Sunday, Nov 1 2020 | Time 00:17 Hrs(IST)
Entertainment Share

ಜೈಲು ಅಧಿಕಾರಿಗಳಿಂದ ನಟಿ ರಾಗಿಣಿಗೆ ಹೊಸ ಬಟ್ಟೆ

ಬೆಂಗಳೂರು, ಸೆ 16 (ಯುಎನ್‍ಐ) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿಗೆ ಜೈಲು ಅಧಿಕಾರಿಗಳು ಹೊಸ ಬಟ್ಟೆ ತರಿಸಿಕೊಟ್ಟಿದ್ದಾರಂತೆ. ಕಳೆದ ಎರಡು ದಿನಗಳಿಂದ ಒಂದೇ ಬಟ್ಟೆಯಲ್ಲಿರುವ ರಾಗಿಣಿ, ಪೋಷಕರು ಬೇರೆ ಬಟ್ಟೆ ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದರಂತೆ. ಆದರೆ ಮನೆಯಿಂದ ಉಡುಪು ಬಾರದ ಕಾರಣ, ಜೈಲಿನ ಮೂಲಕವೇ ಹೊಸ ಬಟ್ಟೆ ತರಿಸಿಕೊಡಲಾಗಿದೆ.
-:ಬೆನ್ನುನೋವಿಗೆ ಚಿಕಿತ್ಸೆ ;-
ನಟಿ ರಾಗಿಣಿಯವರು ಸಿಸಿಬಿ ವಿಚಾರಣೆ ಮುಗಿಸಿ ಮಹಿಳಾ ಸಾಂತ್ವನ ಕೇಂದ್ರದಿಂದ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗುವಾಗಲೇ, ತಮಗೆ ಬೆನ್ನುನೋವಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ನೀಡುವಂತೆ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಆದರೆ ಜೈಲು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ನ್ಯಾಯಾಲಯ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ.

ರಾಗಿಣಿ ಎರಡನೇ ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಇದೇ19ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಹೊಸ ಎಸ್ಪಿಪಿಗಳ ನೇಮಕ ಹಿನ್ನೆಲೆಯಲ್ಲಿ ಹೊಸ ಅಭಿಯೋಜಕರಿಂದ ಕಾಲಾವಕಾಶ ಕೋರಲಾಗಿದೆ. ಆಕ್ಷೇಪಣೆ ಸಲ್ಲಿಸಲು ಅಭಿಯೋಜಕರು ಕಾಲಾವಕಾಶ ಕೋರಿದ್ದರಿಂದ ರಾಗಿಣಿಗೆ 3 ದಿನ ಜೈಲೇ ಗತಿಯಾಗಿದೆ.
ಯುಎನ್‍ಐ ಎಸ್‍ಎ 1256
More News

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

 Sharesee more..