Saturday, Jan 25 2020 | Time 02:11 Hrs(IST)
National Share

ಜಾರ್ಖಂಡ್‍ನಲ್ಲಿ ಎರಡನೇ ಹಂತದಲ್ಲಿ 20 ಸ್ಥಾನಗಳಿಗೆ ಮತದಾನ ಅಂತ್ಯ: ಸುಮಾರು ಶೇ 60ರಷ್ಟು ಮತದಾನ

ರಾಂಚಿ, ಡಿ 7(ಯುಎನ್‍ಐ)- ಸಿಸಾಯ್‍ನಲ್ಲಿ ಯುವಕನೊಬ್ಬ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿರುವುದು ಸೇರಿದಂತೆ ಕೆಲ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ಮುಗಿದಿದ್ದು, 20 ಕ್ಷೇತ್ರಗಳಲ್ಲಿ ಸರಾಸರಿ ಸುಮಾರು ಶೇ 60ರಷ್ಟು ಮತದಾನವಾಗಿದೆ.
ಸಂಜೆ 3 ಗಂಟೆ ವೇಳೆಗೆ ಸರಾಸರಿ ಶೇ 59.27ರಷ್ಟು ಮತದಾನವಾಗಿದೆ. ಆದರೆ, ಮುಖ್ಯ ಚುನಾವಣಾಧಿಕಾರಿಯವರು ಎಲ್ಲ ಕ್ಷೇತ್ರಗಳಿಂದ ನಿಖರ ಮಾಹಿತಿ ಪಡೆದ ನಂತರ ಈ ಸಂಖ್ಯೆ ಪರಿಷ್ಕರಣೆಯಾಗಲಿದೆ. ದೊರೆತಿರುವ ಮಾಹಿತಿಯಂತೆ ಸಿಸಾಯ್‍ನಲ್ಲಿ ಅತಿ ಹೆಚ್ಚು 68.60ರಷ್ಟು ಮತದಾನವಾಗಿದೆ.
ಜಮ್‍ಷೆಡ್‍ಪುರ ಪೂರ್ವ ಮತ್ತು ಪಶ್ಚಿಮ ಕ್ಷೇತ್ರಗಳಿಗೆ ಸಂಜೆ 5ರವರೆಗೆ ಮತದಾನ ನಡೆಯಿತು. ಉಳಿದಂತೆ ಇತರ ಕ್ಷೇತ್ರಗಳಲ್ಲಿ ನಕ್ಸಲರ ಹಾವಳಿಯಿಂದ ಸಂಜೆ 3 ಗಂಟೆವರೆಗೆ ಮಾತ್ರ ನಡೆದಿತ್ತು. ಇಂದು ನಡೆದ 20 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ, ಒಂದು ಕ್ಷೇತ್ರ ಪರಿಶಿಷ್ಟ ಜಾತಿಗೆ, ಇತರ ಮೂರು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದವು.
ಯುಎನ್‍ಐ ಎಸ್‍ಎಲ್‍ಎಸ್ 1834
More News
ಗಣರಾಜ್ಯ:  ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಗಣರಾಜ್ಯ: ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

24 Jan 2020 | 8:49 PM

ನವದೆಹಲಿ, ಜನವರಿ 24 (ಯುಎನ್‌ಐ) ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ 71 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಶನಿವಾರ ( ನಾಳೆ) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

 Sharesee more..