Wednesday, Jan 29 2020 | Time 00:54 Hrs(IST)
  • ಬತ್ತ, ತೊಗರಿಗೆ ಬೆಂಬಲ ಬೆಲೆ ಸಹಿತ ಪ್ರೋತ್ಸಾಹ ಧನ ಘೋಷಣೆ
  • ನಾನು ಸನ್ಯಾಸಿ ಅಲ್ಲ, ನನಗೂ ಸಹಜವಾಗಿ ರಾಜಕೀಯ ಅಪೇಕ್ಷೆಗಳಿವೆ: ಡಿಸಿಎಂ ಲಕ್ಷ್ಮಣ್ ಸವದಿ
Special Share

ಜಾರ್ಖಂಡ್‌ನಲ್ಲಿ ತತ್ವಾಧಾರಿತ ರಾಜಕಾರಣಕ್ಕೆ ಮಾತ್ರ ಅವಕಾಶ :ಸುಧೇಶ್

ರಾಂಚಿ, ಡಿ ೦೬ (ಯುಎನ್‌ಐ) ರಾಜ್ಯದಲ್ಲಿ ತತ್ವಾಧಾರಿತ ರಾಜಕೀಯಕ್ಕೆ ಮಾತ್ರ ಅವಕಾಶವಿದೆಯೇ ಹೊರತು ಬಲವಂತದ ರಾಜಕಾರಣಕ್ಕಲ್ಲ ಎಂದು ಎಜೆಎಸ್‌ಯು ಮುಖ್ಯಸ್ಥ ಸುದೇಶ್ ಕುಮಾರ್ ಮಹತೋ ಹೇಳಿದ್ದಾರೆ.
ಸಿಮರಿಯಾದಲ್ಲಿ ನಡೆದ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯಿಂದ ಬರುವವರು ಜಾರ್ಖಂಡ್ ಜನರನ್ನು ಕೇವಲ ವೋಟ್‌ಬ್ಯಾಂಕ್‌ನಂತೆ ಕಾಣುತ್ತಾರೆ. ಆದರೆ ತಮಗೆ ಇಲ್ಲಿನ ಜನ ಕುಟುಂಬ ಸದಸ್ಯರಿದ್ದಂತೆ ಎಂದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪರಿಸ್ಥಿತಿ ಬದಲಾಗುತ್ತಿದ್ದಂತೆ ಬಿಜೆಪಿಯವರೂ ಬದಲಾಗುತ್ತಾರೆ. ಆದರೆ ಸ್ನೇಹವು ತತ್ವಗಳು ಮತ್ತು ನಂಬಿಕೆಯ ಮೇಲೆ ಇರುತ್ತದೆ ಎಂದು ಅವರು ಹೇಳಿದರು .
ಈ ಬಾರಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೊದಲ ಸಂಪುಟ ಸಭೆಯಲ್ಲೇ ಮೀಸಲಾತಿ ವಿಸ್ತರಣೆ, ಮದರಸಾದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ವ್ಯವಸ್ಥೆ ಮಾಡಲಾಗುವುದು. ಮುಚ್ಚಿದ ಶಾಲೆಗಳನ್ನು ತೆರೆಯಲಾಗುವುದು ಎಂದು ಭರವಸೆ ನೀಡಿದು.
ಈ ಬಾರಿ ಯುವಜನತೆ ರಾಜ್ಯದ ಭವಿಷ್ಯವನ್ನು ನಿರ್ಧರಿಸುತಾರೆ ಎಂದ ಮಹತೋ, ಈ ಚುನಾವಣೆಗಳಲ್ಲಿ ಎಜೆಎಸ್‌ಯು ಜನರಲ್ಲಿ ಹೊಸ ಭರವಸೆಯಾಗಿ ಕಾಣುತ್ತಿದೆ ಎಂದು ಹೇಳಿದರು.
ಯುಎನ್‌ಐ ಎಸ್‌ಎ ವಿಎನ್ ೧೯೪೦