Friday, Oct 30 2020 | Time 07:57 Hrs(IST)
Sports Share

ಟಿ20 ಬ್ಲಾಸ್ಟ್‌: ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ಶಾಹೀನ್‌ ಅಫ್ರಿದಿ

ನವದೆಹಲಿ, ಸೆ 21 (ಯುಎನ್‌ಐ) ಪಾಕಿಸ್ತಾನ ತಂಡದ ವೇಗಿ ಶಾಹೀನ್ ಅಫ್ರಿದಿ ಟಿ20 ಕ್ರಿಕೆಟ್‌ ವೃತ್ತಿ ಜೀವನದ ಶ್ರೇಷ್ಠ ಸ್ಪೆಲ್‌ ಮಾಡಿದ್ದಾರೆ. 18ನೇ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಹ್ಯಾಂಪ್‌ಶೈರ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಟಿ20 ಬ್ಲಾಸ್ಟ್‌ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹ್ಯಾಂಪ್‌ಶೈರ್‌ ನಿಗದಿತ 20 ಓವರ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡು 141 ರನ್‌ಗಳನ್ನು ಗಳಿಸಿತ್ತು. ಆ ಮೂಲಕ ಮಿಡ್ಲೆಸೆಕ್ಸ್‌ ತಂಡಕ್ಕೆ 142 ರನ್‌ಗಳ ಗುರಿ ನೀಡಿತ್ತು. 18ನೇ ಓವರ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಮಾಡಿದ ಅಫ್ರಿದಿ, ಕೊನೆಯ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಅವರು 4 ಓವರ್‌ಗಳಿಗೆ 19 ರನ್‌ಗಳನ್ನು ನೀಡಿ ಒಟ್ಟು ಆರು ವಿಕೆಟ್‌ಗಳನ್ನು ಪಡೆದರು.
ಇದಕ್ಕೂ ಮುನ್ನ ಪಾಕಿಸ್ತಾನ ವೇಗಿಯು 4 ರನ್‌ ನೀಡಿ ಐದು ವಿಕೆಟ್‌ ಪಡೆದಿದ್ದು ವೃತ್ತಿ ಜೀವನದ ಶ್ರೇಷ್ಠ ಸ್ಪೆಲ್‌ ಆಗಿತ್ತು. ಭಾನುವಾರ ಅವರು 18ನೇ ಓವರ್‌ನಲ್ಲಿ ಕೊನೆಯ ನಾಲ್ಕೂ ಎಸೆತಗಳಲ್ಲಿ ಮಿಡ್ಲೆಸೆಕ್ಸ್‌ ತಂಡದ ನಾಲ್ಕೂ ಬ್ಯಾಟ್ಸ್‌ಮನ್‌ಗಳನ್ನು ಕ್ಲೀನ್‌ ಬೌಲ್ಡ್ ಮಾಡಿದ್ದು ವಿಶೇಷವಾಗಿತ್ತು. ಅಂತಿಮವಾಗಿ ಮಿಡ್ಲೆಸೆಕ್ಸ್‌ 121 ರನ್‌ಗಳಿಗೆ ಆಲೌಟ್‌ ಆಯಿತು.
ಶಾಹೀನ್‌ ಅಫ್ರಿದಿ ಪಂದ್ಯದ ಏಳನೇ ಓವರ್‌ನಲ್ಲಿ ಸ್ಟಿವಿ ಎಸ್ಕಿನಝಿ(16) ಅವರನ್ನು ಮೊದಲ ಬಲಿ ಪಡೆದರು. 14ನೇ ಓವರ್‌ಗೆ ಮರಳಿದ ಅವರು ಲ್ಯೂಕ್‌ ಹಾಲ್ಮನ್‌ (10) ಅವರ ವಿಕೆಟ್‌ ಎತ್ತಿದರು. ಆ ಮೂಲಕ ಮಿಡ್ಲೆಸೆಕ್ಸ್‌ 80 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ತನ್ನ ವೈಯಕ್ತಿಕ ಕೊನೆಯ ಓವರ್‌ ಬೌಲಿಂಗ್‌ಗೆ ಇಳಿದ ಅವರು ಮೂರನೇ ಎಸೆತದಲ್ಲಿ ಜಾನ್‌ ಸಿಮ್ಸನ್‌(48) ಅವರನ್ನು ಕ್ಲೀನ್‌ ಬೌಲ್ಡ್ ಮಾಡಿದರು. ನಂತರ, ಕ್ರಮವಾಗಿ ಸ್ಟೀವನ್‌ ಫಿನ್‌, ತಿಲ್ಲಾನ್‌ ವಲಾಲ್ಲವಿಟಾ ಹಾಗೂ ಟಿಮ್‌ ಮುರ್ತಾಗ್‌ ಶೂನ್ಯಕ್ಕೆ ಕ್ಲೀನ್‌ ಬೌಲ್ಡ್ ಮಾಡಿದರು.
ಯುಎನ್‌ಐ ಆರ್‌ಕೆ 0908
More News

ಡಿಡಿಸಿಎ ಸಭೆ ಡಿಸೆಂಬರ್ ವರೆಗೆ ಮುಂದೂಡಿಕೆ

29 Oct 2020 | 10:50 PM

 Sharesee more..
ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣ ಕೊಟ್ಟ ಕ್ಯಾಪ್ಟನ್ ಕೊಹ್ಲಿ

ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣ ಕೊಟ್ಟ ಕ್ಯಾಪ್ಟನ್ ಕೊಹ್ಲಿ

29 Oct 2020 | 9:06 PM

ಅಬುಧಾಬಿ, ಅ 29 (ಯುಎನ್‌ಐ) ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಸೋಲು ಅನುಭವಿಸಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಬೌಲರ್‌ಗಳನ್ನು ಹೊಗಳಿದ್ದಾರೆ.

 Sharesee more..