Wednesday, May 27 2020 | Time 00:54 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Flash Share

ಜಪಾನ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ಹೊರಟ ಮೋದಿ

ಜಪಾನ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ಹೊರಟ   ಮೋದಿ
ಜಪಾನ್ ಪ್ರವಾಸ ಮುಗಿಸಿ ಸ್ವದೇಶಕ್ಕೆ ಹೊರಟ ಮೋದಿ

ಒಸಾಕಾ, ಜೂನ್ 29 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಸುದೀರ್ಘ ಜಪಾನ್ ಭೇಟಿ ಹಾಗೂ ವಿಶ್ವ ನಾಯಕರ ನಿರ್ಣಾಯಕ ದ್ವಿಪಕ್ಷೀಯ, ಬಹುಪಕ್ಷೀಯ ಮಾತುಕತೆ, ಮತ್ತು ಜಿ 20 ಶೃಂಗಸಭೆಯ ನಂತರ ಈಗ ವಿದೇಶ ಪ್ರವಾಸ ಮುಗಿಸಿ ಸ್ವದೇಶಕ್ಕೆ ಹೊರಟಿದ್ದಾರೆ.

ಭೇಟಿ ಕಾಲದಲ್ಲಿ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ , ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಮತ್ತು ಆತಿಥೇಯ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಹತ್ವದ ಮಾತುಕತೆ ನಡೆಸಿದ್ದರು

ಬ್ರಿಕ್ಸ್ ಮತ್ತು ಆರ್ ಐ ಸಿ ಚೌಕಟ್ಟಿನಡಿಯಲ್ಲಿ ಅನೌಪಚಾರಿಕ ಸಭೆಗಳಲ್ಲಿ, ಭಯೋತ್ಪಾದನೆ ಕುರಿತು ಜಾಗತಿಕ ಸಮ್ಮೇಳನವನ್ನು ಶೀಘ್ರವಾಗಿ ಆಯೋಜಿಸಲು ಪ್ರಧಾನ ಮಂತ್ರಿ ಬಲವಾದ ಪ್ರಸ್ತಾಪ ಮಾಡಿರುವುದು ಇತರೆ ನಾಯಕರ ಗಮನ ಸೆಳೆದಿದೆ.

ಭಯೋತ್ಪಾದನೆ ಮಾನವ ಜನಂಗಕ್ಕೆ ಅಂಟಿದ ದೊಡ್ಡ ಸವಾಲು ಇದನ್ನು ಎಲ್ಲರೂ ಸೇರಿ ಬಗ್ಗೆ ಬಡಿಯಬೇಕು ಇದರಲ್ಲಿ ಜಾತಿ, , ಧರ್ಮ ಭಾಷೆ ಗಡಿ ಯಾವುದನ್ನು ನೋಡಬಾರದು ಮೋದಿ ಒತ್ತಿ ಹೇಳಿರುವುದನ್ನು ವಿಶ್ವ ನಾಯಕರು ಮೆಚ್ಚಿಕೊಂಡಿದ್ದಾರೆ ಎಂದು ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಇದನ್ನು ಯಾರೊಬ್ಬರು ಉಪೇಕ್ಷೆ ಮಾಡಬಾರದು ಎಂದು ಹೇಳಿ ಜಾಗತಿಕ ಸಮುದಾಯದ ಬೆಂಬಲ ಕೋರಿದ್ದರು. ಒಂದು ನಿರ್ದಿಷ್ಟ ಪ್ರಶ್ನೆಗೆ, ಅವರು ಎಷ್ಟು ದೇಶಗಳು ಇದನ್ನು ಬೆಂಬಲಿಸಿವೆ ಎಂಬ ಪ್ರಶ್ನೆಗೆ, ಜಂಟಿ ಹೇಳಿಕೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸಿವೆ ಎಂದು ಹೇಳಿದರು.

ಈ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೌದಿ ರಾಜಕುಮಾರನನ್ನು ಮೋದಿಯವರನ್ನು ಆಹ್ವಾನಿಸಿದ್ದಾರೆ ಮತ್ತು ಪ್ರಧಾನಿ ಇದನ್ನು ಒಪ್ಪಿಕೊಂಡಿದ್ದಾರೆ

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಅವರೊಂದಿಗೆ ಪ್ರಧಾನಿ ದ್ವಿಪಕ್ಷೀಯ ಮಾತುಕತೆ ನಡೆಸಿದರು ಎಂದು ಅವರು ಹೇಳಿದರು. .

ಯುಎನ್ಐ ಕೆಸ್ಅರ್ ಎಎಚ್ 1303