Wednesday, May 27 2020 | Time 02:09 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Election Share

ಜೆಡಿಯು ರಾಷ್ಟ್ರೀಯ ಕಾರ್ಯಕಾರಣಿ ಸಭೆ ಪ್ರಾರಂಭ

ಜೆಡಿಯು ರಾಷ್ಟ್ರೀಯ ಕಾರ್ಯಕಾರಣಿ ಸಭೆ ಪ್ರಾರಂಭ
ಜೆಡಿಯು ರಾಷ್ಟ್ರೀಯ ಕಾರ್ಯಕಾರಣಿ ಸಭೆ ಪ್ರಾರಂಭ

ಪಟ್ನಾ, ಜೂ 9 (ಯುಎನ್ಐ) ಕೇಂದ್ರ ಸಚಿವ ಸಂಪುಟದಲ್ಲಿ ಜನತಾ ದಳ (ಸಂಯುಕ್ತ)ಕ್ಕೆ ಸಾಂಕೇತಿಕ ಪ್ರಾತಿನಿಧ್ಯ ನೀಡಿದ ನಂತರ ಬಿಜೆಪಿ ಹಾಗೂ ಜೆಡಿಯು ನಡುವಿನ ಸಂಬಂಧ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವಾಗಲೇ ಭಾನುವಾರ ಜೆಡಿ (ಯು) ರಾಷ್ಟ್ರೀಯ ಕಾರ್ಯಕರಣಿ ಸಭೆ ಪ್ರಾರಂಭವಾಗಿದೆ.

ಇಂದಿಲ್ಲಿ ಆರಂಭವಾದ ಸಭೆಯಲ್ಲಿ ಜೆಡಿಯು ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಕ್ಷದ ಪ್ರಧಾನ ಕಾರ್ಯರ್ಶಿ ಕೆ.ಸಿ.ತ್ಯಾಗಿ, ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್, ರಾಜ್ಯಾಧ್ಯಕ್ಷ ಬಶಿನಾಥ್ ನರೈನ್ ಸಿಂಗ್, ಕಾರ್ಯದರ್ಶಿ ಹಾಗೂ ಸಂಸದ ಆರ್ ಸಿ ಪಿ ಸಿಂಗ್ ಮತ್ತು ಪಕ್ಷದ ಇತರ ಹಿರಿಯ ನಾಯಕರು ಪಾಲ್ಗೊಂಡಿದ್ದಾರೆ.

ಸಭೆಗೂ ಮುನ್ನ ಮಾತನಾಡಿದ ರಾಜ್ಯಾಧ್ಯಕ್ಷ ಬಶಿನಾಥ್ ನರೈನ್ ಸಿಂಗ್, ಸಂಘಟನೆಯ ಆಧಾರದ ಮೇಲೆ ಪಕ್ಷವನ್ನು ಮತ್ತಷ್ಟು ಬಲಪಡಿಸಲು ತನ್ನ ನೀತಿಗಳನ್ನು ಮತ್ತಷ್ಟು ಸುಧಾರಿಸಲಿದೆ. ಮೂರು ವರ್ಷಗಳ ನಂತರ ಬೆಂಬಲ ಆಧಾರದ ಮೇಲೆ ಪಕ್ಷವನ್ನು ವಿಸ್ತರಿಸಲು ಶನಿವಾರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದೆ ಎಂದು ಹೇಳಿದರು.

ಮುಂಬರುವ ಜಾರ್ಖಂಡ್, ದೆಹಲಿ ಹಾಗೂ ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಇಲ್ಲ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಸಿ ರಣತಂತ್ರ ರೂಪಿಸಲಿದೆ. ನೆರೆಯ ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಳ್ಳಲು ಕಿಶೋರ್ ಅವರ ತಂಡದ ಎದುರು ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಸಿಂಗ್ ನುಡಿದರು.

ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್, ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಈ ಕುರಿತು ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಸಭೆ ಮುಗಿಯುವುದಕ್ಕೂ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಪಕ್ಷದ ಮುಂದಿನ ಭವಿಷ್ಯಕ್ಕಾಗಿ ಒದಗಿಸಿದ ವಿಚಾರಗಳು ಕುರಿತು ಮಾತನಾಡುವ ಸಾಧ್ಯತೆ ಇದೆ.

ಯುಎನ್ಐ ಡಿವಿ ವಿಎನ್ 1455

There is no row at position 0.