Monday, Jul 22 2019 | Time 07:02 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Sports Share

ಜೂನಿಯರ್ ಮಹಿಳಾ ಕುಸ್ತಿ: ಅಂಶುಗೆ ಬಂಗಾರ

ನವದೆಹಲಿ, ಜು 11 (ಯುಎನ್ಐ)- ಭಾರತದ ಮಹಿಳಾ ಕುಸ್ತಿ ಪಟು ಅಂಶು ಮಲಿಕ್ ಅವರು ಥಾಯ್ಲೆಂಡ್ ನಲ್ಲಿ ನಡೆಯುತ್ತಿರುವ ಜೂನಿಯರ್ ಏಷಿಯನ್ ಕುಸ್ತಿ ಚಾಂಪಿಯನ್ ಶಿಪ್ ನ 59 ಕೆ.ಜಿ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ್ದಾರೆ.
ಗುರುವಾರ ನಡೆದ ಮೂರನೇ ದಿನದ ಸ್ಪರ್ಧೆಯ 59 ಕೆ.ಜಿ ವಿಭಾಗದಲ್ಲಿ ಅಂಶು ಬಂಗಾರ ಹಾಗೂ 55 ಕೆ.ಜಿ ಅಂಜು ಅವರು ಕಂಚಿನ ಪದಕ ಪಡೆದರು.
ಗ್ರಿಕೋ ರೋಮನ್ ವಿಭಾಗದಲ್ಲಿ ಒಂದು ಸ್ವರ್ಣ, ಎರಡು ಬೆಳ್ಳಿ, ನಾಲ್ಕು ಕಂಚು ಸೇರಿದಂತೆ ಒಟ್ಟು ಏಳು ಪದಕ ಬಾಚಿಕೊಂಡಿದೆ. 55ಕೆ.ಜಿ ವಿಭಾಗದಲ್ಲಿ ವಿಜಯ್ ಬಂಗಾರ, 130 ಕೆ.ಜಿ ವಿಭಾಗದಲ್ಲಿ ಅವೇಶ್ ಹಾಗೈ 60 ಕೆ.ಜಿ ವಿಭಾಗದಲ್ಲಿ ಸಚಿನ್ ರಾಣಾ ಬೆಳ್ಳಿ ಪದಕ ಪಡೆದರು. 87 ಕೆ.ಜಿ ವಿಭಾಗದಲ್ಲಿ ಸುನಿಲ್, 67 ಕೆ.ಜಿ ವಿಭಾಗದಲ್ಲಿ ಗೌರವ್, 72 ಕೆ.ಜಿ ವಿಭಾಗದಲ್ಲಿ ರಾಹುಲ್ , 97 ಕೆ.ಜಿ ವಿಭಾಗದಲ್ಲಿ ದಿಪಾಂಶು ಕಂಚು ಸಾಧನೆ ಮಾಡಿದರು.
ಯುಎನ್ಐ ವಿಎನ್ಎಲ್ ಕೆಎಸ್ವಿ 2256