Wednesday, Feb 26 2020 | Time 08:42 Hrs(IST)
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಜಾಗತಿಕ ಕಾರಣಗಳಿಂದಾಗಿ ಆರ್ಥಿಕ ನಿಧಾನಗತಿ, ಹೂಡಿಕೆದಾರರಿಗಿದೆ ಭಾರತದ ಮೇಲೆ ವಿಶ್ವಾಶ : ಬಿಜೆಪಿ

ನವದೆಹಲಿ, ಜ 13 (ಯುಎನ್‌ಐ) ಭಾರತದ ಆರ್ಥಿಕ ನಿಧಾನಗತಿಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕುಸಿತಕ್ಕೆ ಜಾಗತಿಕ ಅಂಶಗಳೇ ಕಾರಣವಾಗಿದ್ದು ಆರ್ಥಿಕತೆ ಚೇತರಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬದ್ಧವಾಗಿದೆ ಎಂದು ಬಿಜೆಪಿ ಮತ್ತು ಸರ್ಕಾರ ಪ್ರತಿಪಾದಿಸಿವೆ.

"ಜಾಗತಿಕ ಹೂಡಿಕೆದಾರರು ಭಾರತದ ಮೇಲೆ ಇನ್ನೂ ವಿಶ್ವಾಸ ಹೊಂದಿದ್ದಾರೆ" ಎಂದು ಕಾನೂನು ಸಚಿವ ಮತ್ತು ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದ ಆರ್ಥಿಕತೆ ತೀವ್ರ ಸಂಕಷ್ಟದಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

"ಆರ್ಥಿಕತೆಯನ್ನು ಉತ್ತಮ ಸ್ಥಿತಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ವಸೂಲಾಗದ ಸಾಲ (ಎನ್‌ಪಿಎ) ಸಮಸ್ಯೆ ಪರಿಹರಿಸಲು ಈಗಾಗಲೇ 70,000 ಕೋಟಿ ರೂ ಗಳನ್ನು ಹೂಡಿಕೆ ಮಾಡಬಹುದಾದಂತಹ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ" ಎಂದು ಪ್ರಸಾದ್ ಹೇಳಿದರು.

ಅಂತೆಯೇ, ವಸತಿ ವಲಯ ಮತ್ತು ಮೂಲಸೌಕರ್ಯ ವಲಯಗಳಿಗೂ ಸರ್ಕಾರ ಧನಸಹಾಯ ನೀಡಿದೆ ಎಂದರು.

ಭಾರತ, ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂಬುದನ್ನು ಮರೆಯಬಾರದು ಎಂದ ಅವರು, ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 6 ರಷ್ಟು ಹೆಚ್ಚಳ ಕಂಡಿದೆ ಎಂದರು.

ಇದು ಭಾರತದ ಮೇಲೆ ಜಾಗತಿಕ ಹೂಡಿಕೆದಾರರ ನಂಬಿಕೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.

20 ವಿರೋಧ ಪಕ್ಷಗಳ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಆರ್ಥಿಕತೆ ಕುಸಿತಕ್ಕೆ ಕಾರಣಗಳನ್ನು ಯುವಜನತೆಗೆ ಹೇಳುವ ಧೈರ್ಯವನ್ನು ಮೋದಿ ತಳೆಯಲಿ” ಎಂದು ಸವಾಲು ಹಾಕಿದ್ದರು.

ಯುಎನ್ಐ ಜಿಎಸ್ಆರ್ 2230