Saturday, Jul 4 2020 | Time 16:29 Hrs(IST)
  • ಮೈಸೂರು ನಗರದ ಅತಿ ಹಳೆಯ ಚೆಲುವಾಂಬ ಆಸ್ಪತ್ರೆ ಸೀಲ್‍ಡೌನ್‍
  • ಬೆಂಗಳೂರು ನಗರದಲ್ಲಿ ನಾಳೆ ಸಂಪೂರ್ಣ ಲಾಕ್‌ಡೌನ್; ಸಾರ್ವಜನಿಕರ ಸಹಕಾರಕ್ಕೆ ಆಯುಕ್ತರ ಮನವಿ
  • ಆಫ್ಘಾನಿಸ್ತಾನ: ಬಾಂಬ್‍ಗಳನ್ನು ಹೂತಿಟ್ಟು ಸ್ಫೋಟಿಸಲು ಯತ್ನಿಸಿದ ಆರು ತಾಲಿಬಾನ್ ಉಗ್ರರು ಬಲಿ
  • ಚೈನಾ ಹೆಸರು ಹೇಳಲು ಮೋದಿ ಹಿಂಜರಿಯುತ್ತಿದ್ದಾರೆ: ಒವೈಸಿ
  • ಐಟಿಆರ್ ಸಲ್ಲಿಕೆ, ನ, 30 ವರೆಗೆ ದಿನಾಂಕ ವಿಸ್ತರಣೆ
  • ಹೆಚ್ಚಿದ ಕರೋನ ಸೋಂಕು, ಜನರ ಜೀವ ಉಳಿಸುವಲ್ಲಿ ಸರ್ಕಾರ ವಿಫಲ: ಎಚ್ ಕೆ ಪಾಟೀಲ್
  • ಬೆಂಗಳೂರಿನಲ್ಲಿ ಹೆಚ್ಚಿದ ಕರೊನಸೋಂಕು, ಸೋಮವಾರ ಮತ್ತೆ ಶಾಸಕರ ಸಭೆ
  • ಮಗನನ್ನು ಎನ್ ಕೌಂಟರ್ ನಡೆಸಿ ಕೊಂದು ಹಾಕಿ; ಪಾತಕಿ ವಿಕಾಸ್ ದುಬೆ ತಾಯಿಯಿಂದ ಪೊಲೀಸರಿಗೆ ಮನವಿ
  • ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ
  • ನಿವೃತ್ತಿ ಪ್ರಕಟಿಸಿದ ಬ್ಯಾಡ್ಮಿಂಟನ್ ದಿಗ್ಗಜ
  • ನಾಯಿ ಮಾಂಸ ಮತ್ತು ಅದರ ಮಾರಾಟಕ್ಕೆ ನಾಗಾಲ್ಯಾಂಡ್ ಸರ್ಕಾರ ನಿಷೇಧ
  • ಕಾನ್ಪುರ ಪೊಲೀಸರ ಹತ್ಯೆ: ಕುಖ್ಯಾತ ಅಪರಾಧಿ ವಿಕಾಸ್ ದುಬೆ ಇನ್ನೂ ಪತ್ತೆ ಇಲ್ಲ
  • ರಷ್ಯಾ; ಸಂವಿಧಾನ ತಿದ್ದುಪಡಿಗಳು ಇಂದಿನಿಂದ ಜಾರಿಗೆ
  • ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆ: ಮುಖ್ಯಮಂತ್ರಿ, ಸಚಿವರಿಂದ ಗೌರವ ಅರ್ಪಣೆ
  • ಧರ್ಮ ಚಕ್ರ ದಿನ ಕಾರ್ಯಕ್ರಮ ಉದ್ಘಾಟಿಸಲಿರುವ ರಾಷ್ಟ್ರಪತಿ ಕೋವಿಂದ್
National Share

ಜೆಎನ್‌ಯು ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿ ನಾಯಕರ ಮೇಲೆ ಹಲ್ಲೆ; ಹಲವರಿಗೆ ಗಾಯ

ನವದೆಹಲಿ, ಜ.5 (ಯುಎನ್ಐ) ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ಕ್ಯಾಂಪಸ್‌ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಅಲ್ಲಿನ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸಂಜೆ ಕೆಲವು ದುಷ್ಕರ್ಮಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಪ್ರವೇಶಿಸಿ ಕಲ್ಲು, ಕಬ್ಬಿಣದ ರಾಡ್‌ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ, ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಸಂಬಂಧದ ವೀಡಿಯೋ ವೈರಲ್ ಆಗಿದೆ.
ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಐಶೆ ಘೋಷ್, ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಯಾದವ್ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಿದೆ. ತಕ್ಷಣ ಅವರನ್ನು ಏಮ್ಸ್‌ ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ತಿಳಿಸಿದೆ.
ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅಷ್ಟರಲ್ಲಿ ತಂಡ ಪರಾರಿಯಾಗಿದೆ.
ವಿದ್ಯಾರ್ಥಿಗಳನ್ನು ರಕ್ಷಿಸಲು ಬಂದ ಪ್ರಾಧ್ಯಾಪಕರೊಬ್ಬರ ಮೇಲೆಯೂ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ. ಈ ದಾಳಿಯನ್ನು ಸಿಪಿಎಂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಖಂಡಿಸಿವೆ.
ಈ ದಾಳಿಯ ಹಿಂದೆ ಎಬಿವಿಪಿ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿವೆ.
ಯುಎನ್ಐ ಎಎಚ್ 2150