Sunday, Nov 1 2020 | Time 00:39 Hrs(IST)
business economy Share

ಡಬ್ಲ್ಯುಟಿಒ ಒತ್ತಡದಲ್ಲಿ ಶ್ರೀಮಂತ ರಾಷ್ಟ್ರಗಳನ್ನು ಮೆಚ್ಚಿಸಲು ಕೃಷಿ ಮಸೂದೆಗಳ ಅಂಗೀಕಾರ: ದಿಗ್ವಿಜಯ್ ಸಿಂಗ್ ಆರೋಪ

ಭುವನೇಶ್ವರ, ಸೆ 24 (ಯುಎನ್‌ಐ) ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯುಟಿಒ) ಒತ್ತಡದಲ್ಲಿ ಶ್ರೀಮಂತ ರಾಷ್ಟ್ರಗಳನ್ನು ಮೆಚ್ಚಿಸಲು ಕೃಷಿ ಕುರಿತ ಮಸೂದೆಗಳನ್ನು ಇತ್ತೀಚಿಗೆ ಕೊನೆಗೊಂಡ ಮುಂಗಾರು ಸಂಸತ್‍ ಅಧಿವೇಶನದಲ್ಲಿ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಮಸೂದೆಗಳನ್ನು ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಎಂದಿರುವ ಸಿಂಗ್, ಕಾಂಗ್ರೆಸ್ ಸರ್ಕಾರ
ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯುಂಟುಮಾಡುವ ಯಾವುದೇ ಒತ್ತಡಕ್ಕೆ ತಲೆಬಾಗಿರಲಿಲ್ಲ.
ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಪಡೆಯದಿದ್ದರೆ, ವ್ಯಾಪಾರಿಗಳ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಹೆಚ್ಚಿನ ಸಬ್ಸಿಡಿ ನೀಡಬಾರದು ಎಂಬ ಮಸೂದೆಯಲ್ಲಿನ ನಿಬಂಧನೆಯನ್ನು ಕಾಂಗ್ರೆಸ್ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ. ಮಸೂದೆಯ ನಿಬಂಧನೆ ಕಾನೂನುಬದ್ಧವಾಗಿಲ್ಲ. ಇದು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುವು ಮಾಡಿಕೊಟ್ಟು ಗ್ರಾಮೀಣ ಕೃಷಿ ಮಾರುಕಟ್ಟೆಯಲ್ಲಿ ಅವು ಏಕಸ್ವಾಮ್ಯ ಸಾಧಿಸಲು ಸಾಧ್ಯವಾಗುತ್ತದೆ ಎಂದು ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆದ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಯುಎನ್‍ಐ ಎಸ್ಎಲ್ಎಸ್ 2302
More News
ರಿಲಯನ್ಸ್ ಕಂಪನಿ ನಿವ್ವಳ ಲಾಭ ಶೇಕಡ 15 ರಷ್ಟು ಕುಸಿತ

ರಿಲಯನ್ಸ್ ಕಂಪನಿ ನಿವ್ವಳ ಲಾಭ ಶೇಕಡ 15 ರಷ್ಟು ಕುಸಿತ

30 Oct 2020 | 10:06 PM

ನವದೆಹಲಿ, ಅ 30 (ಯುಎನ್ಐ) ಕೊರೋನ ಕಾರಣಕ್ಕಾಗಿ ದೇಶದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿಯ ನಿವ್ವಳ ಲಾಭ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಶೇಕಡ.15ರಷ್ಟು ಕುಸಿತ ಕಂಡಿದೆ.

 Sharesee more..

ನ 9ರಂದು ವರದಿ ಸಲ್ಲಿಸಲಿರುವ ಹಣಕಾಸು ಆಯೋಗ

30 Oct 2020 | 6:41 PM

 Sharesee more..

ಸೆನ್ಸೆಕ್ಸ್: 200ಕ್ಕೂ ಹೆಚ್ಚು ಅಂಕದಿಂದ ಚೇತರಿಕೆ

30 Oct 2020 | 11:33 AM

 Sharesee more..