Monday, Jun 1 2020 | Time 02:17 Hrs(IST)
Special Share

ಜೂನ್ ಎರಡನೇ ವಾರದಿಂದ ಅಂತರಾಷ್ಟ್ರೀಯ ವಿಮಾನ ಸೇವೆ; ಕೇಂದ್ರ

ನವದೆಹಲಿ,ಮೇ ೨೩(ಯುಎನ್‌ಐ)- ಒಂದೊಮ್ಮೆ ಕೊರೊನಾ ವೈರಸ್ ಬಿಕ್ಕಟ್ಟು ನಿವಾರಣೆಯಾದರೆ, ಜೂನ್ ಮಧ್ಯದಿಂದ ಇಲ್ಲವೇ ಜುಲೈ ಕೊನೆಯ ವಾರದಲ್ಲೇ ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಆರಂಭಿಸಲಾಗುವುದು ಎಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಸೋಮವಾರದಿಂದ ದೇಶಿಯ ವಿಮಾನ ಸೇವೆಗಳು ಆರಂಭಗೊಳ್ಳಲಿರುವ ಹಿನ್ನಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ
ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಪ್ರಾರಂಭಿಸಲು ಆಗಸ್ಟ್ ವರೆಗೂ, ಸೆಪ್ಟಂಬರ್ ವರೆಗೂ ಏಕೆ ಕಾಯಬೇಕು ? ಎಂದು ಪ್ರಶ್ನಿಸಿರುವ ಸಚಿವರು, ಪರಿಸ್ಥಿತಿ ಅನುಕೂಲವಾಗಿ ಪರಿವರ್ತನೆಗೊಂಡರೆ, ನಮ್ಮ ನಿರೀಕ್ಷೆಗೆ ತಕ್ಕಂತೆ ಬದಲಾದರೆ ಅದಕ್ಕೆ ಅನುಗುಣವಾಗಿ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಜೂನ್ ಮಧ್ಯದಿಂದ, ಇಲ್ಲವೆ ಜುಲೈ ಕೊನೆಯವಾರದಿಂದ ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಏಕೆ ಪ್ರಾರಂಭಿಸಬಾರದು ಎಂದು ಪ್ರಶ್ನಿಸಿದರು. ಆದೇ ರೀತಿ ಕೇರಳ, ಕರ್ನಾಟಕ,ಅಸ್ಸಾಂ ಸೇರಿ ಆರು ರಾಜ್ಯಗಳು ದೇಶಿಯ ವಿಮಾನ ಪ್ರಯಾಣಿಕರಿಗೆ ಒಂದು ವಾರ ಕಾಲ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸಬೇಕು ಎಂಬ ಬೇಡಿಕೆಯನ್ನು ಸಚಿವರು ತಳ್ಳಿಹಾಕಿದ್ದಾರೆ.
ಆರೋಗ್ಯ ಸೇತು ಅಪ್ ನಲ್ಲಿ ಗ್ರೀನ್ ಸ್ಟೇಟಸ್ ಇದ್ದರೆ ಅವರನ್ನು ಕ್ವಾರಂಟೈನ್ ಒಳಪಡಿಸಬೇಕಾದ ಅಗತ್ಯ ಏನಿದೆ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಯುಎನ್‌ಐ ಕೆವಿಆರ್ ೧೭೨೬