Monday, Jul 22 2019 | Time 07:11 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
International Share

ಜುಲೈ 22 ರಂದು ಟ್ರಂಪ್ – ಇಮ್ರಾನ್ ಖಾನ್ ಭೇಟಿ

ಜುಲೈ 22 ರಂದು ಟ್ರಂಪ್ – ಇಮ್ರಾನ್ ಖಾನ್ ಭೇಟಿ
ಜುಲೈ 22 ರಂದು ಟ್ರಂಪ್ – ಇಮ್ರಾನ್ ಖಾನ್ ಭೇಟಿ

ವಾಷಿಂಗ್ಟನ್, ಜುಲೈ 11 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 22 ರಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಭಯೋತ್ಪಾದನಾ ನಿಗ್ರಹ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.



ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಸಹಕಾರ ಬಲವರ್ಧನೆ, ಶಾಂತಿ, ಸ್ಥಿರತೆ ಮತ್ತು ಆರ್ಥಿಕ ಸಮೃದ್ಧಿ ಕುರಿತು ಪ್ರಮುಖವಾಗಿ ಚರ್ಚೆ ನಡೆಯಲಿದೆ. ಉಭಯ ನಾಯಕರು ಭಯೋತ್ಪಾದನಾ ನಿಗ್ರಹ, ರಕ್ಷಣೆ, ಇಂಧನ, ವ್ಯಾಪಾರ ವಹಿವಾಟು ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಕಳೆದ ವರ್ಷದ ಆಗಸ್ಟ್‌ ನಲ್ಲಿ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕರಿಸಿದ ನಂತರ ಇದು ಅಮೆರಿಕಕ್ಕೆ ಅವರ ಮೊದಲ ಭೇಟಿಯಾಗಿರಲಿದೆ.



ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಡಾ. ಮೊಹಮದ್ ಫೈಸಲ್ ಸಹ ಟ್ರಂಪ್ ಅವರ ಆಹ್ವಾನ ಕುರಿತು ತಿಳಿಸಿದ್ದಾರೆ. ನವ ಪಾಕಿಸ್ತಾನದ ಪರಿಕಲ್ಪನೆ ಹಾಗೂ ಅಮೆರಿಕದೊಂದಿಗೆ ಬಹುಪಕ್ಷೀಯ ಸಂಬಂಧ ಬಲವರ್ಧನೆ ಕುರಿತು ಪ್ರಧಾನಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪಾಕ್ ಕಚೇರಿ ಪ್ರಕಟಣೆ ತಿಳಿಸಿದೆ.





ಯುಎನ್ಐ ಜಿಎಸ್‌ಆರ್ ಆರ್ ಕೆ 0829