Monday, Aug 3 2020 | Time 23:56 Hrs(IST)
 • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
 • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
 • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
 • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
 • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
 • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
 • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
 • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
 • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
 • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
 • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
 • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
 • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
Sports Share

ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 4 ವಿಕೆಟ್ ಜಯ

ಸೌತಾಂಪ್ಟನ್, ಜುಲೈ 12 (ಯುಎನ್ಐ)
ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಎಲ್ಲ ವಿಭಾಗಗಳಲ್ಲಿ ಅದ್ಭುತ ಆಟವಾಡಿದ ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡ ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್‌ನ ಐದನೇ ದಿನವಾದ ಭಾನುವಾರ ಗೆಲುವಿಗೆ 200 ರನ್‌ಗಳ ಕಠಿಣ ಗುರಿ ಬೆನ್ನತ್ತಿದ್ದ ವಿಂಡೀಸ್‌, ಅಂತಿಮವಾಗಿ 64.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮೇಲುಗೈ ಪಡೆದುಕೊಂಡಿತು.
ಇದಕ್ಕೂ ಮುನ್ನ 5ನೇ ದಿನದಾಟದಲ್ಲಿ 8 ವಿಕೆಟ್‌ಗೆ 284 ರನ್‌ಗಳಿಂದ 2ನೇ ಇನಿಂಗ್ಸ್‌ ಬ್ಯಾಟಿಂಗ್‌ ಮುಂದುವರಿಸಿದ್ದ ಇಂಗ್ಲೆಂಡ್‌, 111.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲ್‌ಔಟ್‌ ಆಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ನೂರು ರನ್‌ಗಳಿಗೂ ಹೆಚ್ಚಿನ ಮುನ್ನಡೆ ಗಳಿಸಿದ್ದ ವಿಂಡೀಸ್‌ಗೆ 200 ರನ್‌ಗಳ ಗುರಿ ನೀಡಲಷ್ಟೇ ಬೆನ್‌ ಸ್ಟೋಕ್ಸ್‌ ಪಡೆ ಶಕ್ತವಾಯಿತು.
ವಿಂಡೀಸ್‌ ಪರ ವೇಗಿ ಶನಾನ್‌ ಗೇಬ್ರಿಯೆಲ್‌ 75ಕ್ಕೆ 5 ವಿಕೆಟ್‌ ಉರುಳಿಸಿ ಅಬ್ಬರಿಸಿದರು.ಇಂಗ್ಲೆಂಡ್‌ ತಂಡದ ಬಲಿಷ್ಠ ಬೌಲಿಂಗ್‌ ವಿಭಾಗದ ಎದುರು ಟೆಸ್ಟ್‌ನ 5ನೇ ದಿನದಂದು 200 ರನ್‌ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೂ ಜೇಮ್ಸ್‌ ಆಂಡರ್ಸನ್‌, ಜೋಫ್ರ ಆರ್ಚರ್‌ ಮತ್ತು ಮಾರ್ಕ್‌ ವುಡ್‌ ಅವರ ಮಾರಕ ಬೌಲಿಂಗ್‌ ದಾಳಿ ಎದುರು ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಜೆರ್ಮೈನ್‌ ಬ್ಲಾಕ್‌ವುಡ್‌, 154 ಎಸೆತಗಳಲ್ಲಿ 12 ಫೋರ್‌ಗಳ ನೆರವಿನಿಂದ 95 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು. ಆದರೆ, ಇನ್ನು 11 ರನ್‌ಗಳ ಅಗತ್ಯವಿದ್ದಾಗ ಅನಗತ್ಯವಾಗಿ ದೊಡ್ಡ ಹೊಡೆತಕ್ಕೆ ಮುಂದಾಗಿ ಶತಕ ವಂಚಿತರಾದರು.
ಉಳಿದಂತೆ ರಾಸ್ಟನ್‌ ಚೇಸ್‌ (37) ಮತ್ತು ಶೇನ್‌ ಡೌರಿಚ್‌ (20) ಉಪಯುಕ್ತ ಕಾಣಿಕೆ ನೀಡಿದರು.ಇನ್ನು ಕೊರೊನಾ ವೈರಸ್‌ ಕಾರಣ ಸತತ 3 ತಿಂಗಳು ಕಾಲ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ ಇಂಗ್ಲೆಂಡ್‌ vs ವೆಸ್ಟ್‌ ಇಂಡೀಸ್‌ ನಡುವಣ ಟೆಸ್ಟ್‌ ಸರಣಿ ಮೂಲಕ ಮರಳಿ ಆರಂಭವಾಗಿದ್ದು, ಜೇಸನ್‌ ಹೋಲ್ಡರ್‌ ಸಾರಥ್ಯದ ವಿಂಡೀಸ್‌ ಪಡೆಗೆ ಕೊರೊನಾ ನಂತರದ ಮೊದಲ ಗೆಲುವಿನ ಸಿಂಚನ ಲಭ್ಯವಾಗಿದೆ. ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಭಾಗವಾಗಿರುವ ಸರಣಿಯ ಎರಡನೇ ಟೆಸ್ಟ್‌ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಜುಲೈ 16ರಂದು ಪಂದ್ಯ ಆರಂಭವಾಗಲಿದೆ.
ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌: ಮೊದಲ ಇನಿಂಗ್ಸ್‌ 204/10 ಮತ್ತು 2ನೇ ಇನಿಂಗ್ಸ್‌ 313/10.
ವೆಸ್ಟ್‌ ಇಂಡೀಸ್‌: ಮೊದಲ ಇನಿಂಗ್ಸ್‌ 318/10 ಮತ್ತು 2ನೇ ಇನಿಂಗ್ಸ್‌ 200/6 (ರಾಸ್ಟನ್‌ ಚೇಸ್‌ 37, ಜೆರ್ಮೈನ್‌ ಬ್ಲ್ಯಾಕ್‌ವುಡ್‌ 95, ಶೇನ್‌ ಡೌರಿಚ್‌ 20; ಜೋಫ್ರ ಆರ್ಚರ್‌ 45ಕ್ಕೆ 3, ಬೆನ್‌ ಸ್ಟೋಕ್ಸ್‌ 39ಕ್ಕೆ 2).
ಯುಎನ್ಐಆರ್ ಕೆ 2302