Wednesday, Feb 26 2020 | Time 09:26 Hrs(IST)
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಜೆಎನ್‌ಯು ಕ್ಯಾಂಪಸ್‌ ದಾಂಧಲೆ: ಬಿಜೆಪಿ ಖಂಡನೆ, ತನಿಖೆಗೆ ಆಗ್ರಹ

ನವದೆಹಲಿ, ಜನವರಿ 6 (ಯುಎನ್‌ಐ) ಇಲ್ಲಿನ ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರವನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿ, ಇದರ ಬಗ್ಗೆ ಉನ್ನತ ತನಿಖೆ ನಡೆಯಬೇಕೆಂದು ಆಗ್ರಹಪಡಿಸಿದೆ.

ಈ ಮೂಲಕ ದಾಳಿಯ ಬಗ್ಗೆ ರಾಜಕೀಯ ನಾಯಕರಲ್ಲಿ ಕೆಸರು ಎರಚಾಟ ಶರುವಾಗಿದೆ. ಇದು ಕಿಡಿಗೇಡಿಗಳ ಕ್ರಮ, ಅರಾಜಕತೆಯ 'ಹತಾಶೆಯ ಪ್ರಯತ್ ಎಂದು ಕೇಂದ್ರ ಸಮಾಚಾರಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ದೂರಿದ್ದಾರೆ .
"ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿನ ಶಾಂತ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವ ಜನರ ಕಪಟ ನಾಟಕವನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.
ನಾವು ಜೆಎನ್‌ಯು ಕ್ಯಾಂಪಸ್‌ನಲ್ಲಿನ ಹಿಂಸಾಚಾರವನ್ನು ಬಲವಾಗಿ ಖಂಡಿಸುತ್ತೇವೆ. ಇದು ವಿದ್ಯಾರ್ಥಿಗಳನ್ನು ಫಿರಂಗಿಯಂತೆ ಬಳಸಲು ನಿರ್ಧರಿಸಿರುವ ಅರಾಜಕತೆಯ ಶಕ್ತಿಗಳ ಹತಾಶ ಪ್ರಯತ್ನವಾಗಿದೆ, ಕುಗ್ಗುತ್ತಿರುವ ರಾಜಕೀಯ ಹೆಜ್ಜೆಗುರುತನ್ನು ಹೆಚ್ಚಿಸಲು ಅಶಾಂತಿಯನ್ನು ಸೃಷ್ಟಿಸುಲು ಹೊರಟಿವೆ . ವಿಶ್ವವಿದ್ಯಾಲಯಗಳು ಕಲಿಕೆಯ ಶಿಕ್ಷಣದ ಸ್ಥಳಗಳಾಗಿಯೇ ಉಳಿಯಬೇಕು" ಕೇಸರಿ ಪಕ್ಷವು ಟ್ವಿಟ್ಟರ್ ನಲ್ಲಿ ಹೇಳಿದೆ.
ನಾವು ಜೆಎನ್‌ಯುನಲ್ಲಿನ ಹಿಂಸಾಚಾರವನ್ನು ಖಂಡಿಸುತ್ತೇವೆ. ಇದನ್ನು ತನಿಖೆ ಮಾಡಬೇಕಾಗಿದೆ".
ಕಾಂಗ್ರೆಸ್, ಕಮ್ಯುನಿಸ್ಟರು, ಎಎಪಿ ನಾಯಕರು ದೇಶಾದ್ಯಂತದ ವಿಶ್ವವಿದ್ಯಾಲಯಗಳಲ್ಲಿ ಹಿಂಸಾಚಾರದ ವಾತಾವರಣ ನು ಸೃಷ್ಟಿಸಲು ಬಯಸುತ್ತಾರೆ ಎಂದು ಅವರು ದೂರಿದರು.
ಹೊಸದಾಗಿ ತೇಲುತ್ತಿರುವ ಪಕ್ಷ ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್ ಅವರಂತಹ ನಾಯಕರು 'ಹತ್ತು ನಿಮಿಷಗಳಲ್ಲಿ' ಜೆಎನ್‌ಯು ಕ್ಯಾಂಪಸ್‌ಗೆ ಹೇಗೆ ತಲುಪಬಹುದು ಎಂದು ಹೇಗೆ ಹೇಳುತ್ತಾರೆ ಎಂದು ಅವರು ಪ್ರಶ್ನೆಮಾಡಿದರು.
ನೋಂದಣಿ ಪ್ರಕ್ರಿಯೆಯನ್ನು ಯಾರು ತಡೆಯುತ್ತಿದ್ದಾರೆ ಮತ್ತು ಯೋಗೇಂದ್ರ ಯಾದವ್ ಮತ್ತು ಇತರ ನಾಯಕರು ಹತ್ತು ನಿಮಿಷಗಳಲ್ಲಿ ಹೇಗೆ ಸ್ಥಳವನ್ನು ತಲುಪಬಹುದು ಎಂಬುದರ ಕುರಿತು ತನಿಖೆ ನಡೆಸಬೇಕಾಗಿದೆ ಮೇಲಾಗಿ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿನ ಶಾಂತ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವ ಜನರ ಹಿಂದಿನ ಸಂಚನ್ನು ಬಹಿರಂಗಪಡಿಸಬೇಕಿದೆ ಎಂದು ಅವರು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ನಾಯಕರನ್ನು ಈ ವಿಷಯವನ್ನು ಗಂಬೀರವಾಗಿ ಪರಿಗಣಿಸಿದ್ದು ಸಂಬಂಧಿತ ಬೆಳವಣಿಗೆಗಳ ಬಗ್ಗೆ ನಿಗಾ ಇಡಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಭಾನುವಾರ ರಾತ್ರಿ ನಡೆದ ದಾಳಿಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷೆ ಘೋಷ್ ಸೇರಿದಂತೆ 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಜೆಎನ್‌ಯು ಕ್ಯಾಂಪಸ್‌ ಹಿಂಸಾಚಾರದ ಘಟನೆಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಖಂಡಿಸಿ, ಇದು ದುರದೃಷ್ಟಕರ, ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳಿಗೆ ಅವರು ಮನವಿ ಮಾಡಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ದೆಹಲಿ ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್ ಅವರೊಂದಿಗೆ ಕೇಂದ್ರ ಅಮಿತ್ ಶಾ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯುಎನ್ಐ ಕೆಎಸ್ಆರ್ 1226