business economyPosted at: Jul 22 2019 6:46PM Shareಟಿವಿಎಸ್ ಮಾರಾಟ ಶೇ. 7.8ರಷ್ಟು ಏರಿಕೆಚೆನ್ನೈ, ಜುಲೈ 22 (ಯುಎನ್ಐ) ಟಿವಿಎಸ್ ಮೋಟಾರ್ ಕಂಪನಿಯ ರಫ್ತು ಸೇರಿದಂತೆ ಒಟ್ಟಾರೆ ದ್ವಿಚಕ್ರ ವಾಹನ ಮಾರಾಟವು ಜೂನ್ 2019 ರ ಅಂತ್ಯದ ಮೊದಲ ತ್ರೈಮಾಸಿಕದಲ್ಲಿ 8.84 ಲಕ್ಷವಾಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 8.93 ಲಕ್ಷ ವಾಹನಗಳು ಮಾರಾವಾಗಿದ್ದವು. ಆದಾಗ್ಯೂ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಮೋಟಾರ್ಸೈಕಲ್ ಮಾರಾಟ ಶೇ.7.8ರಷ್ಟು ಏರಿಕೆಯಾಗಿದ್ದು, 4.17 ಲಕ್ಷ ವಾಹನಗಳಿಗೆ ತಲುಪಿದೆ. ಸ್ಕೂಟರ್ ಮಾರಾಟವು ಶೇ. 2.4 ರಷ್ಟು ಏರಿಕೆಯಾಗಿದ್ದು 2.95 ಲಕ್ಷಕ್ಕೆ ತಲುಪಿದೆ. ಜೂನ್ 2018ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 2.88 ಲಕ್ಷವಿತ್ತು.ತ್ರೈಮಾಸಿಕದಲ್ಲಿ ಒಟ್ಟು ರಫ್ತು ಶೇ.10 ರಷ್ಟು ಏರಿಕೆಯಾಗಿ 1.90 ಲಕ್ಷ ವಾಹನಗಳಿಂದ 2.09 ಲಕ್ಷ ವಾಹನಗಳಿಗೆ ತಲುಪಿದೆ. ಒಟ್ಟು ತ್ರಿಚಕ್ರ ವಾಹನಗಳ ಮಾರಾಟವು ಶೇ.11.1 ರಷ್ಟು ಏರಿಕೆ ಕಂಡು 0.40 ಲಕ್ಷ ವಾಹನಗಳಿಗೆ ತಲುಪಿದೆ.2019-20ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ಶೇ.7.2 ರಷ್ಟು ಆದಾಯದ ಬೆಳವಣಿಗೆ ದಾಖಲಿಸಿದೆ. ಒಟ್ಟಾರೆ ಆದಾಯ 4,469.8 ಕೋಟಿ ರೂ.ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,171 ಕೋಟಿ ರೂ. ಇತ್ತು. ತೆರಿಗೆ ನಂತರದ ಲಾಭ 142.3 ಕೋಟಿ ರೂ. ದಾಖಲಾಗಿದೆ.ಯುಎನ್ಐ ಕೆಎಸ್ವಿ ವಿಎನ್ಎಲ್ 1844