Saturday, Mar 28 2020 | Time 23:36 Hrs(IST)
 • ಕೊವಿದ್‍-19: ರಾಜ್ಯದಲ್ಲಿ ಹೊಸ 12 ಪ್ರಕರಣಗಳು ದೃಢ, ಒಟ್ಟು ಸಂಖ್ಯೆ 76ಕ್ಕೆ ಏರಿಕೆ
 • ಲಾಕ್‌ಡೌನ್: ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಿರ್ಬಂಧಗಳು ಸಡಿಲ
 • ಕೊರೊನಾ ನಿರ್ಣಾಯಕ ಹಂತದಲ್ಲಿ, ತುರ್ತು ಪರಿಸ್ಥಿತಿ ಘೋಷಣೆ ಅಗತ್ಯವಿಲ್ಲ : ಅಬೆ
 • ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತ : ಆರು ಸಾವು
 • ಒಂದೇ ದಿನ 194 ಹೊಸ ಖಚಿತ ಪ್ರಕರಣ ದಾಖಲು
 • ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ
 • ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ
 • ಕೋವಿಡ್-19 ತಡೆಯಲು ಗ್ರಾಮಗಳಿಗೆ ನಿರ್ಬಂಧ; ಪಿಐಎಲ್ ಸಲ್ಲಿಕೆ
 • ಕೊರೋನಾ ಪೀಡಿತರಿಗೆ ಪರಿಹಾರ ಕೋರಿ ಪಿಐಎಲ್ ಸಲ್ಲಿಕೆ
 • ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್
 • ಕರ್ನಾಟಕದ ಕಾರ್ಮಿಕರನ್ನು ತೆರವುಗೊಳಿಸುವ ವದಂತಿ ಸುಳ್ಳು; ಗೋವಾ ಸಿಎಂ
 • ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ
 • ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳಿಗೆ ತೊಂದರೆಯಾಗದು: ಯಡಿಯೂರಪ್ಪ
 • ಕೊರೋನಾ ಭೀತಿ: 8 ಲಕ್ಷ ಲೀ ಹಾಲು ಮಾರಾಟವಾಗುತ್ತಿಲ್ಲ: ಬಾಲಚಂದ್ರ ಜಾರಕಿಹೊಳಿ
 • ಮನೆ ವಿತರಣೆಗೆ ಸಿದ್ಧವಾಗಿರಲು ಹೋಟೆಲ್ ಮತ್ತು ಸೂಪರ್ ಮಾರ್ಕೆಟ್‍ಗಳಿಗೆ ಮೈಸೂರು ಜಿಲ್ಲಾಡಳಿತ ಸೂಚನೆ
National Share

ಡೆಫ್ ಎಕ್ಸ್ ಪೋ: ರಕ್ಷಣಾ ಸಂಬಂಧ ವೃದ್ಧಿ ಕುರಿತು ಮಡಗಾಸ್ಕರ್ ರಕ್ಷಣಾ ರಾಜನಾಥ್ ಸಿಂಗ್ ಚರ್ಚೆ

ಡೆಫ್ ಎಕ್ಸ್ ಪೋ: ರಕ್ಷಣಾ ಸಂಬಂಧ ವೃದ್ಧಿ ಕುರಿತು ಮಡಗಾಸ್ಕರ್ ರಕ್ಷಣಾ ರಾಜನಾಥ್ ಸಿಂಗ್ ಚರ್ಚೆ
ಡೆಫ್ ಎಕ್ಸ್ ಪೋ: ರಕ್ಷಣಾ ಸಂಬಂಧ ವೃದ್ಧಿ ಕುರಿತು ಮಡಗಾಸ್ಕರ್ ರಕ್ಷಣಾ ರಾಜನಾಥ್ ಸಿಂಗ್ ಚರ್ಚೆ

ಲಕ್ನೋ, ಫೆ 6 (ಯುಎನ್‌ಐ) ಸಾಗರ ಭದ್ರತಾ ವಲಯದಲ್ಲಿ ಸಹಕಾರ ಬಾಂಧವ್ಯವನ್ನು ವೃದ್ಧಿಸುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಮಡಗಾಸ್ಕರ್ ವಿದೇಶಾಂಗ ಸಚಿವ ಲೆಫ್ಟಿನೆಂಟ್ ಜನರಲ್ ಲಿಯಾನ್ ಜೀನ್ ರಿಚರ್ಡ್ ರಾಕೋಟೊನಿರಿನಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಚರ್ಚೆಯ ವೇಳೆ ರಾಜನಾಥ್ ಸಿಂಗ್ ಅವರು ಸಾಗರ ಭದ್ರತಾ ಸಹಕಾರ ಸಂಬಂಧಗಳನ್ನು ವೃದ್ಧಿಸುವ ಬಗ್ಗೆ ಪ್ರತಿಪಾದಿಸಿದರು.ವ್ಯಾಪಾರ ಮತ್ತು ವಾಣಿಜ್ಯ-ವಹಿವಾಟು ಅಭಿವೃದ್ಧಿ ಹೊಂದಲು ಸುರಕ್ಷಿತ ಸಾಗರ ವಾತಾವರಣವನ್ನು ಕಲ್ಪಿಸುವ ಜವಾಬ್ದಾರಿ ಉಭಯ ದೇಶಗಳಿಗೆ ಇದೆ ಎಂದು ಅವರು ಹೇಳಿದರು.ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾರ್ಚ್ 2018 ರಲ್ಲಿ ಮಡಗಾಸ್ಕರ್‌ಗೆ ಭೇಟಿ ನೀಡಿದ್ದನ್ನು ಪ್ರತಿಪಾದಿಸಿದ ಸಿಂಗ್ ಅವರು, ಈ ಐತಿಹಾಸಿಕ ಭೇಟಿಯು ಉಭಯ ದೇಶಗಳ ನಡುವಿನ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿದೆ.ಭೇಟಿಯ ವೇಳೆ ಸಹಿ ಹಾಕಿದ ಒಪ್ಪಂದವು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರಕ್ಕೆ ಅನುವು ಮಾಡಿಕೊಡುವ ಚೌಕಟ್ಟು ಒದಗಿಸಿದೆ ಎಂದು ಅವರು ಹೇಳಿದರು.ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಉಭಯ ದೇಶಗಳ ಪರಸ್ಪರ ಹಿತಾಸಕ್ತಿಯ ವಿವಿಧ ಕ್ಷೇತ್ರಗಳನ್ನು ಅನ್ವೇಷಿಸಲು ಡೆಫ್ಎಕ್ಸ್ ಪೋ 2020 ( ರಕ್ಷಣಾ ಪ್ರದರ್ಶನ ಮೇಳ) ಎರಡೂ ದೇಶಗಳಿಗೆ ಒಂದು ವೇದಿಕೆಯನ್ನು ಒದಗಿಸಲಿದೆ ಎಂದು ರಾಜನಾಥ್ ಸಿಂಗ್ ಆಶಿಸಿದರು.ಲೆಫ್ಟಿನೆಂಟ್ ಜನರಲ್ ರಾಕೋಟೋನಿರಿನಾ ರಿಚರ್ಡ್ ತಮ್ಮ ಹೇಳಿಕೆಯಲ್ಲಿ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಭಾರತದ ದೊಡ್ಡ ಪಾತ್ರವಿದೆ ಎಂದು ಹೇಳಿದರು.ಬರುವ ಜೂನ್ 26 ರಂದು ಮಡಗಾಸ್ಕರ್‌ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸುವಂತೆ ರಾಜನಾಥ್ ಸಿಂಗ್ ಅವರಿಗೆ ರಾಕೋಟೋನಿರಿನಾ ರಿಚರ್ಡ್ ಆಹ್ವಾನಿಸಿದ್ದಾರೆ.

ಯುಎನ್ಐ ಎಸ್ಎಲ್ಎಸ್ 1426

More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..