Saturday, Aug 8 2020 | Time 05:48 Hrs(IST)
National Share

ಜಮ್ಮು ಹೊರವಲಯದಲ್ಲಿ ‘ನಿಗೂಢ ಡ್ರೋನ್’ ಪತ್ತೆ

ಜಮ್ಮು, ಜುಲೈ 13 (ಯುಎನ್‌ಐ) ನಗರದ ಹೊರವಲಯದಲ್ಲಿರುವ ಗಡಿ ಗ್ರಾಮದ ಸಮೀಪ ಸೋಮವಾರ ‘ನಿಗೂಢ ಡ್ರೋನ್’ ಪತ್ತೆಯಾಗಿದೆ.
ಸತ್ವಾರಿಯ ಫಾಲಿಯನ್ ಮಂಡಲ ಪ್ರದೇಶದ ಬುಟೆ ಚಾಕ್ ಗ್ರಾಮದಲ್ಲಿ ಇಂದು ಬೆಳಿಗ್ಗೆ ‘ನಿಗೂಢ ಡ್ರೋನ್’ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲವು ಸ್ಥಳೀಯರು ಹಾರುವ ವಸ್ತುವೊಂದು ನೆಲದ ಮೇಲೆ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಪೊಲೀಸರು ಡ್ರೋನ್ ಅನ್ನು ಪರಿಶೀಲಿಸಿದ್ದು, ಅದರಲ್ಲಿ ಯಾವುದೇ ಅಪಾಯದ ವಸ್ತುಗಳು ಕಂಡು ಬಂದಿಲ್ಲ.
ಈ ಮಧ್ಯೆ, ಗಡಿಯಲ್ಲಿ ನಿಯೋಜಿಸಲಾಗಿರುವ ಸೈನಿಕರ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವನೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಪಟ್ಟಣದಲ್ಲಿ ಜಾಗ್ರತೆ ಕಾಪಾಡಿಕೊಳ್ಳಲು ಡ್ರೋನ್ ಬಳಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉಲ್ಲೇಖಿಸಬೇಕಾದ ಅಂಶವೆಂದರೆ ಜೂನ್ 20 ರಂದು ಕತುವಾ ಜಿಲ್ಲೆಯ ಹಿರಾನಗರ್ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆ(ಬಿಎಸ್ಎಫ್) ಪಾಕಿಸ್ತಾನದ ಶಸ್ತ್ರಾಸ್ತ್ರ ತುಂಬಿದ್ದ ಡ್ರೋನ್ ಅನ್ನು ಹೊಡೆದುರುಳಿಸಿತ್ತು.
ಯುಎನ್ಐ ಎಸ್ಎಲ್ಎಸ್ 1419
More News
ಯುಪಿಎಸ್ಸಿ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಜೋಶಿ ಅಧಿಕಾರ

ಯುಪಿಎಸ್ಸಿ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಜೋಶಿ ಅಧಿಕಾರ

07 Aug 2020 | 10:04 PM

ನವದೆಹಲಿ, ಆಗಸ್ಟ್ 7(ಯುಎನ್ಐ) ಕೇಂದ್ರ ಲೋಕಸೇವಾ ಆಯೋಗದ ನೂತನ ಅಧ್ಯಕ್ಷರಾಗಿ ಶಿಕ್ಷಣತಜ್ಞ ಪ್ರದೀಪ್ ಕುಮಾರ್ ಜೋಶಿ ಶುಕ್ರವಾರ ನೇಮಕವಾಗಿದ್ದಾರೆ.

 Sharesee more..
ಡಾ ಕೆ  ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ

ಡಾ ಕೆ ಕಸ್ತೂರಿರಂಗನ್ ವಿವಾದಾತೀತರು: ತಪಸ್ಸಿನಂತೆ ನೂತನ ಶಿಕ್ಷಣ ನೀತಿ ರೂಪಿಸಿದ್ದಾರೆ: ಪ್ರಧಾನಿ ನರೇಂದ್ರ ಮೋದಿ

07 Aug 2020 | 8:41 PM

ನವದೆಹಲಿ, ಆ 7 []]ಯುಎನ್ಐ] ಆಧುನಿಕ ಶಿಕ್ಷಣಕ್ಕೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಇಂತಹ ಅತ್ಯುತ್ತಮ ನೀತಿ ರೂಪಿಸಿದ ಬಾಹ್ಯಾಕಾಶ ವಿಜ್ಞಾನಿ, ಶಿಕ್ಷಣ ತಜ್ಞ ಡಾ.ಕೆ.ಕಸ್ತೂರಿ ರಂಗನ್ ಅವರ ಶ್ರಮ ಶ್ಲಾಘನೀಯ ಎಂದಿದ್ದಾರೆ.

 Sharesee more..
ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ

ಕೊವಿಡ್‍: ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 68ಕ್ಕೆ ಏರಿಕೆ: ಸಾವಿನ ಪ್ರಮಾಣ ಶೇ2 05ಕ್ಕೆ ಇಳಿಕೆ

07 Aug 2020 | 7:10 PM

ನವದೆಹಲಿ, ಆ 7 (ಯುಎನ್‌ಐ) ಭಾರತದಲ್ಲಿ ಕೊವಿಡ್‍ ನ ಒಟ್ಟು ಪ್ರಕರಣಗಳ ಸಂಖ್ಯೆ 20 ಲಕ್ಷ ದಾಟುತ್ತಿದ್ದಂತೆ, ಕೋವಿಡ್ -19 ರೋಗಿಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಚೇತರಿಕೆಯ ಪ್ರಮಾಣ ಮತ್ತು ಸಾವಿನ ಪ್ರಮಾಣದಲ್ಲಿ ಇಳಿಮುಖ ಕಂಡುಬರುತ್ತಿರುವುದು ಆಶಾದಾಯಕ ಸೂಚನೆಯಾಗಿದೆ.

 Sharesee more..
ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ

ಕೇರಳದಲ್ಲಿ ಭಾರೀ ಭೂಕುಸಿತ: 10 ಮಂದಿ ಸಾವು, 85 ಮಂದಿ ನಾಪತ್ತೆ

07 Aug 2020 | 6:53 PM

ಇಡುಕ್ಕಿ, ಕೇರಳ ಆ 7 (ಯುಎನ್‌ಐ)- ಜಿಲ್ಲೆಯ ರಾಜಮಾಲಾದ ಪೆಟ್ಟಿಮುಡಿಯಲ್ಲಿ ಶುಕ್ರವಾರ ಭಾರಿ ಮಳೆಯಿಂದಾಗಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 85 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

 Sharesee more..