Friday, Feb 28 2020 | Time 07:11 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಜಮ್ಮು ಕಾಶ್ಮೀರದಲ್ಲಿ ಹಂತ ಹಂತವಾಗಿ ಅಂತರ್ಜಾಲ ಸೇವೆ

ಜಮ್ಮು, ಜ 15 (ಯುಎನ್ಐ) ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಹಂತ ಹಂತವಾಗಿ ಅಂತರ್ಜಾಲ ಸೇವೆ ಬಳಕೆಗೆ ವಿಧಿಸಲಾಗಿರುವ ನಿರ್ಬಂಧವನ್ನು ತೆರವುಗೊಳಿಸಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಬುಧವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರೆ ನೇಪಥ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುರ್ಮು, “ಸರ್ಕಾರ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ನಿಯಮಿತವಾಗಿ ಪರಿಶೀಲನೆ ನಡೆಸುತ್ತಿದ್ದು ಪರಿಸ್ಥಿತಿ ಆಧರಿಸಿ ಹಂತ ಹಂತವಾಗಿ ಅಂತರ್ಜಾಲ ಸೇವೆ ಒದಗಿಸಲಾಗುವುದು” ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಲೆಫ್ಟಿನೆಂಟ್ ಗವರ್ನರ್ ಸಲಹೆಗಾರ ಫಾರುಕ್ ಖಾನ್, ಹೊಸ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ತಲೆ ಎತ್ತಲಿದ್ದು ಇದು ಜಮ್ಮು ಕಾಶ್ಮೀರದಲ್ಲಿ ಕ್ರೀಡಾಭಿವೃದ್ಧಿಗೆ ಹೆಚ್ಚಿನ ಇಂಬು ನೀಡಲಿದೆ ಎಂದರು. ವಿವಿಧ ಹಂತಗಳಲ್ಲಿ ಕ್ರೀಡಾ ಸೌಲಭ್ಯ ನೀಡಲು ಸರ್ಕಾರ ತೀವ್ರತರವಾದ ಪ್ರಯತ್ನ ನಡೆಸುತ್ತಿದ್ದು ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳನ್ನು ನೀಡಲಿದ್ದು ಜಮ್ಮು ಕಾಶ್ಮೀರ ಶಕ್ತಿಯ ತಾಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುಎನ್ಐ ಜಿಎಸ್ಆರ್ 2037