Monday, Jun 1 2020 | Time 02:31 Hrs(IST)
Karnataka Share

ಜೂನ್ 1 ರಿಂದ ಜುಲೈ ಅಂತ್ಯದವರೆಗೆ ಮೀನುಗಾರಿಕೆ ನಿಷೇಧ

ಬೆಂಗಳೂರು, ಮೇ 23 [ಯುಎನ್ಐ] ಮುಂಗಾರು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಜೂನ್ 1 ರಿಂದ ಜುಲೈ ಅಂತ್ಯದವರೆಗೆ ಮೀನುಗಾರಿಕೆ ನಿಷೇಧಿಸಲಾಗಿದೆ.
ಕರ್ನಾಟಕ ಕರಾವಳಿ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಈ ಅವಧಿಯಲ್ಲಿ ಬಲೆ ಹಾಗೂ ಇತರ ಸಾಧನಗಳನ್ನು ಉಪಯೋಗಿಸಿ, ಯಾಂತ್ರಿಕೃತ ಅಥವಾ ಇನ್ನಾವುದೇ ಮಾದರಿಯ ದೋಣಿಗಳನ್ನು ಬಳಸಿ, ಮೀನುಗಾರಿಕೆ ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಮೀನುಗಾರರಿಗೆ ಒಂದು ವರ್ಷ ಡೀಸೆಲ್ ಸಹಾಯಧನ ರದ್ದುಪಡಿಸಲಾಗುತ್ತದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಯುಎನ್ಐ ವಿಎನ್ 2012