Wednesday, May 27 2020 | Time 03:26 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Health -Lifestyle Share

ಡೆಂಘಿ ವಿರುದ್ಧ ಅಭಿಯಾನ ; ಕಪಿಲ್ ದೇವ್ ಅವರನ್ನು ಭೇಟಿಯಾದ ಕೇಜ್ರೀವಾಲ್

ನವದೆಹಲಿ, ಸೆ 8 (ಯುಎನ್ಐ) ದೆಹಲಿಯಲ್ಲಿ ಡೆಂಘಿ ರೋಗದ ವಿರುದ್ಧ ಅಭಿಯಾನ ಆರಂಭಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅದರ ಅಂಗವಾಗಿ ಭಾನುವಾರ ಮಾಜಿ ಕ್ರಿಕೆಟ್ ನಾಯಕ ಕಪಿಲ್ ದೇವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅವರು, ಕಪಿಲ್ ದೇವ್ ಅವರ ಖಾತೆಯನ್ನೂ ಟ್ಯಾಗ್ ಮಾಡಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕಪಿಲ್ ದೇವ್ ಅವರು ಮುಂದಿನ ಭಾನುವಾರ ಮುಂಜಾನೆಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಪಿಲ್ ದೇವ್, 'ಇದೊಂದು ಬಹುದೊಡ್ಡ ಪ್ರಯತ್ನ. ಇಂತಹದೊಂದು ಜವಾಬ್ದಾರಿ ತೆಗೆದುಕೊಂಡಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಇದು ದೇಶದ ಪ್ರತಿಯೋರ್ವನ ಜವಾಬ್ದಾರಿ ಎಂಬುದು ನನ್ನ ಭಾವನೆ. ನಾವು ಪ್ರತಿ ಸಣ್ಣ ವಿಷಯದ ಕುರಿತೂ ಕಾಳಜಿ ವಹಿಸಬೇಕು. ದೆಹಲಿಯನ್ನು ಡೆಂಘಿಯಿಂದ ಪಾರು ಮಾಡೋಣ. ನಾವೆಲ್ಲರೂ ನಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ರೋಗವನ್ನು ತಡೆಗಟ್ಟುವುದಕ್ಕಿಂತ ಹೆಚ್ಚು ಮಹತ್ವದ್ದು ಯಾವುದಿರುತ್ತದೆ' ಎಂದಿದ್ದಾರೆ.
ಕಪಿಲ್ ದೇವ್ ಅವರ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿರುವ ಕೇಜ್ರೀವಾಲ್, 'ಸೆಲೆಬ್ರಿಟಿಗಳು ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ದೆಹಲಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಯೂತ್ ಐಕಾನ್ ಆಗಿರುವ ಕಪಿಲ್ ದೇವ್ ಇದಕ್ಕೆ ಬೆಂಬಲ ನೀಡಿದ್ದಾರೆ. ಇವರಿಂದ ಲಕ್ಷಾಂತರ ಜನರು ಪ್ರೇರಣೆ ಪಡೆಯುತ್ತಾರೆ ಎಂಬ ನಂಬಿಕೆಯಿದೆ' ಎಂದರು.
ಯುಎನ್ಐ ಎಸ್ಎಚ್ ಕೆಎಸ್ ವಿ 2020