Wednesday, Feb 26 2020 | Time 10:35 Hrs(IST)
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
Sports Share

ಟೆಸ್ಟ್‌ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಉಳಿದ ವಿರಾಟ್ ಕೊಹ್ಲಿ

ದುಬೈ, ಜ 24(ಯುಎನ್‌ಐ) ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್‌ ಶ್ರೇಯಾಂಕದ ಬ್ಯಾಟಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಉಪನಾಯಕ ಅಜಿಂಕ್ಯಾ ರಹಾನೆ ಒಂದು ಸ್ಥಾನ ಏರಿಕೆ ಕಂಡು ಎಂಟಕ್ಕೆೆ ಜಿಗಿದಿದ್ದಾರೆ.
ವಿರಾಟ್ ಕೊಹ್ಲಿ 928 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರು ಕೊಹ್ಲಿ ಗಿಂತ 17 ಅಂಕಗಳ ಹಿನ್ನಡೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಟೆಸ್ಟ್‌ ವಿಶೇಷ ಬ್ಯಾಟ್ಸ್‌‌ಮನ್ ಚೇತೇಶ್ವರ ಪೂಜಾರ 791 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿ ಉಳಿದಿದ್ದಾರೆ. ಒಟ್ಟಾರೆ, ಭಾರತದ ಬ್ಯಾಟ್ಸ್‌‌ಮನ್ ಗಳು ಅಗ್ರ 19ರಲ್ಲಿ ಮೂರು ಮಂದಿ ಇದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ (794) ಆರನೇ ಸ್ಥಾನ ಪಡೆದಿದ್ದು, ಆರ್. ಅಶ್ವಿನ್ ಹಾಗೂ ಮೊಹಮ್ಮದ್ ಶಮಿ ಕ್ರಮವಾಗಿ ಎಂಟು ಮತ್ತು 10ನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ(438) ಮೂರನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾ ತಂಡದ ಏಂಜೆಲೊ ಮ್ಯಾಥ್ಯೂಸ್ ಅವರು ಜಿಂಬಾಂಬ್ವೆೆ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಇದರ ಫಲವಾಗಿ ಐಸಿಸಿ ಟೆಸ್ಟ್‌ ಬ್ಯಾಟಿಂಗ್ ಶ್ರೇಯಾಂಕದ ಅಗ್ರ 20ಕ್ಕೆೆ ಮತ್ತೆ ಲಗ್ಗೆೆ ಇಟ್ಟಿದ್ದಾರೆ. ಈ ಪಂದ್ಯದಲ್ಲಿ ಶ್ರೀಲಂಕಾ 10 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಮ್ಯಾಥ್ಯೂಸ್ 16ನೇ ಸ್ಥಾನಕ್ಕೇರಿದ್ದಾರೆ.
2014ರಲ್ಲಿ ಲಂಕಾ ಮಾಜಿ ನಾಯಕ ಮೂರನೇ ಸ್ಥಾನ ಪಡೆದಿದ್ದರು. ಏಕದಿನ ಶ್ರೇಯಾಂಕದಲ್ಲೂ ಆಗ ಅಗ್ರ 10ರೊಳಗೆ ಸ್ಥಾನ ಗಿಟ್ಟಿಸಿದ್ದರು. ಸಹ ಆಟಗಾರ ಕುಸಾಲ್ ಮೆಂಡಿಸ್ 30 ರಿಂದ 26ಕ್ಕೆೆ ಜಿಗಿದಿದ್ದಾರೆ ಹಾಗೂ ಧನಂಜಯ್ ಡಿ ಸಿಲ್ವಾ ಅವರು 39 ರಿಂದ 37ನೇ ಸ್ಥಾನ ಪಡೆದಿದ್ದಾಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಸುರಂಗ ಲಕ್ಮಲ್ 22, ಲಹಿರು ಕುಮಾರ 30ನೇ ಸ್ಥಾನಕ್ಕೇರಿದ್ದಾರೆ.
ಯುಎನ್‌ಐ ಆರ್ ಕೆ 2217
More News

ಮಾರ್ಚ 2ರಿಂದ ಚೆನ್ನೈ ಅಭ್ಯಾಸ

25 Feb 2020 | 7:24 PM

 Sharesee more..

ಏಷ್ಯಾ, ವಿಶ್ವ ಇಲೆವೆನ್ ತಂಡ ಪ್ರಕಟ

25 Feb 2020 | 7:23 PM

 Sharesee more..
ರನ್ ಹೊಳೆ ಹರಿಸಿದರೂ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶವಿಲ್ಲ ಏಕೆ ? : ಕಪಿಲ್ ದೇವ್

ರನ್ ಹೊಳೆ ಹರಿಸಿದರೂ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶವಿಲ್ಲ ಏಕೆ ? : ಕಪಿಲ್ ದೇವ್

25 Feb 2020 | 7:03 PM

ನವದೆಹಲಿ, ಫೆ 25 (ಯುಎನ್ಐ) ಸೀಮಿತ ಓವರ್‌ಗಳ ಸ್ವರೂಪದಲ್ಲಿ ಅತ್ಯದ್ಭುತ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕೆ.ಎಲ್ ರಾಹುಲ್ ಅವರನ್ನು ಕೈ ಬಿಟ್ಟಿರುವುದನ್ನು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

 Sharesee more..