Wednesday, Feb 26 2020 | Time 09:24 Hrs(IST)
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
Special Share

ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿ 36 ಸಚಿವರನ್ನು ಪಿಕ್‌ನಿಕ್‌ಗಾಗಿ ಕಳುಹಿಸಿದ್ದಾರೆ: ಕಾಂಗ್ರೆಸ್

ಜಮ್ಮು, ಜನವರಿ 24 (ಯುಎನ್‌ಐ) ಕೇಂದ್ರ ಸರ್ಕಾರದ 36 ಸಚಿವರ ಜಮ್ಮು-ಕಾಶ್ಮೀರ ಭೇಟಿಯನ್ನು “ಫ್ಲಾಪ್ ಶೋ” ಎಂದು ಹೇಳಿರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುಲಾಮ್ ಅಹ್ಮದ್ ಮಿರ್, ಈ ಸಚಿವರನ್ನು ಪ್ರಧಾನಿ ನರೇಂದ್ರ ಮೋದಿ ಜಮ್ಮು ಕಾಶ್ಮೀರಕ್ಕೆ ‘ಪಿಕ್‌ನಿಕ್’ ಗೆ ಕಳುಹಿಸಿದ್ದಾರೆ ಎಂದು ಶುಕ್ರವಾರ ವ್ಯಂಗ್ಯವಾಡಿದ್ದಾರೆ.
"ಕೇಂದ್ರ ಸಚಿವರು, ಜನಜಾಗೃತಿ ಕಾರ್ಯಕ್ರಮದ ಭಾಗವಾಗಿ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ್ದರು, ಆದರೆ ಅವರು ಸಾಮಾನ್ಯ ಜನರನ್ನು ಭೇಟಿಯಾಗುವುದಾಗಲೀ ಅಥವಾ ಜನಸಾಮಾನ್ಯರೊಂದಿಗೆ ಸಂವಹನ ನಡೆಸುವುದಾಗಲೀ ಮಾಡಿಲ್ಲ" ಎಂದು ಮಿರ್ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮಾಜಿ ಸಚಿವರಾದ ಮುಲಾ ರಾಮ್, ರಾಮನ್ ಭಲ್ಲಾ ಮತ್ತು ಮುಖ್ಯ ವಕ್ತಾರ ರವೀಂದರ್ ಶರ್ಮಾ ಅವರು ಕೂಡ ಉಪಸ್ಥಿತರಿದ್ದರು.
"ಮಂತ್ರಿಗಳು ಯಾವುದೇ ಹೊಸ ಯೋಜನೆಯನ್ನು ಉದ್ಘಾಟಿಸಲಿಲ್ಲ, ಆದರೆ ಪೂರ್ಣಗೊಂಡ ಹಳೆಯ ಅಭಿವೃದ್ಧಿ ಕಾರ್ಯಗಳು ಅಥವಾ ಅಡಿಪಾಯಕ್ಕಾಗಿ ಕಾಯುತ್ತಿದ್ದವುಗಳನ್ನು ಉದ್ಘಾಟಿಸಿದರು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪಿಕ್ನಿಕ್ ಗಾಗಿ ಮಂತ್ರಿಗಳನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಿದ್ದಾರೆ” ಎಂದು ಹೇಳಿದರು.
ಅಧಿಕೃತ ಅಂಕಿಅಂಶಗಳ ಪ್ರಕಾರ, ಅವರ ಭೇಟಿಯ ಸಮಯದಲ್ಲಿ ಪ್ರತಿ ಸಚಿವರಿಗೆ ಸುಮಾರು 50 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ, ಇದು ಸಾರ್ವಜನಿಕರು ಕಷ್ಟ ಪಟ್ಟು ಕಟ್ಟಿದ ತೆರಿಗೆ ಹಣವಾಗಿದೆ ಎಂದು ಹೇಳಿದರು.
"ಭೇಟಿ ಕೇವಲ ಅಣಕು. ಅವರು ಉದ್ಘಾಟಿಸಿರುವ ಯೋಜನೆಗಳು ಬಹುತೇಕ ಹಳೆಯವು ಮತ್ತು ಜನರಿಗೆ ಅವರ ಭೇಟಿಯಿಂದ ಯಾವುದೇ ಪ್ರಯೋಜವೂ ಆಗಿಲ್ಲ" ಎಂದು ಮಿರ್ ಹೇಳಿದರು, ಇದು ಕೇವಲ ಮಂತ್ರಿಗಳಿಗೆ ಫೋಟೋ ಶೂಟ್ ಆಗಿದೆ.
ಕೇಂದ್ರವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಪುನಃಸ್ಥಾಪಿಸಬೇಕು ಮತ್ತು ಉದ್ಯೋಗಗಳು ಮತ್ತು ಜನರ ಭೂಮಿಯನ್ನು ಭದ್ರಪಡಿಸಿಕೊಳ್ಳಬೇಕು ಎಂದು ಮಿರ್ ಹೇಳಿದರು.
"ಇನ್ನೂ 250 ಉಗ್ರರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಶಾಂತಿ ಪುನಃಸ್ಥಾಪನೆಯಾಗಿದೆ ಎಂದು ಸರ್ಕಾರ ಹೇಳುತ್ತಾರೆ" ಎಂದು ಜೆಕೆಪಿಸಿ ಮುಖ್ಯಸ್ಥರು ಹೇಳಿದರು.
ಶಾಂತಿಯನ್ನು ಪುನಃಸ್ಥಾಪಿಸಲು, ಬಂಧನಕ್ಕೊಳಗಾದ ರಾಜಕೀಯ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಅವರು ಒತ್ತಾಯಿಸಿದರು.
ಯುಎನ್ಐ ಎಎಚ್ 2245
More News

ಮಾಜಿ ಶಾಸಕ ಸಂಜೀವ ರಾವ್ ನಿಧನ

25 Feb 2020 | 10:39 PM

 Sharesee more..
ದೆಹಲಿ ಹಿಂಸಾಚಾರ; ವದಂತಿಗಳಿಗೆ ಕಿವಿಕೊಡಬೇಡಿ, ಶಾಂತಿ ಕಾಪಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ

ದೆಹಲಿ ಹಿಂಸಾಚಾರ; ವದಂತಿಗಳಿಗೆ ಕಿವಿಕೊಡಬೇಡಿ, ಶಾಂತಿ ಕಾಪಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ

25 Feb 2020 | 7:09 PM

ನವದೆಹಲಿ, ಫೆ 25(ಯುಎನ್ಐ) ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧಿ ಪ್ರತಿಭಟನಕಾರ ನಡುವಣ ಘರ್ಷಣೆ ನಂತರ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಿನ್ನಲೆಯಲ್ಲಿ ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಷಾ ಮಂಗಳವಾರ ಮನವಿ ಮಾಡಿದ್ದಾರೆ.

 Sharesee more..
ಹೈದ್ರಾಬಾದ್ ಹೌಸ್ ನಲ್ಲಿ ಮೋದಿ - ಟ್ರಂಪ್ ದ್ವಿಪಕ್ಷೀಯ ಮಾತುಕತೆ

ಹೈದ್ರಾಬಾದ್ ಹೌಸ್ ನಲ್ಲಿ ಮೋದಿ - ಟ್ರಂಪ್ ದ್ವಿಪಕ್ಷೀಯ ಮಾತುಕತೆ

25 Feb 2020 | 5:53 PM

ನವದೆಹಲಿ, ಫೆ ೨೫ (ಯುಎನ್‌ಐ) ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೆಹಲಿಯ ಹೈದರಾಬಾದ್ ಹೌಸ್ ಭವನದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗ ಮಾತುಕತೆ ನಡೆಸುತ್ತಿದ್ದಾರೆ.

 Sharesee more..