Saturday, Jan 25 2020 | Time 01:22 Hrs(IST)
National Share

ಜಾರ್ಖಂಡ್‍ ನಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ-ರಾಜೀವ್‍ ಪ್ರತಾಪ್‍ ರೂಡಿ

ರಾಂಚಿ, ಡಿ 7(ಯುಎನ್‍ಐ)- ವಿಧಾನಸಭಾ ಚುನಾವಣೆಯಲ್ಲಿ 65ಕ್ಕೂ ಹೆಚ್ಚು ಸ್ಥಾನ ಗಳಿಸುವುದರೊಂದಿಗೆ ಬಿಜೆಪಿ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ರಘುಬರ್ ದಾಸ್ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದಾರೆ. ಬಿಜೆಪಿ ರಾಜ್ಯಕ್ಕೆ ಸ್ಥಿರವಾದ ಸರ್ಕಾರವನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಜಾರ್ಖಂಡ್ ಅವರನ್ನು ತಮ್ಮ ಪ್ರಿಯ ರಾಜ್ಯಗಳೆಂದು ಪರಿಗಣಿಸಿದ್ದಾರೆ. ಜಾರ್ಖಂಡ್ ಅಪಾರ ಅವಕಾಶಗಳಿಂದ ಕೂಡಿದ್ದು, ಪ್ರಗತಿಯಲ್ಲಿ ಮುಂದೆ ಸಾಗುತ್ತಿದೆ. ಬುಡಕಟ್ಟು ಕಲ್ಯಾಣ, ಕೃಷಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅನೇಕ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ ಎಂದು ಅವರು ಹೇಳಿದರು.
ರಾಜಕೀಯದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ ಮತ್ತು ಕೆಲ ಸಣ್ಣ ಘಟನೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ಎಂದು ಅವರು ಹೇಳಿದರು.

ಯುಎನ್‍ಐ ಎಸ್‍ಎಲ್‍ಎಸ್‍ 2238
More News
ಗಣರಾಜ್ಯ:  ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಗಣರಾಜ್ಯ: ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

24 Jan 2020 | 8:49 PM

ನವದೆಹಲಿ, ಜನವರಿ 24 (ಯುಎನ್‌ಐ) ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ 71 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಶನಿವಾರ ( ನಾಳೆ) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

 Sharesee more..