Monday, Jul 22 2019 | Time 07:03 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Sports Share

ಜಾವಲಿನ್ ನಲ್ಲಿ ಎಲ್ವಿ ಹುಯಿಹುಯಿ ದಾಖಲೆ

ಶಿಯಾಂಗ್, ಚೀನಾ, ಜು 11 (ಯುಎನ್ಐ)- ಚೀನಾದ ಎಲ್ವಿ ಹುಯಿಹುಯಿ ಗುರುವಾರ ಇಲ್ಲಿ ನಡೆದ ಚೀನೀ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಎಲ್ವಿ ಹುಯಿಹುಯಿ ಜಾವೆಲಿನ್ 67.83 ಮೀಟರ್ ಎಸೆದು, ಏಷ್ಯನ್ ದಾಖಲೆ ಬರೆದಿದ್ದಾರೆ.

ಏಪ್ರಿಲ್ ನಲ್ಲಿ ನ್ಯಾಷನಲ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಸ್ಥಾಪಿಸಲಾಗಿದ್ದ 67.72 ಮೀಟರ್ಗಳ ಏಷ್ಯನ್ ದಾಖಲೆ ಅಳಿಸಿತು.

ಈ ಬಗ್ಗೆ ಮಾತನಾಡಿದ ಹುಯಿಹುಯಿ, ಇತ್ತೀಚಿಗೆ ಕಠಿಣ ತಾಲೀಮು ನಡೆಸಿದ್ದೆ. ರಾಷ್ಟ್ರೀಯ ದಾಖಲೆಗಿಂತ ಹೆಚ್ಚಿನ ಕನಸು ಕಂಡಿರಲಿಲ್ಲ. ಮುಂದಿನ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ಮುಂದುವರಿಸಿ, ದೇಶಕ್ಕೆ ಪದಕ ತೊಡಿಸುವ ಕನಸು ಹೊಂದಿದ್ದಾಗಿ ತಿಳಿಸಿದ್ದಾರೆ.