Friday, Feb 28 2020 | Time 09:48 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಜಮ್ಮು-ಕಾಶ್ಮೀರದ ರಜೋರಿಯಲ್ಲಿ ರಸ್ತೆ ಅಪಘಾತ: ಏಳು ಮಂದಿ ಸಾವು

ಜಮ್ಮು-ಕಾಶ್ಮೀರದ ರಜೋರಿಯಲ್ಲಿ ರಸ್ತೆ ಅಪಘಾತ: ಏಳು ಮಂದಿ ಸಾವು
ಜಮ್ಮು-ಕಾಶ್ಮೀರದ ರಜೋರಿಯಲ್ಲಿ ರಸ್ತೆ ಅಪಘಾತ: ಏಳು ಮಂದಿ ಸಾವು

ಜಮ್ಮು, ಜ 2(ಯುಎನ್‍ಐ)- ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ರಜೋರಿಯಲ್ಲಿ ಬಸ್‍ವೊಂದು ಅಪಘಾತಕ್ಕೀಡಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಟ 7 ಮಂದಿ ಮೃತಪಟ್ಟು, ಇತರ 38 ಮಂದಿ ಗಾಯಗೊಂಡಿದ್ದಾರೆ.

ರಜೋರಿ ಜಿಲ್ಲೆಯ ಲಂಬೇರಿ ಬಳಿ ಇಂದು ಮಧ್ಯಾಹ್ನ ಸುರನ್‍ಕೋಟ್‍ನಿಂದ ಜಮ್ಮುವಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ಇಲ್ಲಿ ತಿಳಿಸಿದ್ದಾರೆ.

ಘಟನೆಯಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 38 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 19 ಮಂದಿಯನ್ನು ಸುಂದರ್‍ಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಯುಎನ್‍ಐ ಎಸ್‍ಎಲ್‍ಎಸ್ 1824