Friday, Feb 28 2020 | Time 08:28 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಘೋಷ್ ಸೇರಿ 19 ಮಂದಿಯ ವಿರುದ್ಧ ಎಫ್ಐಆರ್

ನವದೆಹಲಿ, ಜ.7 (ಯುಎನ್ಐ) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಅಧ್ಯಕ್ಷೆ ಆಯಿಷೆ ಘೋಷ್ ಮತ್ತು ಇತರ 19 ಜನರ ವಿರುದ್ಧ ದೆಹಲಿ ಪೊಲೀಸರು, ಜನವರಿ 4 ರಂದು ಮಧ್ಯಾಹ್ನ 1 ಗಂಟೆಗೆ ಜೆಎನ್‌ಯು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಸರ್ವರ್ ಕೋಣೆಯನ್ನು ಧ್ವಂಸ ಮಾಡಿದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ
ಜೆಎನ್‌ಯು ಮುಖ್ಯ ಭದ್ರತಾ ಅಧಿಕಾರಿ ದೂರು ನೀಡಿದ್ದು, ಜನವರಿ 5 ರ ಭಾನುವಾರ ಎಫ್‌ಐಆರ್ ದಾಖಲಿಸಲಾಗಿದೆ. ಅದೇ ದಿನ ಸಂಜೆ ಬಲಪಂಥೀಯ ಎಬಿವಿಪಿಗೆ ಸೇರಿದವರು ಎಂದು ಶಂಕಿಸಲಾಗಿರುವ ಮುಖವಾಡ ಧರಿಸಿದ್ದ ಗೂಂಡಾಗಳು ಜೆಎನ್‌ಯು ಕ್ಯಾಂಪಸ್‌ಗೆ ಪ್ರವೇಶಿಸಿ ಘೋಷ್ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು.

ಗಲಭೆಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೊಣ್ಣೆ, ಮಾರಕಾಸ್ತ್ರಗಳೊಂದಿಗೆ ದಾಳಿಕೋರರು ಜೆಎನ್‌ಯು ಕ್ಯಾಂಪಸ್‌ನಿಂದ ಹೊರನಡೆದಾಗ ಪೊಲೀಸರು ಹಾಜರಿದ್ದರೂ ಯಾವುದೇ ಬಂಧನವಾಗಿಲ್ಲ ಎಂದು ಆರೋಪಿಸಲಾಗಿತ್ತು.
ಆಯಿಷೇ ಘೋಷ್, ಸಾಕೆತ್ ಮೂನ್ ಮತ್ತು ಇತರ 18 ಮಂದಿಯನ್ನು ಒಳಗೊಂಡ ವಿದ್ಯಾರ್ಥಿಗಳ ಗುಂಪು ನಿರ್ವಾಹಕ ಬ್ಲಾಕ್‌ನಲ್ಲಿರುವ ಸಂವಹನ ಮತ್ತು ಮಾಹಿತಿ ಸೇವೆಗಳ ಕಚೇರಿಗೆ ಕಿಟಕಿಯ ಗಾಜು ಒಡೆದು ಪ್ರವೇಶಿಸಿದ್ದಾರೆ ಎಂದು ಭಾನುವಾರದ ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಅವರು ಅತಿಕ್ರಮವಾಗಿ ಪ್ರವೇಶಿಸಿ ಫೈಬರ್ ಆಪ್ಟಿಕ್ ಕೇಬಲ್‌ಗಳು, ಸರ್ವರ್‌ಗಳು ಮತ್ತು ಬಯೋಮೆಟ್ರಿಕ್ ಸಾಧನಗಳನ್ನು ಹಾನಿಗೊಳಿಸಿದ್ದರು ಎನ್ನಲಾಗಿದೆ.
ವಸಂತ್ ಕುಣಿ ಉತ್ತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 , 341, 506 ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಎಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುಎನ್ಐ ಎಎಚ್ 1200