Wednesday, Feb 26 2020 | Time 10:42 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಝಾಕಿರ್ ನಾಯಕ್‌ ಪೋಷಕ ಕಾಂಗ್ರೆಸ್; ಬಿಜೆಪಿ ಟೀಕೆ

ನವದೆಹಲಿ, ಜ.15 (ಯುಎಎನ್ಐ) ಇಸ್ಲಾಮಿಕ್ ಬೋಧಕ ಝಾಕಿರ್ ನಾಯಕ್ ಬಗ್ಗೆ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿ ಬಿಜೆಪಿ ಬುಧವಾರ, ಪ್ರಮುಖ ಪ್ರತಿಪಕ್ಷದ ನಾಯಕತ್ವದ ಸೂಚನೆಯ ಮೇರೆಗೆ ಅದರ ನಾಯಕರು ಚುನಾಯಿತ ಪ್ರಧಾನಿ ವಿರುದ್ಧ ಆರೋಪರಹಿತ ಆರೋಪ ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದೆ.
ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಸೂಚನೆಯ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ದಿಗ್ವಿಜಯ ಸಿಂಗ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸುವಂತೆ ಬಿಜೆಪಿ ಸರ್ಕಾರ ತಮ್ಮ ಬಳಿಗೆ ಸಂದೇಶವಾಹಕರೊಬ್ಬರನ್ನು ಕಳುಹಿಸಿತ್ತು ಎಂದು ಇಸ್ಲಾಂ ಪ್ರಚಾರಕ ಝಾಕಿರ್ ನಾಯಕ್ ಆರೋಪಿಸಿದ್ದರು. ಇದನ್ನು ಮುಂದಿಟ್ಟು ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ದಿಗ್ವಿಜಯ್ ಸಿಂಗ್ ವಿಶ್ವಾಸಾರ್ಹತೆ ಹೊಂದಿಲ್ಲ. ಚುನಾಯಿತ ಪ್ರಧಾನಿಯ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಭಾಟಿಯಾ ಹೇಳಿದ್ದಾರೆ
ನಾಯಕ್ ಅವರನ್ನು ಕಾಂಗ್ರೆಸ್ ಪೋಷಿಸುತ್ತಿದೆ ಮತ್ತು ನಾಯಕ್ ಬಗ್ಗೆ ಕಾಂಗ್ರೆಸ್‌ನ ಪ್ರೀತಿ ಮತ್ತು ವಾತ್ಸಲ್ಯ ಎಲ್ಲರಿಗೂ ತಿಳಿದಿದೆ ಎಂದು ಭಾಟಿಯಾ ಆರೋಪಿಸಿದರು. ಮಾತ್ರವಲ್ಲ ಕಾಂಗ್ರೆಸ್ ಪಕ್ಷ ಝಾಕಿರ್ ನಾಯಕ್‌ ಅವರಿಂದ ದೊಡ್ಡ ಕೊಡುಗೆ, ಲಾಭಗಳನ್ನು ಪಡೆದುಕೊಂಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಕಥೆ ಕಟ್ಟಲು ಪ್ರಯತ್ನಿಸುತ್ತಿದೆ ಎಂದು ಭಾಟಿಯಾ ಹೇಳಿದರು.
ಸಂವಿಧಾನದ 370ನೇ ವಿಧಿ ರದ್ದು ಕುರಿತು ಸರ್ಕಾರದ ಕ್ರಮಕ್ಕೆ ಬೆಂಬಲ ನೀಡಿದರೆ ಭಾರತಕ್ಕೆ ಬಂದು ನೆಲೆಸಲು ಅವಕಾಶ ಕಲ್ಪಿಸುವುದಾಗಿ ಝಾಕಿರ್ ನಾಯಕ್‌ಗೆ ಕೇಂದ್ರ ಭರವಸೆ ನೀಡಿತ್ತು ಎಂಬ ಝಾಕಿರ್ ಅವರು ಹೇಳಿರುವ ಹೇಳಿಕೆ ಬಗ್ಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಬೇಕು ಎಂದು ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದರು.
ಸರ್ಕಾರದ ಕ್ರಮವನ್ನು ಬೆಂಬಲಿಸಿದರೆ, ಅವರ ವಿರುದ್ಧದ ಎಲ್ಲಾ ದೇಶದ್ರೋಹ ಪ್ರಕರಣಗಳನ್ನು ಕೈಬಿಡಲಾಗುವುದು ಎಂದು ಸಂದೇಶವಾಹಕ ಹೇಳಿದ್ದಾರೆ ಎಂದು ನಾಯಕ್ ಹೇಳಿದ್ದರು. ಈ ಕುರಿತು ದಿಗ್ವಿಜಯ್ ಸಿಂಗ್ ಅವರು ಈಗ ಪ್ರಧಾನಿ ಮತ್ತು ಗೃಹ ಸಚಿವರು ಈ ಆರೋಪಗಳಿಗೆ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕೇಳಿದ್ದರು.
53 ವರ್ಷದ ಇಸ್ಲಾಮಿಕ್ ಬೋಧಕ ನಾಯಕ್ 2016 ರಲ್ಲಿ ಭಾರತವನ್ನು ತೊರೆದು ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷದ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸಿದ ಆರೋಪಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇದರಿಂದ 2016 ರಿಂದ ಭಾರತೀಯ ಅಧಿಕಾರಿಗಳು ಬಂಧನಕ್ಕೆ ಪ್ರಯತ್ನಿಸುತ್ತಿದ್ದಾರೆ.
ಯುಎನ್ಐ ಎಎಚ್ 1850