Friday, Dec 6 2019 | Time 02:09 Hrs(IST)
Karnataka Share

ಜಾನಪದ ಗಾಯನದ ಬಗ್ಗೆ ತರಬೇತಿ: ಅರ್ಜಿ ಆಹ್ವಾನ

ಬೆಂಗಳೂರು, ನ 20 [ಯುಎನ್ಐ] ಕರ್ನಾಟಕ ಜಾನಪದ ಅಕಾಡೆಮಿಯಿಂದ ವಿವಿಧ ಜಾನಪದ ಕಲಾ ಪ್ರಕಾರಗಳು ಮತ್ತು ಜಾನಪದ ಗಾಯನದ ಬಗ್ಗೆ ತರಬೇತಿ ಪಡೆಯಲು ಬಯಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಶಿಬಿರಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಶಿಬಿರಾರ್ಥಿಗಳಿಗೆ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮೂಲ ಗುರುಗಳಿಂದ ತರಬೇತಿ ನೀಡಲಾಗುವುದು. 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಅರ್ಜಿಗಳನ್ನು ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು ಹಾಗೂ ಸಹಾಯಕ ನಿರ್ದೇಶಕರುಗಳ ಕಾರ್ಯಾಲಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳಿಂದ ಪಡೆಯಬಹುದಾಗಿದೆ.
ಅರ್ಜಿಗಳನ್ನು ದಿನಾಂಕ: 10-12-2019 ರಂದು ಸಂಜೆ 5.00 ಗಂಟೆಯೊಳಗೆ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಜಾನಪದ ಅಕಾಡೆಮಿಯ ದೂರವಾಣಿ ಸಂಖ್ಯೆ 080-22215509 ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.
ಯುಎನ್ಐ ವಿಎನ್ 1923
More News
ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

ಉಪ ಚುನಾವಣೆ: ಹೊಸಕೋಟೆಯಲ್ಲಿ ಶೇ 86 77, ಕೆ ಆರ್ ಪುರದಲ್ಲಿ ಶೇ 43 25: ಒಟ್ಟಾರೆ ಶೇ 66 25 ರಷ್ಟು ಮತದಾನ

05 Dec 2019 | 8:49 PM

ಬೆಂಗಳೂರು, ಡಿ 5 [ಯುಎನ್ಐ] ರಾಜ್ಯ ರಾಜಕೀಯದಲ್ಲಿ ಹಲವು ಮಹತ್ವದ ತಿರುವುಗಳನ್ನು ನೀಡುವ ನಿರೀಕ್ಷೆ ಹೊಂದಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಮತದಾರರು ಉತ್ಸಾಹಭರಿತವಾಗಿ ಮತ ಚಲಾಯಿಸಿದ್ದು, ಒಟ್ಟಾರೆ ಶೇ 66.

 Sharesee more..