್ಲಿ ದಾಖಲಾಗಿತ್ತು. ಚೀನಾದ ನಗರವಾದ ವುಹಾನ್‌ಗೆ ಭೇಟಿ ನೀಡಿದ್ದು,ವ್ಯಕ್ತಿಯಲ್ಲಿ ರೋಗದ ಸೋಂಕು ಕಾಣಿಸಿಕೊಂಡಿದ್ದು, ಇದೇ ಸಮಸ್ಯೆಗೆ ಮೂಲ ಎಂದೂ ಹೇಳಲಾಗಿದೆ.
ಎರಡನೆಯ ವ್ಯಕ್ತಿಯೂ ಚೀನಾದ ಪ್ರವಾಸಿಗರಾಗಿದ್ದು, ಅವರು ಇದೇ 19 ರಂದು ವುಹಾನ್‌ನಿಂದ ಆಗಮಿಸಿ ಜ್ವರದಿಂದ ಮರುದಿನ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂದು ಎನ್‌ಎಚ್‌ಕೆ ಪ್ರಸಾರ ಸಂಸ್ಥೆ ವರದಿ ಮಾಡಿದೆ.
ಆಗ ವೈದ್ಯರು ನ್ಯುಮೋನಿಯಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದಿದ್ದರೂ , ಆದರೆ ಬುಧವಾರ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿದಾಗ ಹೊಸ ಕರೋನವೈರಸ್ ಸೋಂಕುವಿರುವುದು ದೃಡಪಟ್ಟಿದೆ.
ಅಪರಿಚಿತ ರೀತಿಯ, ಹೊಸ ನ್ಯುಮೋನಿಯಾವನ್ನು ಡಿಸೆಂಬರ್ ಅಂತ್ಯದಲ್ಲಿ ವುಹಾನ್‌ನಲ್ಲಿ ಮೊದಲು ಪತ್ತೆ ಮಾಡಲಾಗಿದೆ, ಚೀನಾದಾದ್ಯಂತ ಈಗಾಗಲೇ 800 ಕ್ಕೂ ಹೆಚ್ಚು ಪ್ರಕರಣಗಳು ದೃಡಪಟ್ಟಿವೆ.
ಅಮೆರಿಕ ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್ನಲ್ಲಿ ಹೊಸ ಕರೋನವೈರಸ್ ದೃಡಪಡಿಸಿದ ಅನೇಕ ಪ್ರಕರಣಗಳು ದಾಖಲಾಗಿವೆ. ಆದರೆ ಏಕಾಏಕಿ ಜಾಗತಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಅಪ್ರಸ್ತುತ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
ಯುಎನ್ಐ ಕೆಎಸ್ಆರ್