Friday, Dec 13 2019 | Time 11:06 Hrs(IST)
  • ಭಾರತ, ಚೀನಾ, ಇರಾನ್ ಹಾಗೂ ಇಥಿಯೋಪಿಯಾ ದೇಶಗಳಲ್ಲಿ ಅಂತರ್ಜಾಲ ಸ್ಥಗಿತ ಪ್ರವೃತ್ತಿ ಹೆಚ್ಚು; ಸಮೀಕ್ಷೆ
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Sports Share

ಟಾಸ್‌ ಗೆದ್ದ್ ನ್ಯೂಜಿಲೆಂಡ್‌: ಬ್ಯಾಟಿಂಗ್‌ ಆಯ್ಕೆ

ಲಾರ್ಡ್ಸ್‌, ಜು.14(ಯುಎನ್‌ಐ) ವಿಶ್ವಕಪ್ 2019ರ ಇಂಗ್ಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ನ್ಯೂಜಿಲೆಂಡ್‌ ಬ್ಯಾಟಿಂಗ್‌ ಆಯ್ದುಕೊಂಡಿದೆ.
ಸೆಮಿಫೈನಲ್‌ನ ರೋಚಕ ಪಂದ್ಯದಲ್ಲಿ ಭಾರತವನ್ನು ಮಣಿಸಿ ನ್ಯೂಜಿಲೆಂಡ್‌ ಫೈನಲ್ಸ್ ಗೆ ಲಗ್ಗೆ ಇಟ್ಟರೆ, ಆಸ್ಟ್ರೆಲಿಯಾವನ್ನು ಸುಲಭವಾಗಿ ಸೋಲಿಸಿದ ಇಂಗ್ಲೆಂಡ್‌ ಫೈನಲ್‌ ಪ್ರವೇಶಿಸಿತ್ತು.
ಟಾಸ್‌ ಬಳಿಕ ಮಾತನಾಡಿದ ನ್ಯೂಜಿಲೆಂಡ್‌ ತಂಡದ ನಾಯಕ ವಿಲಿಯಮ್ಸನ್, ಕಠಿಣ ನಿರ್ಧಾರ. ಬ್ಯಾಟ್ ಮೊದಲು ಆಯ್ಕೆ ಮಾಡಿಕೊಳ್ಳಬೇಕಾದ ಪಿಚ್‌. ಆದರೆ ಪಂದ್ಯ ಸಾಗಿದಂತೆ ಪರಿಸ್ಥಿತಿ 50-50 ಆಗುತ್ತದೆ. ಭಾರತದ ವಿರುದ್ಧ ನಿಜವಾಗಿಯೂ ಉತ್ತಮ ಆಟ ಆಡಿದ್ದೇವೆ ಮತ್ತು ಅದು ಮುಂದುವರಿಯುತ್ತದೆ. ಆದರೆ, ಇದು ಕಠಿಣ ಪಿಚ್‌ ಮತ್ತು ಕಠಿಣ ಪ್ರತಿಸ್ಪರ್ಧಿ ಎಂದರು.
ಟಾಸ್ 50-50 ಆಗಿದೆ. ಟಾಸ್ ಸೋತಿದ್ದಕ್ಕೆ ನಿರಾಶೆಗೊಂಡಿಲ್ಲ. ಜಾನಿ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ, ಇದು ನಮಗೆ ಉತ್ತಮ ಸುದ್ದಿಯಾಗಿದೆ. ನಾವು ಗೆಲ್ಲಲು ಬಯಸುತ್ತೇವೆ ಮತ್ತು ಪಂದ್ಯಾವಳಿಯುದ್ದಕ್ಕೂ ನಾವು ಕಠಿಣ ಆಟಗಳನ್ನು ಆಡಿದ್ದೇವೆ ಮತ್ತು ಸೆಮಿಫೈನಲ್ ಅದನ್ನು ಸಂಕ್ಷಿಪ್ತಗೊಳಿಸಿದೆ ಎಂದು ಇಂಗ್ಲೆಂಡ್‌ ನಾಯಕ ಇಯೊನ್ ಮೋರ್ಗಾನ್ ಹೇಳಿದರು.
ಉಭಯ ತಂಡಗಳು ಪ್ಲೇಯಿಂಗ್‌ 11ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ತಂಡ ಹೀಗಿದೆ:
ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಇಯೊನ್ ಮೋರ್ಗಾನ್ (ನಾಯಕ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ಕೀಪರ್‌), ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್
ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಜೇಮ್ಸ್ ನೀಶಮ್, ಟಾಮ್ ಲಾಥಮ್ (ಕೀಪರ್‌), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್
ಯುಎನ್‌ಐ ಕೆಎಸ್‌ವಿ ಎಸ್‌ಎಚ್‌ 1502