Sunday, Nov 1 2020 | Time 00:58 Hrs(IST)
Entertainment Share

ಟಾಲಿವುಡ್ ನಲ್ಲೂ ನಶೆಯ ಘಾಟು : ಭದ್ರತೆ ಕೊಟ್ಟರೆ ಮಾಹಿತಿ ಕೊಡ್ತಾರಂತೆ ನಟಿ ಶ್ರೀರೆಡ್ಡಿ!

ಹೈದರಾಬಾದ್, ಸೆ 15 (ಯುಎನ್‍ಐ) ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ನಟಿ ಶ್ರೀರೆಡ್ಡಿ ಇದೀಗ ಡ್ರಗ್ಸ್ ಜಾಲದ ಕುರಿತು ಬಾಂಬ್ ಸಿಡಿಸಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪ್ರಗತಿಯಲ್ಲಿದ್ದರೆ, ಅತ್ತ ನಟಿ ಶ್ರೀರೆಡ್ಡಿ ತೆಲುಗು ಚಿತ್ರರಂಗದಲ್ಲೂ ನಶೆಯ ಘಾಟು ಬಡಿಯುತ್ತಿದೆ ಎಂದಿದ್ದಾರೆ.

ಭದ್ರತೆ ನೀಡಿದರೆ ಡ್ರಗ್ಸ್ ಸೇವಿಸುವ ಟಾಲಿವುಡ್ ನಟ ನಟಿಯರ ಹೆಸರು ಹೇಳುವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ 8 ನಿಮಿಷಗಳ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು, “ನನಗೆ ಭದ್ರತೆ ನೀಡಿದರೆ ಯಾವ ಯಾವ ನಟ ನಟಿಯರು ಡ್ರಗ್ಸ್ ಸೇವಿಸುತ್ತಾರೆ. ಯಾರ್ಯಾರು ಮಾದಕ ವಸ್ತು ಜಾಲದಲ್ಲಿದ್ದಾರೆ ಎಂಬ ಪಟ್ಟಿ ಕೊಡ್ತೀನಿ. ದೊಡ್ಡ ದೊಡ್ಡ ನಟರ ಮನೆಯಲ್ಲಿ ನಡೆಯುವ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು ಆಗುತ್ತದೆ” ಎಂದು ಹೇಳಿದ್ದಾರೆ.

ಯುಎನ್‍ಐ ಎಸ್‍ಎ 1307
More News

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

 Sharesee more..