Monday, Jul 22 2019 | Time 19:45 Hrs(IST)
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
 • ಸಾಧ್ವಿ ಪ್ರಗ್ಯಾ ಸಿಂಗ್ ಗೆ, ಜೆಪಿ ನಡ್ಡಾ ಎಚ್ಚರಿಕೆ
 • ಧೋನಿ ತರಬೇತಿಗಾಗಿ ಸೇನಾ ಮುಖ್ಯಸ್ಥ ರಾವತ್ ಅನುಮತಿ
 • ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್ ಗುಂಡಿನ ದಾಳಿಗೆ ಭಾರತೀಯ ಯೋಧ ಹುತಾತ್ಮ
Karnataka Share

ಜೆಡಿಎಸ್‌ನೊಂದಿಗೆ ಒಮ್ಮೆ ಸರ್ಕಾರ ರಚಿಸಿ ಸೋತಿದ್ದೇವೆ: ಬಿ.ಎಸ್.ಯಡಿಯೂರಪ್ಪ

ಜೆಡಿಎಸ್‌ನೊಂದಿಗೆ ಒಮ್ಮೆ ಸರ್ಕಾರ ರಚಿಸಿ ಸೋತಿದ್ದೇವೆ: ಬಿ.ಎಸ್.ಯಡಿಯೂರಪ್ಪ
ಜೆಡಿಎಸ್‌ನೊಂದಿಗೆ ಒಮ್ಮೆ ಸರ್ಕಾರ ರಚಿಸಿ ಸೋತಿದ್ದೇವೆ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜು 12 (ಯುಎನ್ಐ) ಜೆಡಿಎಸ್‌ನೊಂದಿಗೆ ಒಮ್ಮೆ ಸರ್ಕಾರ ರಚಿಸಿ ಸೋತಿದ್ದೇವೆ, ಅವರೊಂದಿಗೆ ಇನ್ನೊಮ್ಮೆ ಸರ್ಕಾರ ಮಾಡಲು ಸಾಧ್ಯವೇ ? ಜೆಡಿಎಸ್ ಮುಖಂಡ ಸಾ ರಾ ಮಹೇಶ್ ಅವರು ನಿನ್ನೆ ಬಿಜೆಪಿ ಮುಖಂಡರನ್ನು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ

ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾ ರಾ ಮಹೇಶ್ ಮತ್ತು ಬಿಜೆಪಿ ಮುಖಂಡರಾದ ಕೆ ಎಸ್ ಈಶ್ಚರಪ್ಪ ಮತ್ತು ಮುರಳೀಧರ್ ರಾವ್ ಅವರ ಭೇಟಿ ‌ಕಾಕತಾಳೀಯ, ಇದಕ್ಕೆ ‌ವಿಶೇಷ ಅರ್ಥ ಕಲ್ಪಿಸಬೇಕಿಲ್ಲ, ಜೆಡಿಎಸ್ ಜತೆ ಸರ್ಕಾರ ಮಾಡಲು ‌ಸಾಧ್ಯವೇ ? ಈ ಹಿಂದೆ ಸರ್ಕಾರ ಮಾಡಿ ಹಿಂಸೆ ಅನುಭವಿಸಿರುವುದು ಮರೆತಿಲ್ಲ, ಆಕಸ್ಮಿಕ ಭೇಟಿಯಾಗಿದ್ದನ್ನೇ ಮುಂದಿಟ್ಟು ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ, ಇದರಿಂದ ಯಾವ ಪ್ರಯೋಜನವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಮಜಾಯಿಷಿ ನೀಡಿದ್ದಾರೆ

ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ಕೂಡ ಪ್ರತಿಕ್ರಿಯಿಸಿ, ಸಾ.ರಾ.ಮಹೇಶ್ ಮತ್ತು ಬಿಜೆಪಿ ಮುಖಂಡರ ಭೇಟಿ ಆಕಸ್ಮಿಕ, ಸತ್ತರೂ ಜೆಡಿಎಸ್‌ ಜೊತೆ ಹೋಗುವುದಿಲ್ಲ. ಅಪ್ಪ - ಮಕ್ಕಳ ಆಟವನ್ನು 20-20 ಆಡಳಿತದಲ್ಲಿ ನೋಡಿದ್ದೇವೆ, ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರನ್ನು ಹೆದರಿಸಲು ಅವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳೀಧರ ರಾವ್ ಮತ್ತು ಶಾಸಕ ಕೆ.ಎಸ್‌.ಈಶ್ವರಪ್ಪ ಅವರನ್ನು ಜೆಡಿಎಸ್‌ನ ಸಚಿವ ಸಾ.ರಾ.ಮಹೇಶ್‌ ಗುರುವಾರ ರಾತ್ರಿ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾಗಿದ್ದರು. ಇದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹ, ಚರ್ಚೆಗೆ ಕಾರಣವಾಗಿದೆ.

‘ಈ ಸುದ್ದಿಯಲ್ಲಿ ಒಂದಿಷ್ಟು ಸತ್ಯಾಂಶವೂ ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಜೆಡಿಎಸ್‌ ಸಚಿವರನ್ನು ಭೇಟಿ ಮಾಡಿದ್ದು ಒಂದು ಆಕಸ್ಮಿಕ ವಿದ್ಯಮಾನ. ಇಂತಹ ಊಹಾತ್ಮಕ ಸುದ್ದಿಯನ್ನು ಇನ್ನಷ್ಟು ಸೂಕ್ಷ್ಮಗೊಳಿಸುವ ಅಗತ್ಯ ಇಲ್ಲ’ ಎಂದು ಸ್ವತಃ ಮುರಳೀಧರ ರಾವ್‌ ಕಳೆದ ರಾತ್ರಿಯೇ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು.

‘ಇಂತಹ ಸಂದರ್ಭದಲ್ಲಿ ಕೆಎಸ್‌ಟಿಡಿಸಿ ನಿರ್ವಹಿಸುವ ಕುಮಾರಕೃಪ ಅತಿಥಿಗೃಹದ ಹೊಸ ಕಟ್ಟಡಕ್ಕೆ ಕಾರ್ಯ ನಿಮಿತ್ತ ತೆರಳಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರ ಬಿಜೆಪಿ ನಾಯಕರೊಂದಿಗಿನ ಭೇಟಿ ಆಕಸ್ಮಿಕ, ಮಾತುಕತೆ ಸೌಜನ್ಯದ್ದು. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೂಡ ನಿನ್ನೆ ಟ್ವೀಟ್‌ ಮಾಡಿದ್ದರು.

ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸುಭದ್ರವಾಗಿದೆ. ವಿಧಾನಮಂಡಲ ಅಧಿವೇಶನ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದರು.

ಒಟ್ಟಿನಲ್ಲಿ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲೇ ಸಾ.ರಾ.ಮಹೇಶ್ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಿರುವುದು ಊಹಾಪೋಹಗಳಿಗೆ ಕಾರಣವಾಗಿದ್ದು ಮಾತ್ರ ನಿಜ. ಇದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುತ್ತಿರುವುದು ಕೂಡ ಸತ್ಯ.

ಯುಎನ್ಐ ಯುಎಲ್‌ ಎಎಚ್ 952

More News

ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್

22 Jul 2019 | 6:55 PM

 Sharesee more..
ಚಂದ್ರಯಾನ-2 :ಇಸ್ರೋ ಸಾಧನೆಗೆ ವಿಧಾನಸಭೆ ಮೆಚ್ಚುಗೆ

ಚಂದ್ರಯಾನ-2 :ಇಸ್ರೋ ಸಾಧನೆಗೆ ವಿಧಾನಸಭೆ ಮೆಚ್ಚುಗೆ

22 Jul 2019 | 5:47 PM

ಬೆಂಗಳೂರು, ಜು 22 (ಯುಎನ್‍ಐ) ಚಂದ್ರಯಾನ-2 ಉಪಗ್ರಹ ಹೊತ್ತ ಜಿಎಸ್‍ಎಲ್‍ವಿ ಎಂಕೆ-3 ನಭೋಮಂಡಲಕ್ಕೆ ಯಶಸ್ವಿಯಾಗಿ ಹಾರಿರುವ ಹಿನ್ನೆಲೆಯಲ್ಲಿ ಇಸ್ರೋದ ಯಶೋಗಾಥೆಯನ್ನು ರಾಜ್ಯ ವಿಧಾನಸಭೆ ಸರ್ವಾನುಮತದಿಂದ ಶ್ಲಾಘಿಸಿದೆ

 Sharesee more..