Wednesday, Aug 21 2019 | Time 23:49 Hrs(IST)
 • ಚಿದಂಬರಂ ಬಂಧನ: ಪ್ರಧಾನಿ ಮೋದಿ ಚುನಾವಣಾ ಭರವಸೆ ಈಡೇರಿಕೆ
 • ಐ ಎನ್ ಎಕ್ಸ್ ಮೀಡಿಯಾ ಪ್ರಕರಣ : ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ವಶಕ್ಕೆ
 • ಶ್ರೀನಗರದಲ್ಲಿ ಶುಕ್ರವಾರ ಸಾರ್ವಜನಿಕರನ್ನು ಭೇಟಿ ಮಾಡಲಿರುವ ರಾಜ್ಯಪಾಲರ ಸಲಹೆಗಾರ
 • ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ
 • ಮುಂದಿನ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ರಾಜೀವ್ ಗೌಬಾ ನೇಮಕ
 • ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ – ಅಜಿತ್ ದೋವಲ್ ಮಾತುಕತೆ
 • ನಾನು ಓಡಿಹೋಗಿಲ್ಲ, ನ್ಯಾಯದಿಂದ ರಕ್ಷಣೆ ಪಡೆಯಲು ಕೆಲಸ ಮಾಡುತ್ತಿದ್ದೇನೆ: ಚಿದಂಬರಂ
 • ಆರ್ ಟಿಐ ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣ; ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
 • ಎಂಡಿಎಸ್ ಶುಲ್ಕ ತಾರತಮ್ಯ; ನಾಲ್ಕು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
 • ಸರ್ಕಾರಿ ವಾಹನಗಳಿಗೆ ಮಹಿಳಾ ಚಾಲಕರ ನೇಮಕ; ಕೇರಳ ಸಂಪುಟ ಸಮ್ಮತಿ
 • ಐಎನ್ ಎಕ್ಸ್ ಮೀಡಿಯಾ ಪ್ರಕರಣ; ಚಿದಂಬರಂ ವಿರುದ್ಧ ಸಿಬಿಐ, ಇಡಿ ಲುಕ್ ಔಟ್ ನೋಟೀಸ್ ಜಾರಿ
 • ಕೆಲಸ ಸರಿಯಾಗಿ ನಿರ್ವಹಿಸಲಾಗದಿದ್ದರೆ, ಬೇರೆಡೆಗೆ ವರ್ಗ ಮಾಡಿಸಿಕೊಳ್ಳಿ ; ಇಂಜಿನಿಯರ್ ಗಳಿಗೆ ಮೇಯರ್ ತರಾಟೆ
 • ಯಾಂತ್ರೀಕೃತ ಮೀನುಗಾರಿಕೆ ಬೋಟ್‍ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಮುಖ್ಯಮಂತ್ರಿ
 • ಅಯೋಧ್ಯೆ ಪ್ರಕರಣ: ರಾಮ ಜನ್ಮಭೂಮಿಯಲ್ಲಿ ಜನರ ನಂಬಿಕೆ ಸಾಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ
 • ಪಕ್ಷೇತರ ಶಾಸಕ ಅನಂತ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್
Health -Lifestyle Share

ಜಿಲ್ಲೆಯ 11.82 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ: ಎಂ.ಎಸ್.ಅರ್ಚನಾ

ಬೆಂಗಳೂರು, ಜುಲೈ 17 (ಯುಎನ್ಐ) ಬೆಂಗಳೂರು ನಗರ ಜಿಲ್ಲೆಯಾದ್ಯಂತ ಸೆಪ್ಟಂಬರ್ ತಿಂಗಳಲ್ಲಿ ಹಮ್ಮಿಕೊಳ್ಳುವ ಜಂತುಹುಳು ನಿವಾರಣಾ ದಿನದಂದು 11.82 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದರು. ಅವರು, ಬುಧವಾರ ಬೆಂಗಳೂರು ನಗರ ಜಿ.ಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಜಂತುಹುಳು ನಿಯಂತ್ರಣ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಲ್ಲಿ ಕಂಡುಬರುವ ಜಂತುಹುಳುವಿನ ಬಾಧೆಯಿಂದ ರಕ್ತಹೀನತೆ ಮತ್ತು ಪೌಷ್ಠಿಕಾಂಶದ ಕೊರತೆ ಉಂಟಾಗುತ್ತದೆ. ಇದನ್ನು ತಡೆಗಟ್ಟಲು 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ 400 ಮಿಲಿ ಗ್ರಾಂ.ನ 1 ಮಾತ್ರೆಯನ್ನು ನೀಡಲಾಗುವುದು. ಇದರಲ್ಲಿ 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆಯನ್ನು 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ನೀಡಲಾಗುವುದು. ಮಕ್ಕಳಿಗೆ ಮಾತ್ರೆ ನೀಡುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಸುಮಾರು 2 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಮೇಲ್ವಿಚಾರಕರು ಅಂಗನವಾಡಿ ಭೇಟಿಗೆ ತೆರಳಿದಾಗ ಮಕ್ಕಳ ವಯಸ್ಸಿಗೆ ತಕ್ಕಂತೆ ಅಳತೆ ಮತ್ತು ತೂಕವನ್ನು ಪರೀಕ್ಷಿಸಿ, ಅಪೌಷ್ಠಿಕತೆಯಿಂದ ಕೂಡಿರುವ ಮಕ್ಕಳನ್ನು ಗುರುತಿಸಿ ಅವರನ್ನು ಚಿಕಿತ್ಸೆಗೆ ಕಳಿಸುವ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಷ್ಟ್ರೀಯ ಫ್ಲೊರೋಸಿಸ್ ತಡೆ ಮತ್ತು ನಿಯಂತ್ರಣ ಕುರಿತು ಮಾತನಾಡಿದ ಅವರು, ಜಿಲ್ಲೆಯ 93 ಹಳ್ಳಿಗಳನ್ನು ಫ್ಲೊರೋಸಿಸ್ ಪೀಡಿತ ಹಳ್ಳಿಗಳೆಂದು ಗುರಿತಿಸಲಾಗಿದೆ. ಫ್ಲೊರೋಸಿಸ್ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದು ವಯಸ್ಸಿನ ಅಂತರ, ಲಿಂಗಭೇದವಿಲ್ಲದೆ ಎಲ್ಲರಲ್ಲಿಯೂ ಕಂಡು ಬರುವ ಖಾಯಿಲೆಯಾಗಿದೆ.

ಫ್ಲೊರೋಸಿಸ್ ರೋಗದ ತೀವ್ರತೆ ಕಡಿಮೆಮಾಡಲು 1 ಪಿಪಿಎಂ ಗಿಂತ ಕಡಿಮೆ ಇರುವ ಶುದ್ಧ ಕುಡಿಯುವ ನೀರನ್ನು ಉಪಯೋಗಿಸಬೇಕು. ಫ್ಲೊರೈಡ್ ಅಂಶ ಹೆಚ್ಚು ಇರುವ ಹಳ್ಳಿಗಳಲ್ಲಿ ಫ್ಲೊರೈಡ್ ರಹಿತ ಟೂತ್‌ಪೇಸ್ಟ್ ಅನ್ನು ಹಾಗೂ ದಿನ ನಿತ್ಯದ ಆಹಾರದಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಮೆಗ್ನಿಷಿಯಂ ಹೆಚ್ಚು ಇರುವ ಹಸಿರು ತರಕಾರಿಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸಂಬಂಧಿಸಿದ ಅಧಿಕಾರಿಗಳು ಅರಿವು ಮೂಡಿಸಿ ಇದರ ನಿಯಂತ್ರಣಕ್ಕೆ ಸಹಕರಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಆರ್‌ಸಿಎಚ್ ಅಧಿಕಾರಿ ಸಯ್ಯದ್ ಸಿರಾಜುದ್ದೀನಿ ಮದನಿ, ಎನ್.ಆರ್.ಸಿ ಮುಖ್ಯಸ್ಥ ತಿಮ್ಮಪ್ಪ, ಜಿಲ್ಲೆಯ ವೈದ್ಯಾಧಿಕಾರಿಗಳು, ಕಾರ್ಯಕರ್ತರು, ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಯುಎನ್ಐ ಡಿಸಿ ಎಎಸ್ 1918
More News
ನೆರೆಗೆ ರಾಜ್ಯದಲ್ಲಿ ಎಂಟು ತೂಗುಸೇತುವೆಗಳು ನಾಶ : ಗಳಗಳನೆ ಅತ್ತ ತೂಗು ಸೇತುವೆಯ ಸರದಾರ ಗಿರೀಶ್ ಭಾರಧ್ವಜ್

ನೆರೆಗೆ ರಾಜ್ಯದಲ್ಲಿ ಎಂಟು ತೂಗುಸೇತುವೆಗಳು ನಾಶ : ಗಳಗಳನೆ ಅತ್ತ ತೂಗು ಸೇತುವೆಯ ಸರದಾರ ಗಿರೀಶ್ ಭಾರಧ್ವಜ್

11 Aug 2019 | 8:50 PM

ಮಂಗಳೂರು, ಆ 11 [ಯುಎನ್ಐ] ರಾಜ್ಯದೆಲ್ಲೆಡೆ ಮಳೆಯಿಂದಾಗಿ ಅಪಾರ ನಷ್ಟ, ಸಾವು ನೋವು ಸಂಭವಿಸಿದೆ ಒಬ್ಬೊಬ್ಬರದ್ದು ಒಂದೊಂದು ನೋವಿನ ಕಥೆ ಗ್ರಾಮೀಣ ಜನರ ಬದುಕನ್ನು ಬೆಸೆದಿದ್ದ ಎಂಟು ದೊಡ್ಡ ತೂಗು ಸೇತುವೆಗಳು ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿವೆ ಸೇತುವೆಗಳ ನಿರ್ಮಾಣದ ರೂವಾರಿಯ ನೋವಿನ ಕಥನ ಇಲ್ಲಿದೆ.

 Sharesee more..

ಏಳು ವರ್ಷದ ಬಾಲಕನ ಬಾಯಲ್ಲಿ 526 ಹಲ್ಲುಗಳು!

31 Jul 2019 | 4:24 PM

 Sharesee more..
ದಿವ್ಯಾಂಗರಿಗಾಗಿ ಮೊಬಿಲಿಟಿ ಇಂಡಿಯಾದಿಂದ ‘2030ಕ್ಕೆ ಎಲ್ಲರಿಗೂ ತಂತ್ರಜ್ಞಾನ’ ರಾಷ್ಟ್ರೀಯ ಸಮ್ಮೇಳನ

ದಿವ್ಯಾಂಗರಿಗಾಗಿ ಮೊಬಿಲಿಟಿ ಇಂಡಿಯಾದಿಂದ ‘2030ಕ್ಕೆ ಎಲ್ಲರಿಗೂ ತಂತ್ರಜ್ಞಾನ’ ರಾಷ್ಟ್ರೀಯ ಸಮ್ಮೇಳನ

30 Jul 2019 | 8:13 PM

ಬೆಂಗಳೂರು, ಜುಲೈ 30 (ಯುಎನ್ಐ) ಮೊಬಿಲಿಟಿ ಇಂಡಿಯಾ ಸಂಸ್ಥೆ, ನಗರದ ನಿಮ್ಹಾನ್ಸ್ ಸಮಾವೇಶ ಸಭಾಂಗಣದಲ್ಲಿ ಆಗಸ್ಟ್ 2 ಮತ್ತು 3 ರಂದು “2030ಕ್ಕೆ ಎಲ್ಲರಿಗೂ ತಂತ್ರಜ್ಞಾನ” ವಿಷಯ ಕುರಿತ ರಾಷ್ಟ್ರೀಯ ಸಮ್ಮೇಳನ ಯೋಜಿಸಿದೆ.

 Sharesee more..