Sunday, Mar 29 2020 | Time 00:38 Hrs(IST)
National Share

ಜಮ್ಮು ಕಾಶ್ಮೀರದಲ್ಲಿ ಭಾರಿ ಹಿಮಪಾತ: ದೆಹಲಿಯಲ್ಲಿ ಅಕಾಲಿಕ ಮಳೆ

ನವದೆಹಲಿ- ಶ್ರೀನಗರ, ಜನವರಿ 16 (ಯುಎನ್‌ಐ) ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 40 ವರ್ಷಗಳಲ್ಲಿ ಗುರುವಾರ ಅತಿ ಹೆಚ್ಚಿನ,ಭಾರಿ ಹಿಮಪಾತವಾಗಿ ಜನಜೀವನ ಭಾದಿತವಾಗಿದ್ದರೆ, ಇತ್ತ ರಾಷ್ಠ್ರ ರಾಜಧಾನಿ ದೆಹಲಿಯ ಅಕ್ಕಪಕ್ಕದ ಪ್ರದೇಶಗಳಲ್ಲಿ ಅಕಾಲಿಕ ಮಳೆಯಾಗಿದೆ.
ದೆಹಲಿ, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ಬೆಳಿಗ್ಗೆಯಿಂದ ಮಳೆಯಾಗಿದೆ. ಯುಪಿಯ ಕೆಲವು ಜಿಲ್ಲೆಗಳಾದ ಲಕ್ನೋ, ಸೀತಾಪುರ, ಕಾನ್ಪುರ ಮತ್ತು ಇತರ ಕಡೆಶಾಲೆಗಳನ್ನು ಮಳೆಯ ಕಾರಣಕ್ಕೆ ಮುಚ್ಚಲಾಗಿದೆ.
ಕಾಶ್ಮೀರ ಕೇಂದ್ರ ಪ್ರದೇಶವು ಕಳೆದ ನಾಲ್ಕು ದಶಕಗಳಲ್ಲಿ ಅತಿ ಹೆಚ್ಚು ಹಿಮಪಾತ ಅನುಭವಿಸಿದೆ. ಈ ನಡುವೆ ಲಡಾಖ್‌ನ ಡ್ರಾಸ್‌ನ ಮುಷ್ಕೂ ಕಣಿವೆಯಲ್ಲಿ ಸೇನಾ ಶಿಬಿರಕ್ಕೆ ಅಪ್ಪಳಿಸಿದ ಹಿಮಪಾತದಲ್ಲಿ ಸೈನಿಕನೊಬ್ಬ ಮೃತಪಟ್ಟಿದ್ದಾನೆ. ಹಲವಾರು ಸೈನಿಕರನ್ನು ಹಿಮದಿಂದ ರಕ್ಷಿಸಿ
ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಮೃತಪಟ್ಟ ಯೋಧನನ್ನು ಧರ್ಮೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಕಾಶ್ಮೀರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ವಿದ್ಯುತ್ ಇಲಾಖೆಯ ಕಾರ್ಮಿಕರೊಬ್ಬರು ವಿದ್ಯುದಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.
ಬಂಡಿಪೋರಾ ಜಿಲ್ಲೆಯಲ್ಲಿ ಹಿಮಪಾತವು ಕಿಶಂಗಂಗಾ ಜಲ ಯೋಜನೆಗೆ ಅಪ್ಪಳಿಸಿದ್ದು, ನೀರಿನ ಸರಬರಾಜಿಗೆ ತೊಂದರೆಯಾಗಿದೆ.
ಕಣಿವೆಯಲ್ಲಿ ವಿಮಾನ ಮತ್ತು ರೈಲು ಸೇವೆ ಸ್ಥಗಿತಗೊಂಡಿವೆ. ಟ್ರ್ಯಾಕ್‌ಗಳು ಹಲವಾರು ಅಡಿ ಹಿಮದ ಅಡಿಯಲ್ಲಿದೆ. ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಹಿಮಪಾತದಿಂದಾಗಿ ಬೆಳಿಗ್ಗೆ ಬರುವ ಮತ್ತು ಹೊರಹೋಗುವ ಎಲ್ಲಾ ವಿಮಾನಗಳನ್ನು ರದ್ದುಪಡಿಸಲಾಗಿದೆ.
ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸತತ ನಾಲ್ಕನೇ ದಿನವೂ 4,000 ಕ್ಕೂ ಹೆಚ್ಚು ವಾಹನಗಳು ಸಿಕ್ಕಿಹಾಕಿಕೊಂಡಿವೆ.
ನಾಲ್ಕು ದಿನಗಳಿಂದ ವಿದ್ಯುತ್ ವೈಫಲ್ಯದಿಂದಾಗಿ ಶ್ರೀನಗರದ ಕೆಲವು ಭಾಗಗಳು ಕತ್ತಲೆಯಲ್ಲಿ ಉಳಿದಿವೆ.
ಕಾಶ್ಮೀರ ವಿಶ್ವವಿದ್ಯಾಲಯವು ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ವೃತ್ತಿಪರ ಮಂಡಳಿಯು ಇದೆ ಭಾನುವಾರದಂದು ನಡೆಸಬೇಕಿದ್ದ ಎಲ್ಲ ಪರೀಕ್ಷೆಗಳನ್ನು ಸಹ ಮುಂದೂಡಿದೆ.
ಯುಎನ್ಐ ಕೆಎಸ್ಆರ್ 2215
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..